20 years of Prabhas : ಪ್ರಭಾಸ್ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಸುಮಾರು 20 ವರ್ಷಗಳಾಗಿವೆ. ಟಾಲಿವುಡ್‌ ಹಿಟ್‌ ಸಿನಿಮಾ ʼಈಶ್ವರ್ʼ ಮೂಲಕ ಪ್ರಭಾಸ್‌ ಅಭಿಮಾನಿಗಳ ನೆಚ್ಚಿನ ನಟನಾಗಿ ಹೊರಹೊಮ್ಮಿದರು. ನಂತರ ಸ್ಟಾರ್‌ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರ ಬಾಹುಬಲಿ ಸಿನಿಮಾ ಸ್ಟಾರ್‌ಡಮ್‌ ತಂದುಕೊಟ್ಟಿತು. ಅಲ್ಲದೆ, ಪ್ಯಾನ್ ಇಂಡಿಯನ್ ಸ್ಟಾರ್ ಆಗಿ ʼವೆಂಕಟ ಸತ್ಯನಾರಾಯಣ ಪ್ರಭಾಸ್ ರಾಜು ಉಪ್ಪಲಪಾಟಿʼ ಮಿಂಚಲು ಕಾರಣವಾಯಿತು. 


COMMERCIAL BREAK
SCROLL TO CONTINUE READING

ಇದೀಗ ಪ್ರಭಾಸ್ ಅಭಿನಯದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸುತ್ತಿದ್ದು, ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಅವರ ಮುಂಬರುವ ಕೆಲವು ಚಲನಚಿತ್ರಗಳ ಲಿಸ್ಟ್‌ ಇಲ್ಲಿದೆ ನೋಡಿ.


ಇದನ್ನೂ ಓದಿ: ALERT..! ದಯವಿಟ್ಟು ಈ ವಿಡಿಯೋ ನೊಡ್ಬೇಡಿ.. ನೋಡಿದ್ರೆ ಜ್ವರ ಖಂಡಿತ ಬರುತ್ತೆ


ಸಲಾರ್ : ಸಲಾರ್ ಬಹುಭಾಷಾ ಚಿತ್ರವಾಗಿದ್ದು, ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕೆಜಿಎಫ್‌ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ. ಈ ಚಿತ್ರದಲ್ಲಿ ಶ್ರುತಿ ಹಾಸನ್, ಜಗಪತಿ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು 2023 ರ ಬೇಸಿಗೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.


ಆದಿಪುರುಷ: ಆದಿಪುರುಷ ರಾಮಾಯಣವನ್ನು ಆಧರಿಸಿದ ಮುಂಬರುವ ಭಾರತೀಯ ಮಹಾಕಾವ್ಯ ಪೌರಾಣಿಕ ಚಲನಚಿತ್ರವಾಗಿದೆ. ಪ್ರಭಾಸ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಓಂ ರಾವುತ್ ಬರೆದು ನಿರ್ದೇಶಿಸಿದ್ದಾರೆ. ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ.


ಸ್ಪಿರಿಟ್ : ಪ್ರಭಾಸ್ ಅಭಿನಯದಲ್ಲಿ ಸಂದೀಪ್ ರೆಡ್ಡಿ ವಂಗಾ ಮತ್ತು ಟಿ-ಸಿರೀಸ್‌ನ ಭೂಷಣ್ ಕುಮಾರ್ ಸಹಭಾಗಿತ್ವದಲ್ಲಿ ಸ್ಪಿರಿಟ್‌ ಸಿನಿಮಾ ನಿರ್ಮಾಣವಾಗಲಿದೆ. ಈ ಬಿಗ್‌ ಬಜೆಟ್‌ ಚಿತ್ರವು ಪ್ರಭಾಸ್‌ ಅವರ 25 ನೇ ಸಿನಿಮಾ ಆಗಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ, ಜಪಾನೀಸ್, ಚೈನೀಸ್ ಮತ್ತು ಕೊರಿಯನ್ ಸೇರಿದಂತೆ ಬಹು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಭಾಷೆಗಳಲ್ಲಿ ಚಲನಚಿತ್ರವು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.


ಇದನ್ನೂ ಓದಿ: ಮರೆಯಾಗುತ್ತಿರುವ ಕಲೆ ನೆನಪಿಸಿದ ಕಾಮಿಡಿ ಕಿಲಾಡಿಗಳು : ಕಂಪನಿ‌ ನಾಟಕ ಸ್ಕಿಟ್‌ ಸೂಪರ್‌..!


ನಿರ್ದೇಶಕ ಮಾರುತಿ ಜೊತೆ ಸಿನಿಮಾ : ನಿರ್ದೇಶಕ ಮಾರುತಿ ಅವರೊಂದಿಗಿನ ಪ್ರಭಾಸ್ ಅವರ ಚಿತ್ರವು ನವೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇದೆ ಮೊದಲ ಬಾರಿಗೆ ಮಾರುತಿ ಪ್ರಭಾಸ್‌ ಅವರಿಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. 


ಪ್ರಾಜೆಕ್ಟ್‌ ಕೆ: ಪ್ರಾಜೆಕ್ಟ್ ಕೆ ಎಂಬುದು ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ ಮುಂಬರುವ ಭಾರತೀಯ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.