ಮರೆಯಾಗುತ್ತಿರುವ ಕಲೆ ನೆನಪಿಸಿದ ಕಾಮಿಡಿ ಕಿಲಾಡಿಗಳು : ಕಂಪನಿ‌ ನಾಟಕ ಸ್ಕಿಟ್‌ ಸೂಪರ್‌..!

ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು 4 ಕರ್ನಾಟಕ ಜನತೆಗೆ ನಗುವಿನ ಹಬ್ಬದೂಟ ಉಣ ಬಡಿಸುವ ಒಂದು ಅದ್ಭುತ ಕಾರ್ಯಕ್ರಮ. ನಗುವಿನೊಂದಿಗೆ ಕನ್ನಡನಾಡಿನ ವಿಶೇಷತೆಗಳನ್ನು ಅನಾವಣಗೊಳಿಸುತ್ತದೆ. ಸದ್ಯ ಕಂಪನಿ ನಾಟಕದಲ್ಲಿ ಬರುವ ಪಾತ್ರಧಾರಿಗಳು, ಅಲ್ಲಿ ನಡೆಯುವ ಹಾಸ್ಯ ಸನ್ನಿವೇಶದ ಝಲಕ್‌ನ್ನು ಕಾಮಿಡಿ ಕಿಲಾಡಿಗಳು ಜನರ ಮುಂದೆ ಇಟ್ಟಿದ್ದಾರೆ.

Written by - Krishna N K | Last Updated : Nov 11, 2022, 02:58 PM IST
  • ಮರೆಯಾಗುತ್ತಿರುವ ಕಲೆ ನೆನಪಿಸಿದ ಕಾಮಿಡಿ ಕಿಲಾಡಿಗಳು
  • ಕಾಮಿಡಿ ಕಿಲಾಡಿಗಳು 4 ಕಂಪನಿ ನಾಟಕ ಸ್ಕಿಟ್‌ ಸೂಪರ್‌
  • ನಾಳೆ ರಾತ್ರಿ 9ಕ್ಕೆ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು-4 ಸಂಚಿಕೆಯನ್ನು ತಪ್ಪದೆ ವೀಕ್ಷಿಸಿ
ಮರೆಯಾಗುತ್ತಿರುವ ಕಲೆ ನೆನಪಿಸಿದ ಕಾಮಿಡಿ ಕಿಲಾಡಿಗಳು : ಕಂಪನಿ‌ ನಾಟಕ ಸ್ಕಿಟ್‌ ಸೂಪರ್‌..! title=

ಬೆಂಗಳೂರು : ಜನ ಮೆಚ್ಚಿನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು 4 ಕರ್ನಾಟಕ ಜನತೆಗೆ ನಗುವಿನ ಹಬ್ಬದೂಟ ಉಣ ಬಡಿಸುವ ಒಂದು ಅದ್ಭುತ ಕಾರ್ಯಕ್ರಮ. ನಗುವಿನೊಂದಿಗೆ ಕನ್ನಡನಾಡಿನ ವಿಶೇಷತೆಗಳನ್ನು ಅನಾವಣಗೊಳಿಸುತ್ತದೆ. ಸದ್ಯ ಕಂಪನಿ ನಾಟಕದಲ್ಲಿ ಬರುವ ಪಾತ್ರಧಾರಿಗಳು, ಅಲ್ಲಿ ನಡೆಯುವ ಹಾಸ್ಯ ಸನ್ನಿವೇಶದ ಝಲಕ್‌ನ್ನು ಕಾಮಿಡಿ ಕಿಲಾಡಿಗಳು ಜನರ ಮುಂದೆ ಇಟ್ಟಿದ್ದಾರೆ.

ಹೌದು.. ಕಂಪನಿ ನಾಟಕಗಳಿಗೆ ಕರ್ನಾಟಕದಲ್ಲಿ ಬಹಳ ವಿಶೇಷತೆ ಇದೆ. ಹಬ್ಬ ಹರಿದಿನ, ಜಾತ್ರೆಗಳಲ್ಲಿ ಮಾಡುವ ಕಂಪನಿ ನಾಟಕಗಳು ಒಂದು ಹಿಟ್‌ ಸಿನಿಮಾಗೆ ಸಮ. ಅದ್ದೂರಿ ವೇದಿಕೆ, ಜಗಮಗಿಸುವ ಲೈಟ್ಸ್‌ ಊರಿಗೆ ಕಳೆ ಬಂದಂತೆ. ಈ ನಾಟಕಗಳನ್ನು ನೋಡಲು ಸುತ್ತ ಮುತ್ತಲಿನ ಊರಿನ ಜನರು ಸಹ ನೆರೆದಿರುತ್ತಾರೆ. ಅಲ್ಲದೆ, ನಾಟಕದಲ್ಲಿ ಅಭಿನಯಿಸುವ ಮಹಿಳಾ ಪಾತ್ರಧಾರಿಗಳಿಗೆ ಹಳ್ಳಿಗಳಲ್ಲಿ ಸಿನಿಮಾ ಹಿರೋಯಿನ್ಸ್‌ಗಿಂತಲೂ ಬಲು ಬೇಡಿಕೆ. ಒಂದು ರೀತಿ ಅವರು ಕೂಡ ಸ್ಟಾರ್‌ ನಟರಿಗೆ ಸಮ ಅಂದ್ರೂ ತಪ್ಪಾಗಲ್ಲ.

ಇದನ್ನೂ ಓದಿ: ‘ಅಪ್ಪು’ ಸರ್ ನಮ್ಮ ಎಮೋಷನ್...’ಡಿ ಬಾಸ್’ ನನ್ನ ಅಣ್ಣ ಅಂದ್ರು ಪ್ರಜ್ವಲ್ ದೇವರಾಜ್

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

ಇನ್ನು ನಾಟಕದಲ್ಲಿ ವಿಲನ್‌ನ ಖಡಕ್‌ ಡೈಲಾಗ್‌, ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತ ಕೇಳಿದ್ರೆ ನೋಡುಗರು ʼಎನ್‌ ಭಯಂಕರ ಕೆಟ್ಟ ಅದಾನೋ ಇವಾʼ ಎನ್ನುವಂತಿರುತ್ತದೆ. ಅಲ್ಲದೆ, ಹಾಸ್ಯ ಕಲಾವಿದರಂತೂ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ನಾಟಕದ ಮಧ್ಯ ನಾಯಕ ಮತ್ತು ನಾಯಕಿಯ ಡಾನ್ಸ್‌ ಸೂಪರ್‌, ಇನ್ನು ಊರ ಗೌಡ್ರು ಸೇರಿದಂತೆ ಕಲಾಭಿಮಾನಿಗಳು ಡ್ಯಾನ್ಸ್‌ರ್‌ನ ನೃತ್ಯ ಮೆಚ್ಚಿ ಕಾಣಿಕೆಯನ್ನು ಸಹ ಕೊಡ್ತಾರೆ. ಇವೆಲ್ಲವನ್ನು ಕಣ್ಣಾರೆ ನೋಡಿ ನಿಮಗೆ ತುಂಬಾ ದಿನಗಳು ಕಳೆದಿದ್ರೆ ಬೇಜಾರಾಗ್ಬೇಡಿ. ನಾಳೆ ರಾತ್ರಿ 9ಕ್ಕೆ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು-4 ಸಂಚಿಕೆಯನ್ನು ತಪ್ಪದೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News