ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿಯ ಅತ್ಯುತ್ತಮ ಚಿತ್ರ ಎಂಬ ಖ್ಯಾತಿಗೆ 'ಶುದ್ಧಿ' ಸಿನಿಮಾ ಪಾತ್ರವಾಗಿದೆ. 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು 'ಮಾರ್ಚ್-22' ಚಿತ್ರ ತನ್ನದಾಗಿಸಿಕೊಂಡಿದ್ದರೆ,ಮೂರನೇ ಅತ್ಯುತ್ತಮ ಚಿತ್ರವಾಗಿ ಪಡ್ಡಾಯಿ ಆಯ್ಕೆಯಾಗಿದೆ. 


COMMERCIAL BREAK
SCROLL TO CONTINUE READING

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಅತ್ಯುತ್ತಮ ಮನರಂಜನೆ ಚಿತ್ರವಾಗಿ ಆಯ್ಕೆಯಾಗಿದ್ದರೆ, ಹಿರಿಯ ನಟಿ ತಾರಾ ಮನೋಜ್ಞವಾಗಿ ಅಭಿನಯಿಸಿರುವ 'ಹೆಬ್ಬೆಟ್‌ ರಾಮಕ್ಕ' ಸಾಮಾಜಿಕ ಕಳಕಳಿಯ ಚಿತ್ರವಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ:


  • ಅತ್ಯುತ್ತಮ ನಟ - ವಿಶ್ವತ್ ನಾಯ್ಕ(ಮಂಜರಿ)

  • ಅತ್ಯುತ್ತಮ ನಟಿ-ತಾರಾ ಅನುರಾಧಾ (ಹೆಬ್ಬೆಟ್ ರಾಮಕ್ಕ)

  • ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್

  • ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಕಟಕ)

  • ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ)

  • ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)

  • ಸಮಾಜಿಕ ಕಾಳಜಿಯ ಚಿತ್ರ-ಹೆಬ್ಬಟ್ ರಾಮಕ್ಕ

  • ಅತ್ಯುತ್ತಮ ಮನರಂಜನಾ ಚಿತ್ರ- ರಾಜಕುಮಾರ

  • ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ಸೋಫಿಯಾ(ಕೊಂಕಣಿ)

  • ಅತ್ಯುತ್ತಮ ಮಕ್ಕಳ ಚಿತ್ರ- ಎಳೆಯರು ನಾವು ಗೆಳೆಯರು

  • ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಅಯನ

  • ಅತ್ಯುತ್ತಮ ಚಿತ್ರಕಥೆ- ವೆಂಕಟ್ ಭಾರದ್ವಾಜ್ (ಕೆಂಪಿರ್ವೆ)

  • ಅತ್ಯುತ್ತಮ ಸಂಭಾಷಣೆ- ಎಸ್.ಜಿ.ಸಿದ್ದರಾಮಯ್ಯ(ಹೆಬ್ಬೆಟ್ ರಾಮಕ್ಕ)

  • ಅತ್ಯುತ್ತಮ ಛಾಯಾಗ್ರಹಣ- ಸಂತೋಶ್ ರೈ ಪತಾಜೆ, (ಚಮಕ್)

  • ಅತ್ಯುತ್ತಮ ಸಂಗೀತ ನಿರ್ದೇಶನ- ವಿ.ಹರಿಕೃಷ್ಣ (ರಾಜಕುಮಾರ)

  • ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಮಫ್ತಿ)