ZEE Picchar: ಜೀ ಪಿಚ್ಚರ್ ಕನ್ನಡ ಪಿಚ್ಚರ್ ಪ್ರಪಂಚಕ್ಕೆ 3 ವರ್ಷದ ಹಿಂದೆ ಕಾಲಿಟ್ಟು ಇಂದು ತನ್ನ ಯಶಸ್ಸಿನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ವಾಹಿನಿಯಾಗಿದೆ. ಕಿರುತೆರೆಯ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದ ಭಾಗವಾಗಿರುವ ಜೀ ಪಿಚ್ಚರ್ 3ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ . 


COMMERCIAL BREAK
SCROLL TO CONTINUE READING

ಹಲವು ಪೈಪೋಟಿಗಳ ನಡುವೆ ಅತಿ ಕಡಿಮೆ ಅವಧಿಯಲ್ಲೇ ವೀಕ್ಷಕರಿಗೆ ಹತ್ತಿರವಾಗಿರುವ ವಾಹಿನಿ ವಿಭಿನ್ನ, ವಿಶಿಷ್ಟ ಸಿನಿಮಾಗಳ ಮೂಲಕ ಹಿಟ್ ದಿನದ ಫೀಲಿಂಗ್ ನೀಡುತ್ತಿದೆ ಎನ್ನುವುದು ಕನ್ನಡಿಗರ ಅಭಿಪ್ರಾಯವಾಗಿದೆ . ದಿನದಿಂದ ದಿನಕ್ಕೆ ಅತಿಹೆಚ್ಚು ಜಿಆರ್ ಪಿ ಗಳಿಸುತ್ತಿರುವ ಜೀ ಪಿಚ್ಚರ್ ನಂಬರ್ 1 ಸ್ಥಾನದತ್ತ ಹೆಜ್ಜೆ ಇಡುತ್ತಿದೆ. ಕೇವಲ ಸಿನಿಮಾಗಷ್ಟೇ ಸೀಮಿತವಾಗಿರದೇ ಮಾಹಿತಿಯನ್ನು ನೀಡುತ್ತಿದೆ. 


ಇದನ್ನೂ ಓದಿ: Virat Kohli-Anushka Sharma: ʼನನ್ನ ಪತ್ನಿಯೇ ನನಗೆ ಸ್ಫೂರ್ತಿʼ - ವಿರಾಟ್ ಕೊಹ್ಲಿ


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ನೇರ ಪ್ರಸಾರ ಮಾಡುವುದರೊಂದಿಗೆ ಚಿತ್ರರಂಗದೊಂದಿಗೆ ತನಗಿರುವ ನಂಟನ್ನು ಗಟ್ಟಿಗೊಳಿಸಿಕೊಂಡಿದೆ . ಅಷ್ಟೇ ಅಲ್ಲದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮುಖಾಂತರ ಸಿನಿರಸಿಕರ ಗಮನ ಸೆಳೆಯುತ್ತಿದೆ ಮತ್ತು ಅತ್ಯುತ್ತಮ ಗುಣಮಟ್ಟದ  ಡಬ್ಬಿಂಗ್ ಸಿನಿಮಾಗಳನ್ನು ಪ್ರಸಾರ ಮಾಡುತ್ತಲೇ ನೋಡುಗರಿಗೆ ಹಿಟ್ ದಿನದ ಫೀಲಿಂಗ್ ನೀಡುವಲ್ಲಿ ಯಶಸ್ವಿಯಾಗಿದೆ. 


ಇದನ್ನೂ ಓದಿ: Kantara 2: ಮಾರ್ಚ್ ತಿಂಗಳು ಶುರು ರಿಷಬ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ್ರಾ..?


ಈ ಅಭೂತಪೂರ್ವ ಯಶಸ್ಸು ನೀಡಿರುವ ಕನ್ನಡಿಗರು  ಸಿನಿಮಾ ಪ್ರೇಮಿಗಳಿಗೆ ಈ ಮೂಲಕ ಧನ್ಯವಾದ ತಿಳಿಸುತ್ತಿದ್ದು ಇದೀಗ ವಾಹಿನಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ಸನ್ ಡೈರೆಕ್ಟ್ ಎಲ್ ಸಿ ಎನ್ ನಂಬರ್ 280 ನಲ್ಲೂ ಲಭ್ಯವಿದೆ. ಇನ್ನು ಮುಂದೆ ಅದೇ ಪ್ರೀತಿ , ವಿಶ್ವಾಸದಿಂದ ಹಾರೈಸುತ್ತಾರೆ ಎಂದು ವಾಹಿನಿಯ ಆಶಯ ವ್ಯಕ್ತಪಡಿಸಿದೆ. ವೀಕ್ಷಕರ ಪರವಾಗಿ ಜೀ ಪಿಚ್ಚರ್ ಗೆ 3ನೇ ವಾರ್ಷಿಕೋತ್ಸವ ಶುಭಾಶಯಗಳು ತಿಳಿಸಲಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.