Kantara 2: ಮಾರ್ಚ್ ತಿಂಗಳು ಶುರು ರಿಷಬ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ್ರಾ..?

Kantara 2:  ಕಾಂತಾರ ಪಾರ್ಟ್ 2 ಕೆಲಸ ಶುರುವಾಗಿದ್ದು ಮತ್ತೊಂದು ಇತಿಹಾಸ ಸೃಷ್ಟಿಸಲು ಚಿತ್ರತಂಡ ತಯಾರಿ ನಡೆಸಿದೆ.ಈಗ ರಿಷಬ್ ಶೆಟ್ಟಿಗೆ ಜವಾಬ್ದಾರಿ ಕೂಡ ಹೆಚ್ಚಾಗಿದೆ

Written by - YASHODHA POOJARI | Last Updated : Mar 1, 2023, 01:17 PM IST
  • ಕಾಂತಾರ ಪಾರ್ಟ್ 2 ಕೆಲಸ ಶುರುವಾಗಿದೆ
  • ಕನ್ನಡನಾಡಿನ ಹೆಮ್ಮೆಯ ಪುತ್ರ ಅಂದ್ರೆ ರಿಷಬ್
  • ಸಿನಿಮಾವೇ ಉಸಿರು ಎಂದ ರಿಷಬ್ ಶೆಟ್ಟಿ
Kantara 2: ಮಾರ್ಚ್ ತಿಂಗಳು ಶುರು ರಿಷಬ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ್ರಾ..? title=

Kantara 2 : ಒಂದು "ಕಾಂತಾರ" ಸೃಷ್ಟಿಸಿದ ಹವಾ ಯಪ್ಪಾ ಯಪ್ಪಾ.. ಕರ್ನಾಟಕದ ಕುಂದಾಪುರದಿಂದ ಕ್ಯಾಲಿಫೋರ್ನಿಯಾದ ವರೆಗೂ ಇವತ್ತಿಗೂ ಸೌಂಡ್ ಮಾಡ್ತಿರೋದು ಕಾಂತಾರ ಸಿನಿಮಾ ಮ್ಯಾಟರ್, ಯೆಸ್ ಕಾಂತಾರ ಸಿನಿಮಾನ ಎಷ್ಟು ಸಲ ನೋಡಿದ್ರೂ ಸಾಲಲ್ಲ ಬಿಡಿ.ಮತ್ತೇ ಮತ್ತೇ ನೋಡೋ ಬಯಕೆ ಸೃಷ್ಟಿಯಾಗುತ್ತಲೇ ಇರುತ್ತೆ. ಪುಟ್ಟ ಮಕ್ಕಳಿಂದ ವಯಸ್ಸಾದವರು ಕೂಡ ಸಿನಿಮಾ ಅಂದ್ರೆ ಇದಪ್ಪ ಅಂತಾರೆ. ಸೋ ಈಗ ವಿಚಾರ ಏನಪ್ಪಾ ಅಂದ್ರೆ ಮಾರ್ಚ್ ತಿಂಗಳಿಗೆ ಎಂಟ್ರಿ ಕೊಟ್ಟಾಯಿತು.

ಇತ್ತೀಚಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ನಟ,ನಿರ್ದೇಶಕ ರಿಷಬ್ ಶೆಟ್ಟಿ ಮಾರ್ಚ್ ನಿಂದ ನನ್ನ ಮೊಬೈಲ್ ಸ್ವಿಚ್ ಆಫ್ ಆಗುತ್ತೆ.ಯಾಕಂದ್ರೆ ಜನ ಕಾಯುತ್ತಿರೋ ಕಾಂತಾರ ಪಾರ್ಟ್ 2 ಕೆಲಸ ಶುರು ಮಾಡೋದಾಗಿ ಹೇಳಿಕೊಂಡಿದ್ರು.ಅಂತೆಯೇ ಇದೀಗ ಸಿಕ್ಕಿರೋ ಮಾಹಿತಿ ಪ್ರಕಾರ ಕಾಂತಾರ ಪಾರ್ಟ್ 2 ಕೆಲಸ ಶುರುವಾಗಿದ್ದು ಮತ್ತೊಂದು ಇತಿಹಾಸ ಸೃಷ್ಟಿಸಲು ಚಿತ್ರತಂಡ ತಯಾರಿ ನಡೆಸಿದೆ.ಈಗ ರಿಷಬ್ ಶೆಟ್ಟಿಗೆ ಜವಾಬ್ದಾರಿ ಕೂಡ ಹೆಚ್ಚಾಗಿದೆ.ಯಾಕಂದ್ರೆ ಜನ ಇದೀಗ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಕೊಡುತ್ತಿದ್ದಾರೆ ಬಿಗ್ ಸರ್ಪ್ರೈಸ್ ?

ಆ ನಿರೀಕ್ಷೆಯನ್ನ ಫುಲ್ ಫಿಲ್ ಮಾಡೋದಕ್ಕೆ ರಿಷಬ್ ಶೆಟ್ಟಿ ತುಂಬಾ ಪ್ಲಾನ್ ಮಾಡಿ ಕೆಲಸ ಮಾಡುತ್ತಿದ್ದಾರೆ.ಅದೇನೇ ಇರಲಿ ನಮ್ಮ ಕನ್ನಡನಾಡಿನ ಹೆಮ್ಮೆಯ ಪುತ್ರ ಅಂದ್ರೆ ರಿಷಬ್ ಶೆಟ್ಟಿ.ಒಳ್ಳೆ ಕಂಟೆಂಟ್ ಇರೋ ಸಿನಿಮಾಗಳನ್ನೇ ಉಡುಗೊರೆಯಾಗಿ ಕೊಟ್ಟು ನಮ್ಮನ್ನ ರಂಜಿಸಿದ್ದಾರೆ.ಸಿನಿಮಾ ಅಂತ  ಬಂದಾಗ ರಿಷಬ್ ಎಲ್ಲವನ್ನೂ ಮರೆಯುತ್ತಾರೆ ಅನ್ನೋ ಮಾತನ್ನ ಅವರನ್ನ ಹತ್ತಿರದಿಂದ ಬಲ್ಲವರು ಹೇಳಿಕೊಂಡಿದ್ದಾರೆ.

ಸೋ ರಿಷಬ್ ಶೆಟ್ಟಿ ಮುಂದಿನ ಸಿನಿಮಾ ಜರ್ನಿಗೆ ನಮ್ಮ ಕಡೆಯಿಂದಲೂ ಅಲ್ ದಿ ಬೆಸ್ಟ್. ಸಿನಿಮಾನೇ ನನ್ನ ಉಸಿರು ಅಂತ ಸಿನಿಮಾಗಾಗಿ ಜೀವಿಸುತ್ತಿರೋ ರಿಷಬ್ ಶೆಟ್ಟಿ ಕಾಂತಾರ ಪಾರ್ಟ್ 2 ಮೂಲಕ ಇಡೀ ವಿಶ್ವಕ್ಕೆ ಮತ್ತೊಂದು ದೊಡ್ಡ ಮ್ಯಾಜಿಕ್ ಸಿನಿಮಾ ಕೊಡುವಂತೆ ಆ ದೈವ ಶಕ್ತಿ ಕೊಡಲಿ ಅಂತ ಅವರ ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:Kiccha Sudeep : ಕನ್ನಡ ಸಿನಿಮಾ ಇಂಡಸ್ಟ್ರಿ ಕಿಚ್ಚ ಸುದೀಪ್ ಪಾಲಿಗೆ ದೇವಸ್ಥಾನ.!

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News