Ajith Kumar: ತಮಿಳು ಮಾತ್ರವಲ್ಲದೇ ಪರ ಭಾಷೆಗಳಲ್ಲಿ ಖ್ಯಾತಿ ಪಡೆದಿರುವ ನಟ ಅಜಿತ್ ಕುಮಾರ್‌ ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ತಮ್ಮ ನಟನೆಯಿಂದಲೇ ಎಲ್ಲರ ಮನಗೆದ್ದಿರುವ ಇವರು ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ನೀಡಲು ಸಜ್ಜಾಗಿದ್ದಾರೆ.  


COMMERCIAL BREAK
SCROLL TO CONTINUE READING

ಜಗಮಲ್ಲನಿಗೆ ಇಂದು 52ನೇ ಹುಟ್ಟುಹಬ್ಬ ಸಂಭ್ರಮ. ಹಿಟ್ ಸಿನಿಮಾ ನೀಡುವ ಮೂಲಕ ಅಭಿಮಾನಿಗಳಲ್ಲಿ ಮನೆಮಾತಾಗಿದ್ದಾರೆ. ಇದೀಗ ಇವರ ಹೊಸ ಸಿನಿಮಾಕ್ಕೆ ಕೆಲವು ದಿನಗಳಿಂದ ಶೀರ್ಷಿಕೆ ಇಡದೇ ಕೂತುಹಲ ಮೂಡಿಸಿತ್ತು. ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲು ಚಿತ್ರ ತಂಡ ಮುಂದಾಗಿದೆ.


ಇದನ್ನೂ ಓದಿ: Karnataka Assembly Election: ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಮುಂದಾದ ಸ್ಯಾಂಡಲ್‌ವುಡ್ ಸ್ಟಾರ್ಸ್, ಯಾರ್ಯಾರು ಗೊತ್ತಾ?


ಸದ್ಯ ಇದೀಗ ಹೊಸ ಚಿತ್ರಕ್ಕೆ ಎಕೆ 62 ಶೀರ್ಷಿಕೆ ನೀಡಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.  ಲೈಕಾ ಪ್ರೊಡಕ್ಷನ್ಸ್ ವತಿಯಿಂದ ಚಿತ್ರ ನಿರ್ಮಾಣವಾಗುತ್ತಿದೆ. ಅನಿರುದ್ಧ್ ರವಿಚಂದ್ರನ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.


ಇದನ್ನೂ ಓದಿ: Video Viral: ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆ‌ಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್


ಅದರ ಜೊತೆಯಲ್ಲಿ ಇನ್ನೊಂದು ವಿಟಾ ಮುಯರ್ಚ್ಚಿ' ಎಂಬ ಸಿನಿಮಾ ತಯಾರಿಕೆಯಲ್ಲಿ ನಟ ಅಜಿತ್‌ ಬ್ಯೂಸಿ ಇದ್ದಾರೆ. ಏಗನ್,ಅಸಲ್, ವೀರಂ,ಜಗಮಲ್ಲ, ಯೆನ್ನೈ ಅರಿಂದಾಲ್,ವೇದಾಲಂ ವೇದಾಲಂ,ವಿವೇಗಂ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಇವರ ಹುಟ್ಟುಹಬ್ಬಕ್ಕೆ ತಮಿಳು ಸಿನಿ ತಾರೆಯರು, ಸೇರಿದಂತೆ ಪರ ಭಾಷೆಯ ಸೆಲೆಬ್ರೆಟಿಗಳು ಹಾಗೂ ಸಾವಿರಾರು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.