Video Viral: ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆ‌ಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್

ViralVideo: ವೀಣಾ ಗಾಯಕಿ ಶ್ರೀವಾಣಿಯ ಎಂಬುವವರು ವೀಣೆಯ ನುಡಿಸುವವುದನ್ನೇ ಅಭ್ಯಾಸಿಕೊಂಡಿದ್ದಾರೆ.  ಸದ್ಯ ಇದೀಗ ಹಿಟ್‌ ಸಿನಿಮಾವಾದ ಕಾಂತಾರ ಚಿತ್ರದ "ವರಾಹ ರೂಪಂ" ಹಾಡಿಗೆವೀಣೆ ನುಡಿಸಿದ್ದಾರೆ ಕನ್ನಡಿಗರು ಫುಲ್‌ ಫಿದ ಆಗಿದ್ದಾರೆ.

Written by - Zee Kannada News Desk | Last Updated : Apr 30, 2023, 02:13 PM IST
  • ಶ್ರೀವಾಣಿಯ ವೀಣೆ‌ಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು
  • ವೀಣೆಯಲ್ಲಿ ಡೋರೇಮನ್‌ನ ಶೀರ್ಷಿಕೆ ಗೀತೆಯನ್ನು ನುಡಿಸಿದ ಶ್ರೀವಾಣಿ
  • ಹಲವು ಭಾಷೆಯ ಸಿನಿಮಾ ಹಾಡಿಗೆ ಕೈಚಳಕ ತೋರಿಸಿರುವ ಗಾಯಕಿ
Video Viral: ಖ್ಯಾತ ವೀಣಾ ಗಾಯಕಿ ಶ್ರೀವಾಣಿಯ ವೀಣೆ‌ಯಲ್ಲಿ ಮೂಡಿತು ಕಾಂತಾರ ಸಿನಿಮಾ ಹಾಡು: ವಿಡಿಯೋ ವೈರಲ್ title=

ಹೈದರಾಬಾದ್: ಇತ್ತೀಚೀನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾ ಬಳಕೆ ಹೆಚ್ಚಾಗಿನಿಂದ ಜಾನಪದ ಕಲೆಗಳು ಮರೆಯಾಗುತ್ತಿವೆ.. ಪ್ರತಿಯೊಬ್ಬರು ಟ್ರೇಂಡ್‌ನಲ್ಲಿರುವ ರೀಲ್ಸ್‌ ನೋಡಿ ಕಲಾ ಕಳೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ ವೀಣಾ ಗಾಯಕಿ ಶ್ರೀವಾಣಿಯ ಎಂಬುವವರು ವೀಣೆಯ ನುಡಿಸುವವುದನ್ನೇ ಅಭ್ಯಾಸಿಕೊಂಡಿದ್ದಾರೆ. ಈಕೆಯ ವೀಣಾ ನುಡಿಗೆ ತೆಲುಗು ಮಾತ್ರವಲ್ಲದೇ ಎಲ್ಲಾ ಭಾಷೆಯಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. 

ಸಿನಿಮಾ ಹಾಡು ಸೇರಿದಂತೆ ಟ್ರೆಂಡ್‌ ನಲ್ಲಿರುವ ಸಾಂಗ್‌ ಗಳಿಗೆ ವೀಣೆ ನುಡಿ ಮೂಲಕ ಮನಸ್ಸಿಗೆ ಮುದ ನೀಡುತ್ತಾರೆ. ಹಿಟ್‌ ಸಿನಿಮಾವಾದ ಕಾಂತಾರ ಚಿತ್ರದ "ವರಾಹ ರೂಪಂ" ಹಾಡಿಗೆ ವೀಣೆ ನುಡಿಸಿದ್ದಾರೆ ಕನ್ನಡಿಗರು ಫುಲ್‌ ಫಿದ ಆಗಿದ್ದಾರೆ.

ಇದನ್ನೂ ಓದಿ: Pragathi Rishab Shetty: ಸಿಂಗಾರ ಸಿರಿಯೆ ಅಂಗಾಲಿನಲೆ ಬಂಗಾರ ಅಗೆವ ಮಾಯೆ...50 ವರ್ಷದ ಹಳೆಯ ಸೀರೆಯುಟ್ಟು ಕಂಗೊಳಿಸಿದ ಕಾಂತಾರ ರಾಣಿ!

ಅಷ್ಟೇ ಅಲ್ಲದೇ ಕಾರ್ಟೂನ್ ನೋಡಿ ಏಂಜಾಯ್‌ ಮಾಡುವವರೇ ಹೆಚ್ಚು ಹೀಗಿರುವಾಗ ಶ್ರೀವಾಣಿ ತಮ್ಮ ವೀಣೆಯಲ್ಲಿ ಡೋರೇಮನ್‌ನ ಶೀರ್ಷಿಕೆ ಗೀತೆಯನ್ನು ನುಡಿಸುತ್ತಿರುವುದು ಫುಲ್‌ ವೈರಲ್ ಆಗಿದೆ. ಸಿನಿಮಾ ಹಾಡಲ್ಲದೇ ಕಾರ್ಟೂನ್ ವಿಡಿಯೋ ವೀಣೆ ನುಡಿಗೆ ಸಣ್ಣ ಮಕ್ಕಳು ಏಂಜಾಯ್‌ ಮಾಡಿದ್ದಾರೆ. ಕಾರ್ಟೂನ್ ವಿಡಿಯೋ ವೀಣೆ ನುಡಿಗೆ 13,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಅನೇಕ ಮಂದಿ ವೀಕ್ಷಿಸಿದ್ದಾರೆ. ಈಕೆಯ ವೀಣಾ ವಾದ್ಯಕ್ಕೆ ನೆಟ್ಟಿಗರು ಅಭಿಮಾನ ವ್ಯಕ್ತ ಪಡಿಸಿದ್ದಾರೆ. 

ಖ್ಯಾತ ವೀಣಾ ಗಾಯಕಿ ಶ್ರೀವಾಣಿ ಯಾರು? 

ಶ್ರೀವಾಣಿ ಮೂಲತಃ ಹೈದರಾಬಾದ್ ನವರು. ತಿರುಪತಿಯ ಶ್ರೀ ವೆಂಕಟೇಶ್ವರ ಸಂಗೀತ ಮತ್ತು ನೃತ್ಯ ಕಾಲೇಜ್‌ನಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ವೀಣೆಯಲ್ಲಿ ರಾಗಗಳನ್ನು ಕಲಿಯುವುದು  ಅವರ ಕನಸ್ಸಾಗಿತ್ತು. ಆರಂಭದಲ್ಲಿ ವೀಣಾ ಶ್ರೀವಾಣಿ ತಮ್ಮ ವೀಣೆಯ ಒಂದು ವಿಡಿಯೋಗಳನ್ನು  ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್  ಮಾಡಿದ ಕೆಲವೇ ದಿನಗಳಲ್ಲಿ ಹೆಸರುಗಳಿಸಿದ್ದಾರೆ. ತೆಲುಗು,ಕನ್ನಡ ಸೇರಿದಂತೆಯೇ ದೇಶದ ಹಲವು ಭಾಷೆಯ ಸಿನಿಮಾ ಹಾಡುಗಳಿಗೆ ವೀಣೆ ವಾದ್ಯವನ್ನು ಕಾರ್ಯಕ್ರಮಗಳಲ್ಲಿ ನುಡಿಸಿದ್ದಾರೆ. ವೀಣಾ ಬಾಲ್ಯದಿಂದಲೂ ಸರಸ್ವತಿ ವೀಣೆಯನ್ನು ನುಡಿಸಲು ಪ್ರಾರಂಭಿಸಿದರು.

ಇದನ್ನೂ ಓದಿ: Most Controversial Outfit: ವಿಚಿತ್ರ ಉಡುಗೆಯಲ್ಲಿ ಊರ್ಫಿಯನ್ನು ಮೀರಿಸಿದ ಕೇಟಿ ಪೆರ್ರಿ, ಈಕೆಯನ್ನು ನೀವು ನೋಡಿದರೇ ದಂಗ್ ಆಗೋದ್‌ ಗ್ಯಾರಂಟಿ !

ಹಾಗೂ ಬಾಲಿವುಡ್ ನ  ಕೃತಿ ಸನೋನ್ ನೃತ್ಯದ  ಪರಮ ಸುಂದರಿ ಹಾಡಿಗೂ ತಮ್ಮ ಕೈಚಳಕ ತೋರಿಸಿದ್ದರು. ವೀಣಾ ವಾದಕರಾಗಿ ಶಾಸ್ತ್ರೀಯ ಸಂಗೀತಗಾರ, ಟಿವಿ ನಿರೂಪಕಿಯು ಆಗಿದ್ದಾರೆ.  ಸದ್ಯ ಇದೀಗ ತಮ್ಮ ವೀಣೆ ನುಡಿಯಿಂದಲೇ ಸಖತ್‌ ಫೇಮಸ್‌ ಆಗಿದ್ದಾರೆ. 

ಶ್ರೀವಾಣಿಯವರು ಮಾ ಟಿವಿ, ಸಾಕ್ಷಿಟಿವಿ, ಇ ಟಿವಿಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ದೂರದರ್ಶನ ನಿರೂಪಕರಾಗಿದರಿಂದ ಉತ್ತಮ ಅತ್ಯುತ್ತಮ ನಿರೂಪಕಿ ಪ್ರಶಸ್ತಿ ಜೊತೆಗೆ , ಉತ್ತಮ ವೀಣೆ ವಾದ್ಯ ಗಾಯಕಿ ಎಂಬ ಪ್ರಶಸ್ತಿ, ಮಹಿಳಾ ಸಾಧಕಿ ಪ್ರಶಸ್ತಿ ಗಳಿಸಿದ್ದಾರೆ. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News