ರಕ್ಷಿತ್‌ ಶೆಟ್ಟಿ & ಟೀಂ ಯಾವುದೇ ಸಿನಿಮಾ ಮಾಡಿದ್ದರೂ ಅದರಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ತಾವು ಮಾಡಿದ ಸಿನಿಮಾ ಗೆಲುವು ಸಾಧಿಸಿ ಬಾಕ್ಸ್‌ ಆಫಿಸ್‌ ಕೊಳ್ಳೆ ಹೊಡೆದರೆ ಮುಗಿದೇ ಹೋಯಿತು. ಅದರ ಲಾಭದ ಪಾಲನ್ನು ಸಿನಿಮಾಗಾಗಿ ದುಡಿದ ಎಲ್ಲರಿಗೂ ಶೇರ್‌ ಮಾಡುತ್ತಾರೆ. ಈ ವಾಡಿಕೆ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿತ್ತು. ಈ ಮೊದಲು 'ಕಿರಿಕ್‌ ಪಾರ್ಟಿ' ಸಿನಿಮಾ ಲಾಭವನ್ನೂ ಶೇರ್‌ ಮಾಡಿತ್ತು ರಕ್ಷಿತ್‌ ಶೆಟ್ಟಿ ತಂಡ. ಇದೀಗ '777 ಚಾರ್ಲಿ'  150 ಕೋಟಿ ಕ್ಲಬ್‌ ಸೇರಿದ್ದು, ಇದರಲ್ಲೂ ಸಿನಿಮಾ ತಂಡಕ್ಕೆ ಶೇರ್‌ ನೀಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನವಗ್ರಹಗಳ ಶಾಂತಿಗೆ ಸುಗಂಧ ದ್ರವ್ಯ ಬಳಕೆ, ಯಾವ ಸುಗಂಧಿ ಬಳಕೆ ಯಾವ ಗ್ರಹದೋಷದಿಂದ ಮುಕ್ತಿ ನೀಡುತ್ತದೆ


'777 ಚಾರ್ಲಿ' 150 ಕೋಟಿ ಗಳಿಸಿದ್ದು, ಈ ಪೈಕಿ ಸಿನಿಮಾ ನಿರ್ಮಾಪಕರ ಕೈಗೆ ಸುಮಾರು 90 ಕೋಟಿ ರೂಪಾಯಿಯಷ್ಟು ಹಣ ಸೇರಿದೆ. ಈ ದುಡ್ಡಲ್ಲಿ 5% ಹಣವನ್ನು ಬೀದಿ ನಾಯಿಗಳ ಪೋಷಣೆಗೆ ಮೀಸಲು ಇಟ್ಟಿದ್ದಾರೆ ರಕ್ಷಿತ್‌ ಶೆಟ್ಟಿ. ಇದರ ಜೊತೆಗೆ 10% ಹಣವನ್ನ '777 ಚಾರ್ಲಿ' ಸಿನಿಮಾಗೆ ದುಡಿದ ಸಿಬ್ಬಂದಿಗೆ ನೀಡಿದ್ದಾರೆ. ಇದು ಸಿನಿಮಾಗಾಗಿ ದುಡಿದ ಕಾರ್ಮಿಕರಿಗೆ ಹೊಸ ಹುರುಪು ನೀಡೋದು ಪಕ್ಕಾ.


200 ಕೋಟಿ ಕ್ಲಬ್..?
'ಕೆಜಿಎಫ್‌-2' ಬಳಿಕ ಸ್ಯಾಂಡಲ್‌ವುಡ್‌ನ ಮತ್ತೊಂದು ಚಿತ್ರ ಜಗತ್ತಿನಾದ್ಯಂತ ಅಬ್ಬರದ ಪ್ರದರ್ಶನ ಕಾಣುತ್ತಿದ್ದು, ರಕ್ಷಿತ್‌ ಶೆಟ್ಟಿ ನಟನೆಯ '777 ಚಾರ್ಲಿ' ಇದೀಗ 150 ಕೋಟಿ ಕ್ಲಬ್‌ ಸೇರಿದೆ. ಈ ಮೂಲಕ ಮತ್ತೊಂದು ಕನ್ನಡ ಸಿನಿಮಾ 200 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ. ರಕ್ಷಿತ್‌ & ಟೀಂ ವರ್ಲ್ಡ್ ಬಾಕ್ಸ್‌ ಆಫಿಸ್‌ನಲ್ಲಿ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡಿದ್ದಾರೆ.


ಸೋಲು-ಗೆಲುವು
'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಸಿನಿಮಾ ಹಿಟ್‌ ಆದ ಬಳಿಕ ರಕ್ಷಿತ್‌ ಶೆಟ್ಟಿ ಹಿಂದಿರುಗಿ ನೋಡಲೇ ಇಲ್ಲ. ಆದರೆ 'ಅವನೇ ಶ್ರೀಮನ್ನಾರಾಯಣ' ಸೋಲಿನ ಬಳಿಕ ರಕ್ಷಿತ್ ಗೆಲುವಿನ ನಿರೀಕ್ಷೆಯಲ್ಲಿದ್ದರು. '777 ಚಾರ್ಲಿ' ಶೂಟಿಂಗ್‌ ಶುರು ಆದಾಗಿನಿಂದಲೂ ದೊಡ್ಡ ಸದ್ದು ಮಾಡುತ್ತಿತ್ತು. '777 ಚಾರ್ಲಿ' ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿತ್ತು. ಇದೀಗ ಆ ಕುತೂಹಲವೇ  ಸಿನಿಮಾಗೆ ದೊಡ್ಡ ಗೆಲುವು ತಂದುಕೊಟ್ಟಿದೆ.


ಇದನ್ನೂ ಓದಿ: Changes In Voter ID: ವೋಟರ್ ಐಡಿಯಲ್ಲಿ ವಿಳಾಸ ಬದಲಾಯಿಸುವ ಸುಲಭ ವಿಧಾನ


ಒಟ್ಟಾರೆ ಹೇಳುವುದಾದರೆ '777 ಚಾರ್ಲಿ' ಕನ್ನಡ ಸಿನಿಮಾ ಜಗತ್ತಿನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಹಾಗೇ '777 ಚಾರ್ಲಿ' ಪಾರ್ಟ್‌ 2 ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾಯುತ್ತಿದ್ದಾರೆ. ಯಾಕಂದ್ರೆ '777 ಚಾರ್ಲಿ' ಕ್ಲೈಮ್ಯಾಕ್ಸ್‌ ಅಂತಹ ದೊಡ್ಡ ಹಿಂಟ್‌ ಕೊಟ್ಟಿದ್ದು, '777 ಚಾರ್ಲಿ' ಪಾರ್ಟ್‌ 1 ನೋಡಿ ಇಷ್ಟಪಟ್ಟಿರುವ ಕೋಟಿ ಕೋಟಿ ಭಾರತೀಯರು ಇದೀಗ ಪಾರ್ಟ್‌ 2 ಬೇಕು ಅಂತಿದ್ದಾರೆ. ಆದರೆ ಈವರೆಗೂ '777 ಚಾರ್ಲಿ' ಚಿತ್ರತಂಡ ಈ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ