ಅಭಿಮಾನಿಗಳ ಅಪ್ಪು, ಡಾ.ಪುನೀತ್‌ ರಾಜ್‌ಕುಮಾರ್‌ ಇವರು ಕರುನಾಡಿನ ಆಸ್ತಿ. ಬರೀ ಕರುನಾಡು ಅಷ್ಟೇ ಅಲ್ಲ ನಮ್ಮ ದೇಶದ ಸ್ವತ್ತು. ಇವತ್ತಿಗೂ ಅಪ್ಪು ನಡೆದಾಡಿದ ನೆಲದಲ್ಲಿ ನಾವೀದ್ದೀವಿ ಅನ್ನೋ ಹೆಮ್ಮೆ ನಮಗಿದೆ. ಅಪ್ಪು ನಮ್ಮನ್ನಗಲಿ ಇವತ್ತಿಗೆ ಭರ್ತಿ 9 ತಿಂಗಳುಗಳೇ ಕಳೆದಿದೆ. ಮರೆತೆನೆರಂದರೂ ಮರೆಯಲು ಸಾಧ್ಯವಾಗದ ನೆನಪುಗಳು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: PubGಗೆ ಪರ್ಯಾಯವಾಗಿ ಬಂದ BGMI ಗೇಮ್ ಭಾರತದಲ್ಲಿ ಬ್ಯಾನ್: ಕಾರಣ ಏನು?


ಭೂಮಿ ಮೇಲೆ ಸುಮಾರು 46 ವರುಷಗಳ ಕಾಲ ನಡೆದಾಡಿದ ದೇವರು ಅಂದರೆ ಅದು ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಸರ್.‌ ಡಾ. ಪುನೀತ್‌ ರಾಜಕುಮಾರ್‌ ನಮಗೆಲ್ಲಾ ಹೃದಯಕ್ಕೆ ಮಾಸದ ನೋವನ್ನ ಕೊಟ್ಟು ಹೇಳದೆ ಕೇಳದೆ ಮರೆಯಾಗಿ ಹೋದರು. ಆದ್ರೆ ಅವ್ರು ನಮ್ಮೊಂದಿಗೆ ಸದಾ ಇದ್ದಾರೆ ಅನ್ನೋ ಆಶಾಭಾವನೆಯೊಂದಿಗೆ ನಾವೆಲ್ಲರೂ ಇವತ್ತಿಗೂ ಉಸಿರಾಡುತ್ತಿದ್ದೇವೆ. ಜೊತೆ ಭದ್ರವಾಗಿದ್ದೇವೆ ಅನ್ನೋ ಭಾವನೆ ನಮ್ಮನ್ನ ಸದಾ ಕಾಡುತ್ತಲೇ ಇರುತ್ತೆ.


ಪ್ರತಿದಿನ ಪ್ರತಿಕ್ಷಣ ಡಾ.ಪುನೀತ್‌ ರಾಜ್‌ಕುಮಾರ್‌ ಅವರ ಹೆಸರು ನಮ್ಮ ಬಾಯಲ್ಲಿ ಬಂದೇ ಬರುತ್ತೆ. ಯಾಕಂದ್ರೆ ಭೂಮಿ ಮೇಲೆ ಇದ್ದಷ್ಟು ದಿನ ರಾಜಕುಮಾರನಂತೆ ಬಾಳಿ ಬದುಕಿ ಒಂದಷ್ಟು ಆದರ್ಶಗಳನ್ನ ಭೂಮಿ ಮೇಲಿನ ಜನಕ್ಕೆ ಧಾರೆ ಎರೆದು ಕಣ್ಮೆರೆಯಾದವರು. ತಾವು ಮಾಡೋ ಕೆಲಸ, ಸಹಾಯ ಇನ್ನೋಬ್ಬರಿಗೆ ಗೊತ್ತಾಗಬಾರದು ಎಂದು ಕೊನೆಯವರೆಗೂ ಯಾರಿಗೂ ತಿಳಿಸದೆ ಹೋದ ಪರಮಾತ್ಮ ಅಂದ್ರೆ ಅದು ನಮ್ಮ ಪ್ರೀತಿಯ ಅಪ್ಪು.


ಅಕ್ಟೋಬರ್‌ 29 ಶುಕ್ರವಾರ 2021 ಅಂದ್ರೆ ಇವತ್ತಿಗೆ ಭರ್ತಿ 9 ತಿಂಗಳ ಹಿಂದೆ. ಮುದ್ದಿನ ಅಣ್ಣ ಶಿವಣ್ಣನ ಬಹುನಿರೀಕ್ಷೆಯ ಸಿನಿಮಾ ಭಜರಂಗಿ 2 ತೆರೆಕಂಡಿತ್ತು. ಪ್ರತಿಯೊಬ್ಬ ಅಭಿಮಾನಿಯೂ ಭಜರಂಗಿ 2 ಸಿನಿಮಾವನ್ನ ಕಣ್ತುಂಬಿಕೊಳ್ಳಲು ಚಿತ್ರಮಂದಿರದಲ್ಲಿ ಕುಳಿತಿದ್ದರು. ಬರಸಿಡಿಲಿನಂತೆ ಬಂದ ಆ ಸುದ್ದಿಯನ್ನ ಯಾರೂ ಕೂಡ ನಂಬದಾದ್ರು. ಯಾಕಂದ್ರೆ ಆವತ್ತು ಬೆಟ್ಟದ ಹೂವನ್ನ ದೇವರು ಇಷ್ಟ ಪಟ್ಟು ಕಿತ್ತುಕೊಂಡಿದ್ದರು.


ಈ ಸುದ್ದಿ ನಿಜಾನಾ ಸುಳ್ಳಾ ಅನ್ನೋದನ್ನ ನಂಬೋ ಹೊತ್ತಿಗೆ  ಅಪ್ಪು ಇನ್ನಿಲ್ಲ ಅನ್ನೋ ಸುದ್ದಿ ಬರಸಿಡಿಲಿನಂತೆ ಬಡೆಯಿತು. ಇದನ್ನ ಯಾರೂ ಕೂಡ ಒಪ್ಪಲು ರೆಡಿ ಇರಲಿಲ್ಲ. ಆದ್ರೂ ಒಪ್ಪಲೇಬೇಕಾದ ಅನಿವಾರ್ಯವಿತ್ತು. ಯೆಸ್‌ ಪುನೀತ್‌ ಇಲ್ಲದ ಕರುನಾಡಿಗೆ ಭರ್ತಿ 9 ತಿಂಗಳಾಯಿತು.


ಇದನ್ನೂ ಓದಿ: ಕರೆಂಟ್ ಇಲ್ಲದಿದ್ದರೂ 4 ಗಂಟೆಗಳ ಕಾಲ ಉರಿಯುತ್ತದೆ ಈ ಇನ್ವರ್ಟರ್ ಬಲ್ಬ್ ..!


ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ. ನಮ್ಮೊಂದಿಗೆ ಸದಾ ಇದ್ದಾರೆ. ದೇವರಂತೆ ನಮ್ಮನ್ನ ಕಾಪಾಡುತ್ತಿದ್ದಾರೆ ಅನ್ನೋದು ಮಾತ್ರ ಅಷ್ಟೇ ಸತ್ಯ. ಅಪ್ಪು ನಟನೆಯ ಕೊನೆಯ ಸಾಕ್ಷ್ಯ ಚಿತ್ರ ಕೆಲವೇ ದಿನಗಳಲ್ಲಿ ರಿಲೀಸ್‌ ಆಗುತ್ತೆ. ಅವ್ರ ಹೆಸರು ಶಾಶ್ವತವಾಗುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ಧಾರಿ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.