ʼಐರಾವತೇಶ್ವರ ದೇವಾಲಯ'. ಇದು ತಮಿಳುನಾಡಿನ ಕುಂಭಕೋಣಂ ಬಳಿಯ ದಾರಾಸುರಂನಲ್ಲಿದೆ. ಈ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯೆಂದು ಘೋಷಿಸಿದೆ. ಇದು 12 ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ನಿರ್ಮಿಸಲಾದ ಹಿಂದೂ ದೇವಾಲಯವಾಗಿದೆ. ಐರಾವತೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿ ಶಿವನನ್ನು ಐರಾವತೇಶ್ವರ ಎಂದು ಕರೆಯಲಾಗುತ್ತದೆ. ದೇವತೆಗಳ ರಾಜನಾದ ಇಂದ್ರನ ಬಿಳಿ ಆನೆ ಐರಾವತದಿಂದ ಈ ದೇವಾಲಯದಲ್ಲಿ ಶಿವನನ್ನು ಪೂಜಿಸಲಾಯಿತು ಎಂದು ನಂಬಲಾಗಿದೆ. ಹೀಗಾಗಿಯೇ ಇದನ್ನು ಐರಾವತ ಹೆಸರಿನಿಂದ ಕರೆಯಲಾಗುತ್ತದೆ.
ಇದನ್ನೂ ಓದಿ: ತ್ವಚೆಯ ಸೌಂದರ್ಯ ಹೆಚ್ಚಿಸಲು ದಾಳಿಂಬೆ ಸಿಪ್ಪೆಯನ್ನು ಈ ರೀತಿ ಬಳಸಿ
ದೇವಾಲಯದ ವಾಸ್ತುಶಿಲ್ಪ:
ಈ ದೇವಾಲಯದ ದೊಡ್ಡ ವೈಶಿಷ್ಟ್ಯವೆಂದರೆ ಇಲ್ಲಿನ ಮೆಟ್ಟಿಲುಗಳಿಂದ ಕೇಳಿಬರುವ ಸಂಗೀತದ ಮಾಧುರ್ಯ. ಇದರಿಂದಾಗಿ ಈ ದೇವಾಲಯವು ವಿಭಿನ್ನವಾಗಿದೆ. ಈ ದೇವಾಲಯವು ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಜೊತೆಗೆ ಪ್ರಾಚೀನ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ದೇವಾಲಯದ ಆಕಾರ ಮತ್ತು ಗೋಡೆಗಳ ಮೇಲೆ ಕೆತ್ತಿದ ವರ್ಣಚಿತ್ರಗಳು ಬಹಳಷ್ಟು ಜನರನ್ನು ಆಕರ್ಷಿಸುತ್ತವೆ.
ದ್ರಾವಿಡ ಶೈಲಿಯ ದೇವಾಲಯ:
ಈ ದೇವಾಲಯವನ್ನು ಕೂಡ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪುರಾತನ ದೇವಾಲಯದಲ್ಲಿ ನೀವು ರಥದ ರಚನೆಯನ್ನು ಸಹ ನೋಡಬಹುದು. ವೈದಿಕ ಮತ್ತು ಪೌರಾಣಿಕ ದೇವತೆಗಳಾದ ಇಂದ್ರ, ಅಗ್ನಿ, ವರುಣ, ವಾಯು, ಬ್ರಹ್ಮ, ಸೂರ್ಯ, ವಿಷ್ಣು, ಸಪ್ತಮಾತೃಕೆ, ದುರ್ಗಾ, ಸರಸ್ವತಿ, ಲಕ್ಷ್ಮಿ, ಗಂಗಾ, ಯಮುನಾ ಚಿತ್ರಗಳು ಇಲ್ಲಿ ಕಾಣುತ್ತದೆ.
ಸಂಗೀತದ ಮೆಟ್ಟಿಲುಗಳು:
ಈ ದೇವಾಲಯದ ದೊಡ್ಡ ವೈಶಿಷ್ಟ್ಯವೆಂದರೆ ಇಲ್ಲಿರುವ ಮೆಟ್ಟಿಲುಗಳು. ದೇವಾಲಯದ ಪ್ರವೇಶ ದ್ವಾರದಲ್ಲಿ ಕಲ್ಲಿನ ಮೆಟ್ಟಿಲುಗಳಿದ್ದು, ಅದರ ಪ್ರತಿ ಹೆಜ್ಜೆಯಲ್ಲೂ ವಿಭಿನ್ನವಾದ ಶಬ್ದ ಹೊರಬರುತ್ತದೆ. ಈ ಮೆಟ್ಟಿಲುಗಳ ಮೂಲಕ ನೀವು ಸಂಗೀತದ ಏಳು ಸ್ವರಗಳನ್ನು ಕೇಳಬಹುದು. ಮೆಟ್ಟಿಲುಗಳ ಮೇಲೆ ನಡೆದರೂ ರಾಗ ಕೇಳುತ್ತದೆ.
ಇದನ್ನೂ ಓದಿ: ಇಡಿ ತನಿಖೆಯ ಮಧ್ಯೆಯೇ ಅರ್ಪಿತಾ ಮುಖರ್ಜಿ ಅವರ 4 ಐಷಾರಾಮಿ ವಾಹನಗಳು ನಾಪತ್ತೆ
ದೇವಾಲಯಕ್ಕಿದೆ ಇತಿಹಾಸ:
ಐರಾವತ ಆನೆಯು ಬಿಳಿ ಬಣ್ಣದ್ದಾಗಿದೆ ಎಂದು ಹಿಂದೂ ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ದೂರ್ವಾಸ ಋಷಿಯ ಶಾಪದಿಂದಾಗಿ ಆನೆಯ ಬಣ್ಣ ಬದಲಾಯಿತಂತೆ. ಹೀಗಾಗಿ ಆ ಶಾಪದಿಂದ ವಿಮುಕ್ತಿ ಪಡೆಯಬೇಕೆಂದರೆ ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಬೇಕು ಎಂದು ಸೂಚಿಸಲಾಗುತ್ತದೆ. ಹೀಗಾಗಿ ಇಲ್ಲಿ ಸ್ನಾನ ಮಾಡಿದ ಬಳಿಕ ಮರಳಿ ಬಿಳಿ ಬಣ್ಣದಿಂದ ಐರಾವತ ಕಂಗೊಳಿಸುತ್ತದೆ. ಹೀಗೆಂದು ದೇವಾಲಯದಲ್ಲಿ ಕಂಡುಬರುವ ಅನೇಕ ಶಾಸನಗಳು ಹೇಳುತ್ತವೆ. ಗೋಪುರದ ಬಳಿ ಇರುವ ಮತ್ತೊಂದು ಶಾಸನವು ಕಲ್ಯಾಣಿಯಿಂದ ಮೂರ್ತಿಯನ್ನು ತರಲಾಯಿತು ಎಂದು ಹೇಳುತ್ತದೆ. ಈ ಶಾಸನವನ್ನು ರಾಜಾಧಿರಾಜ ಚೋಳ I ಕಲ್ಯಾಣಪುರ ಎಂದು ಹೆಸರಿಸಿದ್ದನು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.