ಇದೇ ಸೋಮವಾರದಿಂದ ಶುರುವಾಗ್ತಿದೆ ಹೊಚ್ಚ ಹೊಸ ಧಾರವಾಹಿ “ಶಾಂತಿನಿವಾಸ”
Shantinivas Serial: ಹಲಾವಾರು ಚಲನ ಚಿತ್ರಗಳನ್ನು ಹಾಗು ಧಾರಾವಾಹಿಗಳನ್ನು ನಿರ್ದೇಶಿಸಿರುವ ಎಸ್. ಗೋವಿಂದ್ ರವರು ಶಾಂತಿನಿವಾಸವನ್ನು ನಿರ್ದೇಶಿಸುವುದರ ಜೊತೆಗೆ, ನಿರ್ಮಾಣದ ಜಾವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
Shantinivas: ಇದು ಬರೀ ಒಂದು ಹೆಸರಲ್ಲ... ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು, ಗೋವರ್ಧನರಾಯರ ಮುದ್ದಿನ ಸೊಸೆ, ಅವರೇ ಹೇಳುವಂತೆ ಕುಲದೇವತೆ, ಭಾಮಿನಿಯ ಸೊಸೆ, ಸುಶಾಂತನ ಮುದ್ದಿನ ಮಡದಿ, ಸಿದ್ದಾರ್ಥನ ನಾದಿನಿ, ಸಾಧನಾಳ ತಂಗಿ, ಸುಕೃತಾಳ ಅತ್ತಿಗೆ, ವರ್ಷಾಳ ಮುದ್ದು ಚಿಕ್ಕಮ್ಮ, ರಾಘವನ ಹೆತ್ತಮ್ಮ. ಮನೆ ಕೆಲಸದಾಕೆ ರತ್ನಮ್ಮಳ ಅಘೋಷಿತ ಮಗಳು, ಒಟ್ಟಿನಲ್ಲಿ ಆ ಮನೆಯ... ನಂದಾದೀಪ...ನೀಲಾಂಜನ.... ಪ್ರತಿಯೊಬ್ಬರ ಮನಸ್ಸನ್ನುಅರಿತು.. ಅವರವರ ಭಾವನೆಗಳಿಗೆ ಬೆರೆತು, ಅವರ ಬೇಕು ಬೇಡಗಳನ್ನು ಅವರು ಕೇಳುವುದಕ್ಕೆ ಮುಂಚೆಯೇ... ಅವರ ಮುಂದೆ ಇಡುವ ಇಷ್ಟ ದೇವತೆ... ಅಷ್ಟೇನೂ ಓದು ಬರಹ ಕಲಿಯದ ಶಾಂತಿ, ಸಂಸ್ಕಾರದಲ್ಲಿ, ಅತಿಥಿ ಸತ್ಕಾರದಲ್ಲಿ, ಹುಟ್ಟಿನಿಂದಲೇ ಪದವೀಧರೆ... ಶಾಂತಿ ನಿವಾಸದ ಸೊಸೆಯಾಗಿ ಬಂದರೂ ಸಹ.. ತನ್ನ ಮಲತಾಯಿ ಯಶೋಧಾಳನ್ನು ಮರೆಯದ ಮಮತಾಮಯಿ...
ಇಂದು ಮಹಿಳೆ ಮನೆಯ ಹೊರಗೂ ಒಳಗೂ ದುಡಿಯುತ್ತಿದ್ದಾಳೆ... ಹಾಗೆ ಮನೆಯೊಳಗೆ ದಣಿವರಿಯದೆ ದುಡಿಯುವ ಗೃಹಿಣಿಯರ ಮೊದಲ ಸಾಲಿನಲ್ಲಿ ನಿಲ್ಲುವ ಅಜಾತಶತ್ರು ನಮ್ಮ ಶಾಂತಿ... ಜಗತ್ತಿನಲ್ಲಿ... ಎಲ್ಲರಿಗೂ ಶತ್ರುಗಳು ಇರಲೇಬೇಕಲ್ಲವೇ.... ಹಾಗೇ ಶಾಂತಿಗೂ ಒಬ್ಬಳು ಶತ್ರು ಇದ್ದಾಳೆ... ಅವಳೇ ಮಂಥರ... ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ...ಜೈಲಿನಲ್ಲಿ ಇದ್ದಷ್ಟು ದಿನವೂ... ಶಾಂತಿಯ ಮೇಲಿನ ಸೇಡು ತೀರಿಸಿಕೊಳ್ಳುವುದೇ ಅವಳು ಪಠಿಸಿದ ಮೂಲ ಮಂತ್ರ... ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದ ಮಂಥರ, ತನ್ನ ಗೆಳತಿ ಗಗನಾಳೊಂದಿಗೆ... ಶಾಂತಿಯನ್ನು ಹುಡುಕಲು ಆರಂಭಿಸುತ್ತಾಳೆ...
ಹತ್ತು ಹಲವು ಪ್ರಯತ್ನಗಳ ನಂತರ... ತಾನು ಹುಡುಕುತ್ತಿರುವ ಶಾಂತಿಯ ಭೇಟಿಯಾಗುತ್ತದೆ... ಆದರೆ ಶಾಂತಿ... ತಾನೇ ಕಟ್ಟಿಕೊಂಡಿರುವ... ಪ್ರೀತಿ, ವಾತ್ಸಲ್ಯ, ಮಮಕಾರ, ಮತ್ತು ನಂಬಿಕೆ ಎಂಬ ನಾಲ್ಕು ಸುತ್ತಿನ ಕೋಟೆಯಲ್ಲಿ ನೆಮ್ಮದಿಯಾಗಿರುವುದನ್ನ ಕಂಡು ರೋಷಾ ವೇಷದಿಂದ ಕುದಿಯುತ್ತಾಳೆ ಮಂಥರ... ಹೇಗಾದರೂ ಮಾಡಿ ತಾನು ಆ ಕೋಟೆಯೊಳಗೆ ಪ್ರವೇಶಿಸಬೇಕೆಂಬ ಸಂಚು ಹೂಡುತ್ತಾಳೆ... ಆ ಸಂಚಿನ ಪ್ರಕಾರವೇ... ನಿಧಾನವಾಗಿ... ಶಾಂತಿ ನಿವಾಸದ ಒಳಗೆ ಕಾಲಡಿ ಇಡುತ್ತಾಳೆ... ಆದರೆ ತನ್ನ ವಿರುದ್ಧ ಸೇಡಿಗಾಗಿ ಹಾತುರೆಯುತ್ತಿರುವ.. ಮಂಥರಾಳ ಬಗ್ಗೆಯಾಗಲಿ... ಅವಳ ಉದ್ದೇಶದ ಬಗ್ಗೆಯಾಗಲಿ... ಏನೊಂದೂ ಅರಿಯದ ಶಾಂತಿ... ಅವಳನ್ನು ತನ್ನ ಕುಟುಂಬದಲ್ಲೊಬ್ಬಳಾಗಿ... ಅದೇ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾಳೆ... ಮಂಥರಾಳ ಬಗ್ಗೆ ಕಿಂಚಿತ್ ಅನುಮಾನ ಬಂದು ಒಂದಿಬ್ಬರು ಶಾಂತಿಯನ್ನು ಪರೋಕ್ಷವಾಗಿ ಎಚ್ಚರಿಸಿದರೂ... ನಸುನಗುತ್ತಾ ಅದನ್ನು ಅಲ್ಲಗಳೆಯುತ್ತಾಳೆ ಶಾಂತಿ...
ಅದನ್ನರಿತ ಮಂಥರ ಮನೆಯವರ ಮುಖಾಂತರವೇ ತನ್ನ ಕುತಂತ್ರ ಯೋಜನೆಯನ್ನ ರೂಪಿಸುತ್ತಾಳೆ... ಹಾಗಾದರೆ ಆ ಯೋಜನೆ ಏನು. .? ಸೇಡಿನ ಹಕ್ಕಿಯಾಗಿ ಜೈಲಿನಿಂದ ಹೊರಬಂದ ಮಂಥರಾಳಿಂದ ಶಾಂತಿಗಾದ ತೊಂದರೆ ಯಾವುದು...? ಸ್ಪಟಿಕದಷ್ಟೇ ನಿಷ್ಕಲ್ಮಶವಾದ ಮನಸ್ಸುಳ್ಳ ಶಾಂತಿಯ ಬದುಕಿನಲ್ಲಿ ಮುಂದೇನಾಯ್ತು....?
ಶಾಂತಿ ನಿವಾಸಕ್ಕೆ ಎದುರಾದ ತೊಂದರೆಯನ್ನು ಶಾಂತಿ ಹೇಗೆ ನಿಭಾಯಿಸಿ ಗೆಲ್ಲುತ್ತಾಳೆ....? ತನ್ನ ಮೂಲ ಅಸ್ತ್ರವಾದ ಸಹನೆಯನ್ನೇ ಬಳಸಿ ಶಾಂತಿ ಮಂಥರಾಳ ಸೇಡಿನ ಯುದ್ಧದಲ್ಲಿ ಜಯಶೀಲೆಯಾಗ್ತಾಳಾ? ಹೀಗೆ ಕುತೂಹಲಕಾರಿ ಕಥಾಹಂದರವುಳ್ಳ... ರೋಚಕ ತಿರುವುಗಳ.. ಪ್ರತಿ ಕಂತಿನಲ್ಲೂ.. ಕುತೂಹಲ ಮೂಡಿಸುವ.. ಧಾರಾವಾಹಿ ʻಶಾಂತಿನಿವಾಸʼ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಶಾಂತಿನಿವಾಸ ಧಾರಾವಾಹಿಯ ತಂಡದ ಪರಿಚಯ ಮಾಡಿಕೊಳ್ಳುವುದಾದರೆ; ಹಲಾವಾರು ಚಲನ ಚಿತ್ರಗಳನ್ನು ಹಾಗು ಧಾರಾವಾಹಿಗಳನ್ನು ನಿರ್ದೇಶಿಸಿರುವ ಎಸ್. ಗೋವಿಂದ್ ರವರು ಶಾಂತಿನಿವಾಸವನ್ನು ನಿರ್ದೇಶಿಸುವುದರ ಜೊತೆಗೆ, ನಿರ್ಮಾಣದ ಜಾವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಕನ್ನಡದ ಹಿರಿತೆರೆ ಹಾಗು ಕಿರುತೆರೆಯಾ ಪ್ರತಿಭಾನ್ವಿರ ತಾರಾಭಳಗವೇ ಇದೆ. ಕನ್ನಡ ಚಲನಚಿತ್ರೊದ್ಯಮ ಕಂಡ ಉತ್ಕೃಷ್ಟ ನಟರಲ್ಲಿ ಒಬ್ಬರಾದ ಶ್ರೀ ಮುಖ್ಯಮಂತ್ರಿ ಚಂದ್ರು ರವರು ನಾಯಕಿ ಶಾಂತಿಯ ಮಾವನಾಗಿ, ಶಾಂತಿನಿವಾಸದ ನಿರೂಪಕರಾಗಿ ಅಭಿನಯಿಸಿದ್ದಾರೆ.
ಇದನ್ನೂ ಓದಿ-ಅನ್ಯ ಧರ್ಮದ ಯುವಕನನ್ನು ಮದುವೆಯಾಗಿರುವುದು ಇದೇ ಕಾರಣಕ್ಕೆ !ಇಷ್ಟು ದಿನಗಳ ಬಳಿಕ ಸತ್ಯ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ
ಕನ್ನಡ ಕಿರಿತೆರೆಯ ಸಿಂಪಲ್ ಸುಂದರಿ, ನಂದಿನಿ ಧಾರಾವಾಹಿಯ ಮೂಲಕ ಕರ್ನಾಟಕದ ಮನೆ ಮಗಳಾಗಿದ್ದ ನಿತ್ಯಾರಾಮ್ ಐದು ವರ್ಷಗಳ ನಂತರ ನಿಮ್ಮ ಮುಂದೆ ಮತ್ತೆ ಶಾಂತಿನಿವಾಸದ ಶಾಂತಿಯಾಗಿ, ತಾಳ್ಮೆಯ ಪ್ರತಿರೂಪವಾಗಿ ಬರುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಖಳನಟಿ ಪಾತ್ರಗಳಿಗಳಿಗೆ ತನ್ನದೇ ಆದ ವಿಶೇಷ ಛಾಪು ಮೂಡಿಸುವುದರ ಜೊತೆ ಮನೆಮಾತಾಗಿರುವ ನಟಿ ಪ್ರಿಯಾಂಕಾ ಶಾಂತಿನಿವಾಸದಲ್ಲಿ ಅಲ್ಲೋಲ ಕಲ್ಲೋಲ ಶೃಷ್ಟಿಸಲು ಬರುತ್ತಿದ್ದಾರೆ. ಶಾಂತಿಯ ಪತಿಯಾಗಿ ಕಿರುತೆರೆಯ ಖ್ಯಾತ ನಟ ಅರ್ಜುನ್ ಯೋಗಿ, ಅವರ ಅಣ್ಣ ಅತ್ತಿಗೆಯಾಗಿ ಕಾದಂಬರಿ ಧಾರಾವಾಹಿ ಖ್ಯಾತಿಯಾ ವಿಶ್ವಾಸ್ ಭಾರಾದ್ವಾಜ್ ಮತ್ತು ಇಳಾವಿಟ್ಲ ಹದಿನೈದು ವರ್ಷಗಳ ನಂತರ ಮತ್ತೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷ ಪಾತ್ರದಲ್ಲಿ ಕನ್ನಡದ ಹಿರಿಯ ನಟಿ ಅಭಿನಯ ಅವರು ಶಾಂತಿಯ ಶ್ರೇಯೋಭಿಲಾಷಿಯಾಗಿ ಬರುತ್ತಿದ್ದಾರೆ. ಇನ್ನುಳಿದಂತೆ ಚಂದ್ರಕಲಾ ಮೋಹನ್, ಕೀರ್ತಿ ವೆಂಕಟೇಶ್, ಶಿವಾನಿ ಇನ್ನಿತರ ತಾರಾಬಳಗ ಇದೆ. ಕತೆ ಚಿತ್ರಕತೆಯನ್ನು ಕಿರುತೆರೆಯ ಅನುಭವಿ ಹಾಗು ಹಿರಿಯ ಬರಹಗಾರರಾದ ಶ್ರೀ ಮುತ್ತು ಸೆಲ್ವಮ್ ರವರು ಬರೆದಿದ್ದಾರೆ. ಶ್ರೀಕಾಂತ್ ಸಂಭಾಷಣೆ, ರುದ್ರಮುನಿ ಬೆಳೆಗೆರೆಯವರ ಛಾಯಾಗ್ರಹಣ ಹಾಗು ಅಂಬರೀಶ್ ಲೋನಾರಿ ಅವರ ಸಂಕಲನ ಶಾಂತಿನಿವಾಸ ಧಾರಾವಾಹಿಗಿದೆ. ಜುಲೈ 22 ರಿಂದ ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8:30 ಕ್ಕೆ ಪ್ರಸಾರವಾಗಲಿದೆ. ತಪ್ಪದೇ ನಿಮ್ಮ ಮನೆಮಗಳು ಶಾಂತಿಯನ್ನು ಬರಮಾಡಿಕೊಳ್ಳಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.