ವೈಯಕ್ತಿಕ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕ್ಲಾಸ್ ತೆಗೆದುಕೊಂಡ ಕಿರಿಕ್ ಕೀರ್ತಿ ..!
Kirik Kirthi : ಕಿರಿಕ್ ಕೀರ್ತಿ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕೆಲ ದಿನಗಳ ಹಿಂದೆ ಕೀರ್ತಿ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳಿಂದ ಡಿಪ್ರೆಷನ್ಗೆ ಹೋಗಿದ್ದಾಗಿ ತಾವೇ ಹೇಳಿಕೊಂಡಿದ್ದರು. ಕೀರ್ತಿಯವರನ್ನು ಹೆಂಡತಿ ದೂರ ಮಾಡಿ ಹೋಗಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ. ಇದೀಗ ಸ್ವತಃ ಕಿರಿಕ್ ಕೀರ್ತಿ ಇನ್ಸ್ಟಾಗ್ರಾಂ ಲೈವ್ ಬಂದು ಸುಳ್ಳು ಸುದ್ದಿ ಹಬ್ಬಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಿರಿಕ್ ಕೀರ್ತಿ : "ನಮಸ್ಕಾರ.. ನಾನು ನಿಮ್ಮ ಕಿರಿಕ್ ಕೀರ್ತಿ. ಅಪ್ಪಾ ಸೋಷಿಯಲ್ ಮೀಡಿಯಾ ಹೀರೋಗಳೇ ದಯವಿಟ್ಟು ನಮಗೆ ಬದುಕಲು ಬಿಡಿ. ಕೈ ಮುಗಿದು ಕೇಳಿಕೊಳ್ಳುತ್ತೇನೆ. ಯಾಕೆ ನಮಗೆ ಟಾರ್ಚರ್ ಕೊಡ್ತಿರಾ? ನಮ್ಮ ಜೀವನದಲ್ಲಿ ಏನಾಗಿದೆ ಏನಾಗಿಲ್ಲ ಎಂಬುದರ ಬಗ್ಗೆ ನಿಮಗೆ ಗೊತ್ತಿಲ್ಲ. ನಮಗೆ ಕ್ಲಾರಿಟಿ ಇಲ್ಲ ಅಂದ್ಮೇಲೆ ನಿಮಗೆ ಹೇಗೆ ಕ್ಲಾರಿಟಿ ಸಿಗುತ್ತದೆ? ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬ ಅರಿವು ನಮ್ಮ ಕುಟುಂಬಕ್ಕೆ ಇಲ್ಲ. ಏನೋ ಇರುತ್ತೆ. ವೈಯಕ್ತಿಕ ಜೀವನ ಪ್ರತಿಯೊಬ್ಬರಿಗೂ ಇರುತ್ತೆ. ನಿಮಗೆ ಬೇಕಾದ ರೀತಿಯಲ್ಲಿ ಕಲ್ಪಿಸಿಕೊಂಡು ಹೀಗಂತೆ ಅವನು ಹಾಗಂತೆ ಇವಳು ಈ ರೀತಿ ಮಾಡಿದ್ದಾರೆ ಅಂತೀರಾ ಅಲ್ವಾ ಯಾರು ಬಂದು ನಿಮ್ಮ ಬಳಿ ಕಥೆ ಹೇಳಿದ್ದಾರೆ. ನಮ್ಮ ಮನೆಯ ಮತ್ತೊಂದು ರೂಮಿನಲ್ಲಿ ನೀವು ವಾಸವಿದ್ರಾ? ನಿಮಗೆ ಬೇಕಾದ ಮೆಸೇಜ್‌ಗಳು, ಕಾಮೆಂಟ್‌ಗಳು. ಮತ್ತೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಯಾಕೆ ಅಷ್ಟೊಂದು ಆಸಕ್ತಿ? ಯಾರೋ ಒಂದಿಷ್ಟು ಊಹಾ ಪೋಹಗಳನ್ನು ಹರಿಡಿದಾಗ ಕ್ಲಾರಿಟಿ ಕೊಡಬೇಕು ಅದಕ್ಕೆ ಕ್ಲಾರಿಟಿ ಕೊಟ್ಟಿರುವೆ. ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೇವೆ.
"ನಮ್ಮ ಪೋಸ್ಟ್ ನಮ್ಮ ಸ್ಟೋರಿಗಳ ಆಧಾರದ ಮೇಲೆ ನೀವೇ ಕಥೆ ಸೃಷ್ಠಿ ಮಾಡಿಕೊಂಡು ನೀವೇ ಏನೋ ನಿರ್ಧಾರ ಮಾಡಿಕೊಂಡಿದ್ದೀರಿ. ಏನಾದರೂ ಆದಾಗ ನಾವೇ ಬಂದು ಕ್ಲಾರಿಟಿ ಕೊಡುತ್ತೀವಿ. ಅಲ್ಲಿವರೆಗೂ ಸುಮ್ಮನಿರಿ. ಸೈದ್ಧಾಂತಿಕ ವಿಚಾರಗಳಲ್ಲಿ ನನ್ನನ್ನು ವಿರೋಧಿಸಲು ಸಾಧ್ಯವಾಗದೇ ಇದ್ದಾಗ ಬಿಟ್ಟು ಬಿಡಿ ಅದನ್ನು ಬಿಟ್ಟು ವೈಯಕ್ತಿಕ ವಿಚಾರದಲ್ಲಿ ಯಾಕೆ ಎಳೆದು ತರುತ್ತೀರಿ? ನಿಮ್ಮ ಪ್ರೋಫೈಲ್‌ನಲ್ಲಿ ನಿಮ್ಮ ಫೋಟೋ ಹಾಕಿಕೊಳ್ಳುವ ಯೋಗ್ಯತೆ ಇರಲ್ಲ. ಆದರೆ ನನ್ನ ಫೋಟೋ ಹಾಕಿ ಬಾಯಿಗೆ ಬಂದ ಹಾಗೆ ಮಾತನಾಡುತ್ತೀರಿ' ಎಂದು ಕೀರ್ತಿ ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನೂ ಓದಿ-ಅಕ್ಷಯ್ ಕುಮಾರ್-ನೋರಾ ಫತೇಹಿ ʼಪುಷ್ಪಾ ಸಾಂಗ್ʼ ಡಾನ್ಸ್ ಗೆ ನೆಟ್ಟಿಗರು ಗರಂ ..!
"ನಾನು ಚೆನ್ನಾಗಿರುವೆ ನಮ್ಮ ಬದುಕು ನಾವು ನೋಡಿಕೊಳ್ಳುತ್ತಿದ್ದೀವಿ. ನಾನು ಏನಾದರೂ ಬಂದು ಅವಳು ಹೀಗೆ ಮಾಡಿದ್ದಾಳೆ ಅಥವಾ ಅವಳು ಬಂದು ನಾನು ಹೀಗೆ ಮಾಡಿರುವೆ ಎಂದು ಏನಾದರೂ ಹೇಳಿದ್ದಾರಾ? 10 ವರ್ಷ ಸಂಸಾರ ಮಾಡಿದವರಿಗೆ ಬದುಕು ಹೇಗೆ ನಿಭಾಯಿಸಬೇಕು ಅನ್ನೋ ಅರಿವು ನಮಗಿದೆ. ನಮ್ಮ ಕಾಲು ಎಳೆದು, ನಮ್ಮ ಹೊಟ್ಟೆ ಉರಿಸುವುದು ಯಾಕೆ ನಿಮ್ಮ ಕಾಮೆಂಟ್ ಪೋಸ್ಟ್‌ನ ನನ್ನ ಕುಟುಂಬದವರು, ಕಣ್ಣೀರು ಹಾಕುವುದು, ಅವಳ ಮನೆಯವರು ನೋಡಿ ಅವರು ಕಣ್ಣೀರು ಹಾಕುವುದು. ಇದರಿಂದ ನಿಮಗೆ ಏನು ಸಿಗುತ್ತದೆ? ನಿಮಗೂ ತಂದೆ ತಾಯಿ ಮಕ್ಕಳು ತಂಗಿ ಅಣ್ಣ ಇರ್ತಾರೆ ಅಲ್ವಾ? ಹಾಗೆ ನಾವು ಕೂಡ ಒಬ್ಬರು ಅಂದುಕೊಳ್ಳಿ. ನಮ್ಮನ್ನು ಬದುಕಲು ಬಿಡಿ."
"ನಮ್ಮ ಸಂಕಟ ನಮಗೆ ಗೊತ್ತು. ಏನು ಮಾಡಬೇಕು ಅನ್ನೋದು ನಮಗೆ ಗೊತ್ತಿದೆ ಹೇಗೆ ಸರಿ ಮಾಡಬೇಕು ಹೇಗೆ ಅನುಸರಿಸಿಕೊಳ್ಳಬೇಕು ಅನ್ನೋ ಅರಿವು ನಮಗಿದೆ. ಮತ್ತೊಬ್ಬರ ಬದುಕು ನಾಶ ಮಾಡಲು ಯಾಕೆ ಸೋಷಿಯಲ್ ಮೀಡಿಯಾವನ್ನು ಬಳಸುತ್ತೀರಾ?' ಒಳ್ಳೆದಕ್ಕೆ ಬಳಸಿಕೊಳ್ಳಿ. ಹೌದು ಸೈದ್ಧಾಂತಿಕವಾಗಿ ನನ್ನ ನಿಲುವುಗಳಿವೆ. ನನ್ನದು. ಅದನ್ನು ನಾನು ಮಾತನಾಡುತ್ತೇನೆ. ನೀವು ಏನು ಬೇಕೋ ಮಾತನಾಡಿ. ಅದು ಬಿಟ್ಟು ಅದಕ್ಕೂ ನನ್ನ ವೈಯಕ್ತಿಕ ಬದುಕನ್ನು ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಎಳೆದು ತರುತ್ತೀರಾ. ನಮಗೂ ವೈಯಕ್ತಿಯ ಬದುಕು ಇದೆ. ಅದಕ್ಕೆ ಗೌರವ ಕೊಡಿ.
"ಆ ಭಗವಂತ ಒಂದು ದಿನ ನಿಮ್ಮ ಜೀವನದಲ್ಲೂ ಆಟ ಆಡುತ್ತಾನೆ. ಆಗ ನೀವು ಅನುಭವಿಸುತ್ತೀರಿ. ಅವತ್ತು ನನ್ನ ಶಾಪ ನಿಮಗೆ ತಟ್ಟುತ್ತದೆ. ನೆನಪಿಟ್ಟುಕೊಳ್ಳಿ."
ಇದನ್ನೂ ಓದಿ-ಕಾಂಗ್ರೇಸ್ ನಾಯಕನಿಗೆ ತಿರುಗೇಟು ನೀಡಿದ ಶ್ರೀಮನ್ ನಾರಾಯಣ; ರಕ್ಷಿತ್ ಶೆಟ್ಟಿ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.