ಅಕ್ಷಯ್‌ ಕುಮಾರ್‌-ನೋರಾ ಫತೇಹಿ ʼಪುಷ್ಪಾ ಸಾಂಗ್‌ʼ ಡಾನ್ಸ್‌ ಗೆ ನೆಟ್ಟಿಗರು ಗರಂ ..!

Akshay Kumar - Nora : ಅಕ್ಷಯ್- ನೋರಾ ಜೋಡಿಯ 'ಊ ಅಂಟಾವ ಮಾವ' ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಸ್ಯಾಮ್- ಅಲ್ಲು ಅರ್ಜುನ್ ಡಾನ್ಸ್‌ ಮ್ಯಾಚ್‌ ಮಾಡೋಕೆ ಅವರಿಬ್ಬರಿಗೂ ಸಾದ್ಯವಾಗಿಲ್ಲಎಂದು  ನೆಟ್ಡಟಿಗರು ಒಳ್ಳೆಯ ಹಾಡನ್ನು ಹಾಳು ಮಾಡಿಬಿಟ್ಟಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

Last Updated : Mar 11, 2023, 02:44 PM IST
  • ಹಾಡಿಗೆ ಸಂಬಂಧವೇ ಇಲ್ಲದ ಹಾವಭಾವ ಪ್ರದರ್ಶಿಸಿ ನೋರಾ ಫತೇಹಿ ಟ್ರೋಲ್.
  • ಈ ಹಾಡಿನಲ್ಲಿ ಸಮಂತಾ ಸ್ಟೆಪ್ಸ್ ಹಾಕಿದ್ದರು.
  • ಅಕ್ಷಯ್- ನೋರಾ ಈ ಸಾಂಗ್ ರೀಕ್ರಿಯೆಟ್ ಮಾಡಲು ಪ್ರಯತ್ನಿಸಿದ್ದಾರೆ.
ಅಕ್ಷಯ್‌ ಕುಮಾರ್‌-ನೋರಾ ಫತೇಹಿ ʼಪುಷ್ಪಾ ಸಾಂಗ್‌ʼ ಡಾನ್ಸ್‌ ಗೆ ನೆಟ್ಟಿಗರು ಗರಂ ..!  title=

ನೋರಾ ಒಳ್ಳೆ ಡ್ಯಾನ್ಸರ್ ಇರಬಹುದು. ಆದರೆ ಆಕೆ ಸ್ಯಾಮ್ ರೀತಿ ಹಾವಭಾವ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಹೇಳ್ತಿದ್ದಾರೆ. 'ಪುಷ್ಪ' ಚಿತ್ರಕ್ಕಾಗಿ ಸಮಂತಾ ಮೊದಲ ಬಾರಿಗೆ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದರು. ದೇವಿಶ್ರೀ ಪ್ರಸಾದ್ ಸಂಗೀತದ ಹಾಡನ್ನು ಇಂದ್ರವತಿ ಚೌಹಾಣ್ ಹಾಡಿದ್ದರು.

ಎರಡು ವರ್ಷಗಳ ಹಿಂದೆ ಬಂದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಚಿತ್ರದಲ್ಲಿ 'ಊ ಅಂಟಾವ ಮಾವ' ಸಾಂಗ್ ಸೂಪರ್ ಹಿಟ್ ಆಗಿ ಚಿತ್ರದ ಸಕ್ಸಸ್‌ಗೆ ಪ್ಲಸ್ ಆಗಿತ್ತು. ಈ ಹಾಡಿನಲ್ಲಿ ಸಮಂತಾ  ಸ್ಟೆಪ್ಸ್ ಹಾಕಿದ್ದರು. 

 

ಇದನ್ನೂ ಓದಿ-ಕಾಂಗ್ರೇಸ್‌ ನಾಯಕನಿಗೆ ತಿರುಗೇಟು ನೀಡಿದ ಶ್ರೀಮನ್‌ ನಾರಾಯಣ; ರಕ್ಷಿತ್‌ ಶೆಟ್ಟಿ...!

ಇದೀಗ ಬಾಲಿವುಡ್ ನಟ ಅಕ್ಷಯ್‌ ಕುಮಾರ್ ಹಾಗೂ ನೋರಾ ಫತೇಹಿ ಇದೇ ಹಾಡಿಗೆ ಕುಣಿದು ರಂಗೇರಿಸಿದ್ದಾರೆ. ಯುಸ್‌ ಡಲ್ಲಾಸ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಅಕ್ಷಯ್- ನೋರಾ ಸೂಪರ್ ಹಿಟ್ ಸಾಂಗ್‌ಗೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. 'ಪುಷ್ಪ' ಚಿತ್ರದಲ್ಲಿ ಹಾಡಿಗೆ ಅಲ್ಲು ಅರ್ಜುನ್ ಸ್ಟೈಲ್, ಸಮಂತಾ ಹಾವಭಾವ ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು.

ಇದೀಗ ವೇದಿಕೆಯಲ್ಲಿ ಅಕ್ಷಯ್- ನೋರಾ ಈ ಸಾಂಗ್ ರೀಕ್ರಿಯೆಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಾಡಿಗೆ ಸಂಬಂಧವೇ ಇಲ್ಲದ ಹಾವಭಾವ ಪ್ರದರ್ಶಿಸಿ ನೋರಾ ಫತೇಹಿ ಟ್ರೋಲ್ ಆಗುತ್ತಿದ್ದಾರೆ. ಇನ್ನು ಅಕ್ಷಯ್ ಸ್ಟೈಲ್‌ ಕೂಡ ಅಷ್ಟಕ್ಕಷ್ಟೇ ಎನ್ನುವಂತಿದೆ. ಒಳ್ಳೆ ಸಾಂಗ್‌ನ ಈ ತರ ಹಾಳು ಮಾಡಿಬಿಟ್ಟರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ-Actress Sitara : 'ಹಾಲುಂಡ ತವರು' ನಟಿ ಸಿತಾರಾ ನೋವುಂಡ ಕಥೆ.. ಮದುವೆ ಆಗದೇ ಉಳಿದಿದ್ದು ಇದೇ ಕಾರಣಕ್ಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News