A. R. Rahman Net Worth: ಎ. ಆರ್. ರಹಮಾನ್‌ ಅವರು ಮಣಿರತ್ನಂ ನಿರ್ದೇಶನದ ಮತ್ತು ಬಾಲಚಂದರ್ ನಿರ್ಮಾಣದ ರೋಜಾ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ತಮ್ಮ ಭಾವಪೂರ್ಣ ಸಂಗೀತದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಎ.ಆರ್.ರಹಮಾನ್‌ ಗೆ ಹೆಚ್ಚು ಅವಕಾಶಗಳು ಬರತೊಡಗಿದವು.


COMMERCIAL BREAK
SCROLL TO CONTINUE READING

ತಮಿಳು ಚಿತ್ರರಂಗದಲ್ಲಿ ಅವರು ಮುಟ್ಟಿದ್ದೆಲ್ಲಾ ಹಿಟ್ ಆಗಿ, ಕ್ರಮೇಣ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳ ಅವಕಾಶಗಳು ಎ.ಆರ್.ರಹಮಾನ್‌ ಅವರಿಗೆ ದಕ್ಕತೊಡಗಿದವು. ಆ ಮೂಲಕ ವಿದೇಶಿ ಚಿತ್ರ ಸ್ಲಮ್‌ಡಾಗ್ ಮಿಲಿಯನೇರ್‌ಗೆ ಅವರು ರಚಿಸಿದ ಜೈ ಹೋ ಹಾಡಿಗೆ ವಿಶ್ವದ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್ ಸಿಕ್ಕಿದೆ. ಇದಲ್ಲದೆ, ರೆಹಮಾನ್ ಒಂದೇ ಸಮಯದಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು,..


ಇದನ್ನೂ ಓದಿ-"ಕಾಣೆಯಾಗಿದ್ದಾಳೆ" ಹುಡುಕಿಕೊಟ್ಟವರಿಗೆ ಬಹುಮಾನ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ


ಎ.ಆರ್. ರಹಮಾನ್‌ ಎಷ್ಟೇ ಎತ್ತರಕ್ಕೆ ಹೋದರೂ ಎಲ್ಲ ಕೀರ್ತಿಯೂ ದೇವರಿಗೆ ಸಲ್ಲುತ್ತದೆ ಎಂದು ಹೇಳುವ ಮೂಲಕ ಸರಳತೆಯ ಶಿಖರವನ್ನೇರಿದ್ದಾರೆ. ಅವರು ತಮಿಳು, ತೆಲುಗು, ಹಿಂದಿ, ಮಲಯಾಳಂ ಮುಂತಾದ ಭಾರತದ ವಿವಿಧ ಭಾಷೆಯ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜಕರಾಗಿ ಪಾದಾರ್ಪಣೆ ಮಾಡಿ 30 ವರ್ಷಗಳು ಕಳೆದರೂ ರಹಮಾನ್‌ ಈಗಿನ ಪೀಳಿಗೆಯನ್ನು ಸೆಳೆಯಲು ಹಾಡುಗಳನ್ನು ನೀಡುವ ಮೂಲಕ ಟಾಪ್ ನಿರ್ದೇಶಕರಾಗಿದ್ದಾರೆ.


ಇದನ್ನೂ ಓದಿ-ಬಿಗ್ ಬಾಸ್’ಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ಪವಿ ಪೂವಪ್ಪ ಬಾಯ್ ಫ್ರೆಂಡ್ ಯಾರು ಗೊತ್ತಾ?


ಚಿತ್ರವೊಂದಕ್ಕೆ ಸಂಗೀತ ಸಂಯೋಜಿಸಿದ್ದಕ್ಕೆ ರೂ.8 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಇದಲ್ಲದೇ ಭಾರತ ಮತ್ತು ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನಡೆಸಿ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ. ಜೊತೆಗೆ ಗಾಯಕರಾಗಿಯೂ ತಮ್ಮ ಛಾಪು ಮೂಡಿಸಿರುವ ಎ.ಆರ್.ರಹಮಾನ್‌ ಹಲವಾರು ಹಿಟ್ ಹಾಡುಗಳನ್ನು ಹಾಡಿದ್ದಾರೆ. ಅವರ ವಾರ್ಷಿಕ ಆದಾಯ ಬರೋಬ್ಬರಿ 50 ಕೋಟಿ ರೂ. ತಿಂಗಳಿಗೆ ಸರಾಸರಿ 4 ಕೋಟಿ ರೂ.


ಅವರ ಆಸ್ತಿ ಮೌಲ್ಯ ಬರೋಬ್ಬರಿ 600 ಕೋಟಿ ರೂ. ಇದು ತಮಿಳು ಚಿತ್ರರಂಗದಲ್ಲಿ ನಾಯಕ ನಟರಾದ ವಿಜಯ್ ಮತ್ತು ರಜನಿಗಿಂತಲೂ ಹೆಚ್ಚು. ಎಆರ್ ರೆಹಮಾನ್ ಅವರು ಜಾಗ್ವಾರ್, ಮರ್ಸಿಡಿಸ್ ಬೆಂಜ್ ಮತ್ತು ವೋಲ್ವೋ ಕಂಪನಿಗಳ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.