Pushpavati Song:  ನಮ್ಮ ಚಂದನವನ ತುಂಬಾ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.ಕನ್ನಡ ಇಂಡಸ್ಟ್ರಿ ಬಗ್ಗೆ ಈಗ ಟಾಪ್ ಲೆವೆಲಿನಲ್ಲಿ ಟಾಕ್ ನಡೆಯುತ್ತಿದೆ.'ಕ' ಅಕ್ಷರದ ಕಾಂತಾರ,ಕೆಜಿಎಫ್,ಕಬ್ಜ, ಸಿನಿಮಾಗಳು ದೊಡ್ಡ ಮಟ್ಟದಲ್ಲೇ ಸದ್ದು ಮಾಡಿವೆ. ಈಗಂತೂ ಸ್ಯಾಂಡಲ್ವುಡ್ ನಿಂದ ಯಾವ ಸಿನಿಮಾ ರಿಲೀಸ್ ಆಗುತ್ತೋ ಅಂತ ಬೇರೇ ಇಂಡಸ್ಟ್ರಿ ಅವರು ಕಾಯೋ ಲೆವೆಲ್ಲಿಗೆ ಸುದ್ದಿಯಾಗುತ್ತಿದೆ.


COMMERCIAL BREAK
SCROLL TO CONTINUE READING

ಈಗ ಮ್ಯಾಟರ್ ಏನಪ್ಪಾ ಅಂದ್ರೆ ಪುಷ್ಪ ಅನ್ನೋ ಹೆಸರಿನ ಮಂದಿಗೆ ಒಂಥರಾ ಖುಷಿ ಬಿಡಿ.ಯಾಕಂದ್ರೆ ಅವರ ಹೆಸರಿನ ಹಾಡುಗಳು ಟಾಪ್ ಆಗಿ ಸೌಂಡ್ ಮಾಡುತ್ತಿವೆ.ಪುಷ್ಪಾ ಹೆಸರಿಗೆ ಗತ್ತು ಮತ್ತು ದೊಡ್ಡ ಶಕ್ತಿ ಇದೆ ಅನ್ನೋದು ಈಗ ಕನ್ಫರ್ಮ್ ಆಗುತ್ತಿದೆ.ನಿಮ್ಗೆ ಗೊತ್ತಿರೋ ಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಶೇಕ್ ಇಟ್ ಪುಷ್ಪಾವತಿ ಹಾಡು ಮಾಡಿರೋ ಮತ್ತು ಮಾಡ್ತಿರೋ ಬಿಗ್ ಸೌಂಡ್ ಎಂಥದ್ದು ಅಂತ ನಿಮ್ಮ ಗಮನಕ್ಕೆ ಬಂದಿದೆ. ಎಲ್ಲೇ ಫ್ರೆಂಡ್ಸ್ ಸೇರಿದ್ರೂ ಶೇಕ್ ಇಟ್ ಪುಷ್ಪವತಿ ಹಾಡು ಹಾಕ್ರೋ ಅಂತ ಕೇಳ್ತಾರೆ.ಆ ಲೆವೆಲ್ಲಿಗೆ ಹಾಡು ಕಿಕ್ ಕೊಟ್ಟಿದೆ.


ಇದನ್ನೂ ಓದಿ: Kangana Ranaut:ʼಅದೊಂದೇ  ಕಾರಣಕ್ಕೆ ಆ ಚಿತ್ರಕ್ಕೆ ಸಹಿ  ಮಾಡಿದೆʼ- ಕಂಗನಾ ರಣಾವತ್


ಮತ್ತೇ ಮತ್ತೇ ಕೇಳಿದ್ರೂ ಬೋರ್ ಅನಿಸೋದಿಲ್ಲ.ಅದರ ಜೊತೆ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ 125ನೇ ವೇದ ಸಿನಿಮಾದ ಪುಷ್ಪ,ಪುಷ್ಪ ಹಾಡು ಕೂಡ ತುಂಬಾ ಟ್ರೆಂಡಿಂಗ್ ನಲ್ಲಿದೆ. ವೇದ ಸಿನಿಮಾದ ಪುಷ್ಪ ಪುಷ್ಪಾ ಹಾಡನ್ನ ಕೇಳೋದೇ ಒಂಥರಾ ಖುಷಿ ಬಿಡಿ.
ಇನ್ನೂ ಈ ಎರಡು ಹಾಡುಗಳಿಗೆ ಸಾಕಷ್ಟು ಮಂದಿ ರೀಲ್ಸ್ ಮಾಡಿದ್ದಾರೆ.


ಇದನ್ನೂ ಓದಿ: Bollywood: ಕಾಶ್ಮೀರಿ  ಫೈಲ್ಸ್ ನಿಂದ ಮನೆಮಾತಾದ ಅನುಪಮ್ ಖೇರ್ ಗೆ ಹುಟ್ಟು ಹಬ್ಬದ ಸಂಭ್ರಮ


ಬರೀ ಕನ್ನಡಿಗರು ಅಷ್ಟೇ ಅಲ್ಲದೆ ಹೊರ ಭಾಗದ ಮಂದಿಯೂ ರೀಲ್ಸ್ ಗಳನ್ನ ಮಾಡಿ ಪೋಸ್ಟ್ ಮಾಡಿದ್ದಾರೆ.ಇನ್ನೂ ಆಲ್ಮೋಸ್ಟ್ ಕನ್ನಡದ ಸಿನಿಮಾ ಸ್ಟಾರ್ ಗಳು ಅಷ್ಟೇ ಅಲ್ಲದೇ ಹೊರ ಭಾಗದ ಸ್ಟಾರ್ ಗಳು ಕೂಡ  ಕ್ರಾಂತಿ ಸಿನಿಮಾದ ಶೇಕ್ ಇಟ್ ಪುಷ್ಪವತಿ ಮತ್ತು ವೇದ ಸಿನಿಮಾದ ಪುಷ್ಪಾ ಪುಷ್ಪ ಹಾಡಿಗೆ ರೀಲ್ಸ್ ಮಾಡೋ ಮೂಲಕ ಹೆಜ್ಜೆ ಹಾಕಿದ್ದಾರೆ. ಸೋ ಇದನ್ನ ನೋಡ್ತಾ ಇದ್ರೆ ಪುಷ್ಪ ಅನ್ನೋ ಹೆಸರಿನ ಹಾಡುಗಳು ಹಿಟ್ ಲಿಸ್ಟ್ ಗೆ ಸೇರೋದ್ರಲ್ಲಿ ಅನುಮಾನವೇ ಇಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.