Kangana Ranaut: ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಮಾತನಾಡಿರುವ ಕಂಗನಾ ರಣಾವತ್ ಹಣಕ್ಕಾಗಿ ಆ ಸಿನಿಮಾ ಮಾಡಿದೆ ಎಂದರು.ಅಷ್ಟಕ್ಕೂ ಹಣಕ್ಕಾಗಿ ಮಾಡಿದ ಸಿನಿಮಾ ಯಾವುದು?
ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಬಾಲಿವುಡ್ ಕಂಗನಾ ರಣಾವತ್ ತನ್ನ ಯಶಸ್ಸಿನ ಹಾದಿಯನ್ನು ಬಿಚ್ಚಿಟ್ಟರು. ಅತ್ಯಂತ ಸ್ಮರಣೀಯ ಮತ್ತು ಶಕ್ತಿಯುತ ಮಹಿಳಾ ಕೇಂದ್ರಿತ ಚಲನಚಿತ್ರಗಳನ್ನು ನೀಡಿದ ಹಾಗೂ ಪ್ರೇಕ್ಷಕರು ಅಪಾರವಾಗಿ ಪ್ರೀತಿಸಿದ ಚಿತ್ರವೆಂದರೆ ಕ್ವೀನ್. ಕಂಗನಾ ರಣಾವತ್ ಅಭಿನಯವನ್ನು ಚಿತ್ರಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲಾಯಿತು ಮತ್ತು ಇಂದು ಕ್ವೀನ್ 9 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ, ಕಂಗನಾ ರನೌತ್ 'ಬಾಲಿವುಡ್ ರಾಣಿ' ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಿಂದ ತಮ್ಮ ಥ್ರೋಬ್ಯಾಕ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
After almost a decade long struggle I was told I am too good an actor to be a Bollywood leading lady, curly hair and vulnerable voice made it worse, I signed Queen thinking this will never release, signed it for money with that money I went to film school in Newyork (cont) https://t.co/bOnicdmKet
— Kangana Ranaut (@KanganaTeam) March 7, 2021
ಇದನ್ನೂ ಓದಿ: ರಾಕಿ ಭಾಯ್ ʼನೀಚ್__ ಕುತ್ತೆʼ. ಎಂದ ತೆಲುಗು ಡೈರೆಕ್ಟರ್..! ನೊಂದಿಲ್ಲ, ಕ್ಷಮೆನೂ ಕೇಳಿಲ್ಲ
ಅಂದು ನಾನು ಎಲ್ಲವನ್ನೂ ಕಳೆದುಕೊಂಡು ನನ್ನ ಕನಸುಗಳನ್ನು ಸಮಾಧಿ ಮಾಡಿದ್ದೆ.ಯಾವುದೋ ಒಂದು ಘಟನೆಯಿಂದ ಭಾರತಕ್ಕೆ ಮರಳುವ ಧೈರ್ಯವಿರಲಿಲ್ಲಈ ಕಾರಣಕ್ಕಾಗಿ ಕಲಬಾಸಾಸ್‌ನಲ್ಲಿ ಹೊರವಲಯದಲ್ಲಿ ಒಂದು ಸಣ್ಣ ಮನೆಯನ್ನು ಖರೀದಿಸಿ ಆಗ ಎಲ್ಲವನ್ನೂ ತೊರೆದು ಬದುಕುತ್ತಿದ್ದೆ. ಅದೇ ಸಮಯದಲ್ಲಿʼಕ್ವೀನ್ ಚಿತ್ರʼ ಸಿನಿಮಾ ಬಿಡುಗಡೆಯಾಯಿತು.ಆ ಸಿನಿಮಾ ನನ್ನ ಜೀವನವನ್ನು ಬದಲಾಯಿಸಿತು ಮತ್ತು ಭಾರತೀಯ ಚಿತ್ರರಂಗವು ಶಾಶ್ವತವಾಗಿ ನನ್ನನು ಗುರುತಿಸುವಂತೆ ಮಾಡಿತು ಎಂದರು .
ಇದನ್ನೂ ಓದಿ: Bollywood: ಕಾಶ್ಮೀರಿ ಫೈಲ್ಸ್ ನಿಂದ ಮನೆಮಾತಾದ ಅನುಪಮ್ ಖೇರ್ ಗೆ ಹುಟ್ಟು ಹಬ್ಬದ ಸಂಭ್ರಮ
"ನ್ಯೂಯಾರ್ಕ್‌ನಲ್ಲಿ, ನಾನು ಚಿತ್ರಕಥೆಯನ್ನು ಅಧ್ಯಯನ ಮಾಡಿ 24 ನೇ ವಯಸ್ಸಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಒಂದು ಸಣ್ಣ ಚಲನಚಿತ್ರವನ್ನು ನಿರ್ದೇಶಿಸಿದೆ, ಅದು ಹಾಲಿವುಡ್‌ನಲ್ಲಿ ನನಗೆ ಪ್ರಗತಿಯನ್ನು ನೀಡಿತು, ನನ್ನ ಕೆಲಸವನ್ನು ನೋಡಿದ ನಂತರ ಒಂದು ದೊಡ್ಡ ಸಂಸ್ಥೆ ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿತು. ಇವೆಲ್ಲವೂ ಎರಡು ವರ್ಷಗಳ ಹಿಂದಿನ ಪ್ರತಿಫಲ ಎಂದರು . ನ್ಯೂಯಾರ್ಕ್‌ನ ಚಲನಚಿತ್ರ ಶಾಲೆಗೆ ಕಳೆದ ಹಣವನ್ನು ಮರು ಪಡೆಯುದ್ದಕ್ಕಾಗಿ ಸಹಿ ಮಾಡಿದ್ದೆ ಎಂದು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.