ರಕ್ಷಿತ್ ಶೆಟ್ಟಿ.. ತುಘಲಕ್ ಚಿತ್ರದಿಂದ ಹಿಡಿದು 777 ಚಾರ್ಲಿ ಚಿತ್ರದವರೆಗೂ ವಿಭಿನ್ನ ಪಾತ್ರಗಳ ಮೂಲಕವೇ ಗಮನ ಸೆಳೆದಿದ್ದಾರೆ. ಪ್ರತಿ ಚಿತ್ರದಲ್ಲೂ  ಹೊಸತನದ ಪಾತ್ರಗಳ ಆಯ್ಕೆ ಮಾಡುವ ಶೆಟ್ರು ಈಗ ಅವರೇ ನಿರ್ಮಾಣ ಮಾಡ್ತಿರುವ "ಬ್ಯಾಚುಲರ್ ಪಾರ್ಟಿ" ಚಿತ್ರದಲ್ಲಿ  ಹಿಂದೆಂದೂ ನಟಿಸದ‌‌ ಯಾರೂ ಊಹೆ ಮಾಡದ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ರಕ್ಷಿತ್ ಬ್ಯಾಚುಲರ್ ಪಾರ್ಟಿಯಿಂದ ಹೊಂಬಾಳೆಯಲ್ಲಿ ಅರಳಬೇಕಿರೋ "ರಿಚರ್ಡ್ ಆಂಟೋನಿ" ತಡವಾಗಿದೆ. ಅಷ್ಟಕ್ಕೂ ಸಿಂಪಲ್ ಸ್ಟಾರ್ ಬ್ಯಾಚುಲರ್ ಪಾರ್ಟಿಗೂ ರಿಚರ್ಡ್ ಆಂಟೋನಿಗೂ ಏನ್  ಸಂಬಂಧ  ಅನ್ನೋದನ್ನ ಮುಂದೆ ಓದಿ.


COMMERCIAL BREAK
SCROLL TO CONTINUE READING

ಚಾರ್ಲಿ  ನಂತ್ರ ರಕ್ಷಿತ್ ಶೆಟ್ಟಿ  ರಿಚರ್ಡ್ ಆಂಟೋನಿ ಚಿತ್ರದಲ್ಲಿ ಬ್ಯುಸಿಯಾಗಬಹುದು. ಯಾಕಂದ್ರೆ ರಕ್ಷಿತ್ ಮತ್ತೆ ಈ ಚಿತ್ರದ ಮೂಲಕ ಡೈರೆಕ್ಷನ್ ಮಾಡೊದ್ರ ಜೊತೆಗೆ ನಟನೆಯನ್ನು ಮಾಡೋದ್ರಿಂದ ಪುಲ್ ಹೋಮ್ ವರ್ಕ್ ಮಾಡಿಯೇ ರಿಚರ್ಡ್ ಆಂಟೋನಿ ಅಡ್ಡದಲ್ಲಿ ಕಾಣಿಸೋದು. ಹಾಗಾಗಿ  ಶೆಟ್ರು ಚಾರ್ಲಿ ಮೂಡ್ ನಿಂದ ಬಂದು ಆಂಟೋನಿ ಪ್ರಿಪರೇಶನ್ ನಲ್ಲಿ ಬ್ಯುಸಿ ಇರ್ತಾರೆ ಅಂತ ಅವರ ಫ್ಯಾನ್ಸ್ ಗಳು ಲೆಕ್ಕಾಚಾರ ಹಾಕಿದ್ರು. ಅದ್ರೆ ಶೆಟ್ರು ಲೆಕ್ಕಚಾರವೇ ಬೇರೆ ಇದ್ದು ರಿಚರ್ಡ್ ಆಂಟೋನಿಗೂ ಮೊದಲೇ ಮತ್ತೆ ಎರಡು ಹೊಸ ಚಿತ್ರಗಳನ್ನು ಹೊಸ ನಿರ್ದೇಶಕರ ಜೊತೆ ಅನೌನ್ಸ್ ಮಾಡಿರುವ ರಕ್ಷಿತ್  ಒಂದು ಚಿತ್ರದಲ್ಲಿ ಬಣ್ಣ ಹಚ್ಚೋಕು ಪ್ಲಾನ್ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ- Vedha : ಶಿವಣ್ಣನ 'ವೇದ' ಸಕ್ಸಸ್ ಖುಷಿಯಲ್ಲಿ ಚಿತ್ರತಂಡ! ವೇದ ಪಾರ್ಟ್ 2 ಬರೋದು ಪಕ್ಕಾನಾ?


ಯೆಸ್ ... ಏನೇ ಕೆಲಸ ಮಾಡಿದ್ರು ಸ್ವಲ್ಫ ಗುಟ್ಟಾಗೇ ಮಾಡೊ ರಕ್ಷಿತ್ ಶೆಟ್ಟಿ ಈಗ ಮತ್ತೊಂದು ಇಂಟ್ರೆಂಸ್ಟಿಗ್ ಮ್ಯಾಟರ್ ಅನ್ನು  ರಿವೀಲ್ ಮಾಡದೆ ಸರ್ಪ್ರೈಸ್ ಕೊಡೊಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಮೊನ್ನೆಯಷ್ಟೇ ಸೆಟ್ಟೇರಿದ "ಬ್ಯಾಚುಲರ್ ಪಾರ್ಟಿ" ಚಿತ್ರದಲ್ಲಿ ದಿಗಂತ್, ರಿಷಬ್ ನಟಿಸ್ತಾರೆ. ನಾನು ಕೇವಲ‌ ನಿರ್ಮಾಪಕ ಅಂತ ಕಾಗೆ ಹಾರಿಸಿದ್ದ ರಕ್ಷಿತ್ ಶೆಟ್ರು "ಬ್ಯಾಚುಲರ್ ಪಾರ್ಟಿ" ಚಿತ್ರದಲ್ಲಿ ಒಂದು ವಿಶೇಷ ಶೇಡ್ ನ ಪಾತ್ರದಲ್ಲಿ ಬಣ್ಣ ಹಚ್ಚೊಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ ಈಗಾಗಲೇ ಶೆಟ್ರು ಆ ಪಾತ್ರಕ್ಕೆಬೇಕಾದ  ತಯಾರಿ  ಮಾಡಿಕೊಳ್ತಿದ್ದಾರೆ ಅನ್ನೋ ಪಕ್ಕಾ ಮಾಹಿತಿ ಸಿಕ್ಕಿದೆ.


ನಟನೆ ಜೊತೆಗೆ ಹೊಸ ನಿರ್ದೇಶಕರಿಗೆ ವೇದಿಕೆ ಕೊಟ್ಟಿರೋ ರಕ್ಷಿತ್ ಶೆಟ್ಟಿ, ನವ ನಿರ್ದೇಶಕ ಅಭಿಜಿತ್ ಮಹೇಶ್ ನಿರ್ದೇಶನದ "ಬ್ಯಾಚುಲರ್ ಪಾರ್ಟಿ'  ಚಿತ್ರದಲ್ಲಿ ನೆಗೆಟಿವ್ ರೋಲ್ ಪ್ಲೇ ಮಾಡಲು ಒಕೆ ಅಂದಿದ್ದಾರಂತೆ. ಅಲ್ಲದೆ  ಆ ಚಿತ್ರಕ್ಕಾಗಿಯೇ ರಕ್ಷಿತ್ ಗಡ್ಡವನ್ನು ಬಿಟ್ಟಿದ್ದು, ಅಕ್ಟೋಬರ್ ನಲ್ಲಿ  ರಕ್ಷಿತ್ ಪಾತ್ರದ  ಶೂಟಿಂಗಾಗಿ ಚಿತ್ರತಂಡದ ಜೊತೆ ಬ್ಯಾಂಕಾಕ್ ಗೆ  ಹಾರಲಿದ್ದಾರೆ ಅನ್ನೋ ಮಾಹಿತಿ ಶೆಟ್ಟರ ಆಪ್ತ ಬಳಗದಿಂದಲೇ ಬಂದಿದೆ. 


ಇದನ್ನೂ ಓದಿ- ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವಣ್ಣನ ಮತ್ತೊಂದು ಅವತಾರ ನೋಡಲು ನೀವು ರೆಡಿನಾ..?


ಪಾತ್ರ ಚೆನ್ನಾಗಿರೋ ಕಾರಣ ರಕ್ಷಿತ್ ಫಸ್ಟ್ ಟೈಮ್ ನೆಗೆಟಿವ್ ರೋಲ್ ನಲ್ಲಿ ಕಾಣಸೊಕೆ ಸೈ ಅಂದಿದ್ದು, ಈ ವಿಚಾರ ಗುಟ್ಟಾಗಿಟ್ಟು ಸಿನಿಮಾ ರಿಲೀಸ್ ಟೈಮ್ ಅಲ್ಲಿ ಸರ್ಪ್ರೈಸ್ ಆಗಿ ರಿವೀಲ್ ಮಾಡೊ ಪ್ಲಾನ್ ಚಿತ್ರತಂಡದ್ದು. ಸದ್ಯ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ಸಪ್ತ ಸಾಗರದಾಚೆ ಸಿನಿ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿ.  ಹೊಸ ವರ್ಷದ ಆರಂಭದಲ್ಲಿ  ಬ್ಯಾಚುಲರ್ ಪಾರ್ಟಿ ಚಿತ್ರದ ಶೂಟಿಂಗ್ ಗಾಗಿ ಬ್ಯಾಂಕಾಕ್ ಗೆ ಹಾರಿ. ಬ್ಯಾಚುಲರ್ ಪಾರ್ಟಿ ಶೂಟಿಂಗ್ ಹಾಗೂ ಸಪ್ತ ಸಾಗರದಾಚೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಜೊತೆ ಪ್ರಚಾರವನ್ನು ಮಾಡಿ ಚಿತ್ರ ರಿಲೀಸ್ ಆದ್ಮೇಲೆ ಮುಂದಿನ‌ವರ್ಷ ಮಾರ್ಚ್ ವೇಳೆಗೆ "ರಿಚರ್ಡ್ ಆಂಟೋನಿ" ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲು ರಕ್ಷಿತ್ ಶೆಟ್ಟಿ ಪ್ಲಾನ್ ಮಾಡಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.