ಜನವರಿ 8 ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡೋದು ಕನ್ಫರ್ಮ್!

ಯಶ್ ಮುಂದಿನ ಸಿನಿಮಾ ಯಾವುದು, ಯಾರು ಡೈರೆಕ್ಟರ್,ಯಾರು ಪ್ರೊಡ್ಯೂಸರ್ ಎಲ್ಲವೂ ಜನವರಿ 8 ಕ್ಕೆ ಗೊತ್ತಾಗುತ್ತೆ ಅನ್ನೋ ಪಕ್ಕಾ ಇನ್ಫಾರ್ಮಶನ್ ಸಿಕ್ಕಿದೆ. 

Written by - YASHODHA POOJARI | Edited by - Ranjitha R K | Last Updated : Jan 2, 2023, 10:51 AM IST
  • ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಗಳಿಗೆ ಸಿಹಿಸುದ್ದಿ
  • ವರ್ಷದ ಆರಂಭದಲ್ಲಿಯೇ ಸಂಭ್ರಮಿಸಿಕೋ ವೇದಿಕೆ ಸಿದ್ದ
  • ಜನವರಿ 8 ಕ್ಕೆ ಅಭಿಮಾನಿಗಳ ನಿರೀಕ್ಷೆಗಳಿಗೆ ಉತ್ತರ
 ಜನವರಿ 8 ಕ್ಕೆ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡೋದು ಕನ್ಫರ್ಮ್! title=

ಬೆಂಗಳೂರು : ಕೆಜಿಎಫ್ ಸಾಮ್ರಾಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಕೆಜಿಎಫ್  ನಂತರ ರಾಕಿಭಾಯ್ ಹೊಸ ಚಿತ್ರದ ನಿರೀಕ್ಷೆಯಲ್ಲಿ  ನಿರಾಸೆ ಅನುಭವಿಸಿದ್ದ ರಾಕಿ ಫ್ಯಾನ್ಸ್ ಗಳುಹೊಸ 
ವರ್ಷದ ಆರಂಭದಲ್ಲಿಯೇ ಸಂಭ್ರಮಿಸಿಕೋ ವೇದಿಕೆ ಸಿದ್ದವಾಗ್ತಿದೆ. ಹಾಗಾದ್ರೆ ಅದ್ಯಾವ ಸೆಲೆಬ್ರೇಶನ್ ಗೆ ರಾಕಿ ಫ್ಯಾನ್ಸ್ ಗೆ ಚಾನ್ಸ್ ಸಿಕ್ತಿದೆ ಅನ್ನೋದನ್ನ ಹೇಳ್ತಿವಿ ಮುಂದೆ ಓದಿ.

ಕೆಜಿಎಫ್ ಚಿತ್ರಕ್ಕೂ ಮುಂಚೆ ರಾಕಿಂಗ್ ಸ್ಟಾರ್ ಆಗಿ ಯಶ್ ಅಭಿಮಾನಿಗಳ ಅಡ್ಡದಲ್ಲಿ ದರ್ಬಾರ್ ಮಾಡ್ತಿದ್ರು. ಅದ್ರೆ ಒಂದೇ ಒಂದು ಕೆಜಿಎಫ್ ರಾಕಿನ  ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಾಕಿ ಭಾಯ್ ಮಾಡಿ ಅಭಿಮಾನಿಗಳ ಹೃದಯದ ಅಂಗದಲ್ಲಿ ಸಾಮ್ರಾಟನಾಗಿ ಮೆರೆಯುವಂತೆ ಮಾಡಿದೆ. ಅಲ್ಲದೆ ರಾಕಿಯ ಪ್ರತಿ ಹೆಜ್ಜೆಯನ್ನು ಅಭಿಮಾನಿಗಳು ಹಿಂಬಾಲಿಸುವಂತೆ ಆಗಿದೆ. ಜೊತೆಗೆ ರಾಕಿ ಹೊಸ ಸಿನಿಮಾ ಯಾವಗ ಅನೌನ್ಸ್ ಆಗುತ್ತೆ ? ರಾಕಿಭಾಯ್ ಆಗಿ ತೆರೆ ಮೇಲೆ ಅಬ್ಬರಿಸಿದ್ದ ರಾಕಿ ಮತ್ತೆ ಯಾವ ಅವತಾರದಲ್ಲಿ ಬೆಳ್ಳೆ ತೆರೆ ಬೆಳಗಿಸಿ‌‌ ಅಭಿಮಾನಿಗಳ ಅಂಗಳದಲ್ಲಿ ಪ್ರಜ್ವಲಿಸ್ತಾರೆ ಅನ್ನೋ ಕಾತರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಆದರೆ ರಾಕಿ ಮಾತ್ರ ತಮ್ಮ ಹೊಸ ಸಿನಿಮಾ ಗುಟ್ಟನ್ನು ಇನ್ನು ಬಿಟ್ಟುಕೊಡದೆ ಫ್ಯಾನ್ಸ್ ಗಳಿಗೆ ನಿರಾಸೆ ಮೂಡಿಸಿದ್ದಾರೆ.

ಇದನ್ನೂ ಓದಿ : Ghost Movie: ಶಿವಣ್ಣ ಅಭಿನಯದ ‘ಘೋಸ್ಟ್​’ ಮೋಷನ್​ ಪೋಸ್ಟರ್​ ರಿಲೀಸ್

ಹೌದು, ಕೆಜಿಎಫ್ ಟು ಬಂದ್ಮೇಲೆ ರಾಕಿ ಹವಾ ಮತ್ತು ಹವಾಮಾನ ಸಪ್ತಸಾಗರವನ್ನು ದಾಟಿ ನಿಂತಿದೆ. ಅಲ್ಲದೆ, ರಾಕಿಯ ಮುಂದಿನ ಸಿನಿಮಾ ನಡೆ ಮೇಲೆ  ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಮಂದಿಯೂ ಕಣ್ಣಿಟ್ಟಿದ್ದಾರೆ. ಆದರೆ ರಾಕಿ ಸಿನಿಹೆಜ್ಜೆಯನ್ನ ಎಣಿಸೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಅದರೂ ಈ ಗ್ಯಾಪ್ ನಲ್ಲಿ  ರಾಕಿ ಭಾಯ್ ಹೊಸ ವರ್ಷದ ಆರಂಭದಲ್ಲೇ  ತನ್ನ ಅಭಿಮಾನಿಗಳಿಗೆ  ಸರ್ಪ್ರೈಸ್ ಕೊಡೊದು  ಕನ್ಪರ್ಮ್ ಆಗಿದೆ‌‌‌. 

ಈ ಸಲ ರಾಕಿ ಸಿನಿಮಾ ಹೊರತು ಪಡಿಸಿ ಮತ್ತೊಂದು ಸರ್ಪ್ರೈಸ್ ಕೊಡೊಕೆ ರಾಕಿ ಮತ್ತು ರಾಕಿ ಅಭಿಮಾನಿಗಳ ಸಂಘದ ಬಳಗ ದೊಡ್ಡ ಮಟ್ಟದ ತಯಾರಿ  ಮಾಡ್ಕೋತಿದ್ದಾರೆ. ಯೆಸ್, ಸುನಾಮಿ ಬಂದು ಹೋದ ಮೇಲೆ‌ ಅದರ ಪರಿಣಾಮ ಜೋರಾಗಿತ್ತು. ಅದೇ ರೀತಿ ಕೆಜಿಎಫ್ ಬಂದ ಮೇಲೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಾಕಿ ಅಬ್ಬರನೂ ಜೋರಾಗಿದೆ. ಅಲ್ಲದೆ ರಾಕಿ ಅಭಿಮಾನಿ ಬಳಗನೂ ದೊಡ್ಡ ಮಟ್ಟಕ್ಕೆ ಬೆಳೆದಿದೆ. 

ಇದನ್ನೂ ಓದಿ : ಶಿವರಾಜ್ ಸಕ್ರೆ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ಸಾಥ್: ಷಡಕ್ಷರಿ ಸನ್ ಆಫ್ ಪಂಚಾಕ್ಷರಿ ಟೈಟಲ್ ಲಾಂಚ್

ಈಗ ಈ‌ಅಭಿಮಾನಿ ಬಳಗ ಎಲ್ಲಾ ಒಟ್ಟಿಗೆ ಸೇರಿ ರಾಕಿಭಾಯ್ 37 ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ ಮತ್ತೊಂದು ದಾಖಲೆ ಬರೆಯೋಕೆ ಸಕಲ ಸಿದ್ದತೆ  ನಡೆಸಿದ್ದಾರೆ.  2020ರಲ್ಲಿ ರಾಕಿ ಅಭಿಮಾನಿಗಳು ಇತಿಹಾಸದಲ್ಲಿ ಯಾವ ನಟನ ಹುಟ್ಟು ಹಬ್ಬವನ್ನ ಆಚರಿಸದ ರೀತಿ ಭರ್ಜರಿಯಾಗಿ ಯಶ್ ಹುಟ್ಟು ಹಬ್ಬವನ್ನು ಸೆಲೆಬ್ರೇಟ್ ಮಾಡಿದ್ರು. ನಗರದ ಹೊರ ವಲಯದಲ್ಲಿರುವ ನಂದಿ ಲಿಂಕ್ ಗ್ರೌಂಡ್ ನಲ್ಲಿ 10ಸಾವಿರ ಕೆಜಿ ತೂಕದ ಕೇಕ್, ಹಾಗೂ 150
ಅಡಿ ಎತ್ತರದ ಬೃಹತ್ ಕಟೌಟ್ ನಿಲ್ಲಿಸುವ ಮೂಲಕ ಸಾವಿರಾರು ಅಭಿಮಾನಿಗಳು ಒಂದು ಕಡೆ ಸೇರಿ ಸಂಭ್ರಮಿಸುವ ಮೂಲಕ  ಕೆಜಿಎಫ್ ಚಿತ್ರದಂತೆ ರಾಕಿ ಹುಟ್ಟು ಹಬ್ಬದ ಆಚರಣೆಯಲ್ಲೂ ರೆಕಾರ್ಡ್ ಮಾಡಿ ಗಮನ ಸೆಳೆದಿದ್ರು ರಾಕಿಂಗ್ ಸ್ಟಾರ್ ಅಭಿಮಾನಿಗಳು. 

ಇದರ ನಡುವೆ ಯಶ್ ಮುಂದಿನ ಸಿನಿಮಾ ಯಾವುದು, ಯಾರು ಡೈರೆಕ್ಟರ್,ಯಾರು ಪ್ರೊಡ್ಯೂಸರ್ ಎಲ್ಲವೂ ಜನವರಿ 8 ಕ್ಕೆ ಗೊತ್ತಾಗುತ್ತೆ ಅನ್ನೋ ಪಕ್ಕಾ ಇನ್ಫಾರ್ಮಶನ್ ಸಿಕ್ಕಿದೆ. ಇದು ಯಶ್ ಅಭಿಮಾನಿಗಳ ಪಾಲಿಗೆ ಸಖತ್ ನ್ಯೂಸ್ ಆಗಿರಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News