ಬೆಂಗಳೂರು: ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ರವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಹೋದರೂ ಮಾನಸಿಕವಾಗಿ ಕನ್ನಡಿಗರ ಮನದಲ್ಲಿ ಜೀವಂತ. ಅಪ್ಪು ವನ್ನು ದಿನಕ್ಕೆ ಒಂದು ಬಾರಿಯಾದರೂ ನೆನೆಯುವ ಕ್ಷಣ ಬಂದೆ ಬರುತ್ತದೆ.


COMMERCIAL BREAK
SCROLL TO CONTINUE READING

ಪವರ್ ಸ್ಟಾರ್ ಕರುನಾಡ ಗಡಿ ಮೀರಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಯುವತಿಯೊಬ್ಬಳು  ಅಪ್ಪುವಿನ ಭಾವಚಿತ್ರವನ್ನು ಎದೆ ಮೇಲೆ ಟ್ಯಾಟೊ ಹಾಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್‌ ಆಗುತ್ತಿದೆ.


ಇದನ್ನೂ ಓದಿ: Bollywood Actress: ಸಿನಿ ಪಯಣಕ್ಕೆ ಗುಡ್​ ಬಾಯ್​ ಹೇಳಿ, MBAಯತ್ತ ಒಲವು ತೋರಿದ ನಟಿ...!


ಸದ್ಯ ಯುವತಿ ಟ್ಯಾಟ್ಯೂ ಕಂಡು ಯುವರತ್ನ ಫ್ಯಾನ್ಸ್‌, ʼಅಪ್ಪು ಅಮರʼ ಎಂದಿದ್ದಾರೆ. ಸ್ಯಾಂಡಲ್‌ವುಡ್ ನ ನಗುಮೊಗದ ಒಡೆಯನನ್ನು ಕಳೆದುಕೊಂಡು 2 ವರ್ಷ ಹತ್ತಿರವಾದರೂ ಇಂದಿಗೂ ಅಪ್ಪು ಮೇಲಿನ ಪ್ರೀತಿ ಕಿಂಚಿತ್ತು ಕಡಿಮೆಯಾಗಿಲ್ಲ. ಯಾವುದೇ ಜಾತ್ರೆ, ಶುಭ ಸಮಾರಂಭಗಳಿದ್ದರೂ ಅಪ್ಪು ಭಾವಚಿತ್ರದಿಂದ ಕಂಗೊಳಿಸುತ್ತಿರುತ್ತವೆ. 


ಹಾಗೆಯೇ ಅದೆಷ್ಟೋ ಯುವಕರು ಪುನೀತ್ ರಾಜ್‌ ಕುಮಾರ್‌ ರವರ ದಾನ ಧರ್ಮವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಬಡವರಿಗೆ ದಾನ ಮಾಡುವಲ್ಲಿ ಮುಂದೆ ಬರುತ್ತಿದ್ದಾರೆ. ಅಷ್ಟೆ ಅಲ್ಲದೇ ಸಿನಿಮಾ ರಂಗದಲ್ಲಿ ಬಿಡುಗಡೆಯಾಗುವ ಹೊಸ ಚಿತ್ರಗಳಲ್ಲಿ  ಪುನೀತ್ ಗೆ  ಅರ್ಪಣೆ ಮಾಡುವುನ್ನು ನೋಡಬಹುದು. ಒಟ್ಟಿನಲ್ಲಿ ಪ್ರತಿನಿತ್ಯ ನಗುಮೊಗದ ಒಡೆಯನನ್ನು ನೆನೆಯದ ದಿನಗಳಿಲ್ಲ.


ಇದನ್ನೂ ಓದಿ: ಡೇರ್ ಡೆವಿಲ್ ಮುಸ್ತಾಫಾ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದ ನಟ ಪ್ರಕಾಶ್ ರೈ..!https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.