Actress Barkha Madan: ಒಂದು ಕಾಲದಲ್ಲಿ ಬಿಕಿನಿಯಲ್ಲಿ ಮಿಂಚಿದ್ದ ಬರ್ಖಾ ಮದನ್; ಇಂದು ಬೌದ್ಧ ಸನ್ಯಾಸಿನಿ..!

Bollywood actress Barkha Madan: ಒಂದು ಕಾಲದಲ್ಲಿ ಬರ್ಖಾ ಮದನ್ ಎಂದರೆ ಹುಡುಗರಿಗೆ ಅದೆನೋ ಕ್ರೆಜ್‌.  ತಮ್ಮ ನಟನೆಯ ಮೂಲಕ ಮನಗೆದ್ದಿದ್ದ, ಬರ್ಖಾ ಮದನ್ ಇಂದು ಬೌದ್ಧ ಸನ್ಯಾಸಿನಿ ಆಗಿದ್ದಾರೆ. 

Written by - Zee Kannada News Desk | Last Updated : Jun 14, 2023, 12:00 PM IST
  • ಬಾಲಿವುಡ್‌ ನಟಿ, ನಿರ್ದೇಶಕಿ ಆಗಿದ್ದ ಬರ್ಖಾ ಮದನ್ ಇಂದು ಬೌದ್ಧ ಸನ್ಯಾಸಿನಿ
  • ಚಿತ್ರರಂಗ ತೊರೆದ ಬಾಲಿವುಡ್‌ ನಟಿ ಬರ್ಖಾ
  • ಬರ್ಖಾ ಮದನ್ ನಟಿ ಮಾತ್ರವಲ್ಲ ನಿರ್ದೇಶಕಿ ಕೂಡ ಹೌದು
Actress Barkha Madan: ಒಂದು ಕಾಲದಲ್ಲಿ ಬಿಕಿನಿಯಲ್ಲಿ ಮಿಂಚಿದ್ದ ಬರ್ಖಾ ಮದನ್; ಇಂದು ಬೌದ್ಧ ಸನ್ಯಾಸಿನಿ..! title=

ಮುಂಬೈ: ಒಂದು ಕಾಲದಲ್ಲಿ ಬರ್ಖಾ ಮದನ್ ಎಂದರೆ ಹುಡುಗರಿಗೆ ಅದೆನೋ ಒಂದು ಕ್ರೆಜ್‌. 17 ಆಗಸ್ಟ್ 1970 ರಂದು ಪಂಜಾಬ್‌ನಲ್ಲಿ ಜನಿಸಿದ ನಟಿ ಬರ್ಖಾ ಮದನ್, ರಂಗಭೂಮಿ ಮತ್ತು ನಾಟಕದ ಜೊತೆಯಲ್ಲಿ ಮಾಡೆಲಿಂಗ್‌, ಬಳಿಕ ಸಿನಿಮಾ ನಟನೆ ಕಡೆ ಮುಖ ಮಾಡಿದರು. 

ಅಷ್ಟೇ ಅಲ್ಲದೇ ನಟಿ ಬರ್ಖಾ, ಸುಶ್ಮಿತಾ ಸೇನ್ ಹಾಗೂ ಐಶ್ವರ್ಯಾ ರೈ ಜೊತೆಗೆ, ಅವರು 1994 ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್‌ಗೆ ತಲುಪಿ ʼಮಿಸ್ ಟೂರಿಸಂ ಇಂಟರ್‌ನ್ಯಾಶನಲ್  ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.

ಇದನ್ನೂ ಓದಿ: Toby Movie: ರಾಜ್ ಬಿ ಶೆಟ್ಟಿ ಅಭಿನಯದ ʼಟೋಬಿʼ ಚಿತ್ರ ರೀಲಿಸ್‌ ಗೆ ಡೆಟ್‌ ಫಿಕ್ಸ್..!

1996 ರಲ್ಲಿ ಅಕ್ಷಯ್ ಕುಮಾರ್, ರೇಖಾ ಮತ್ತು ರವೀನಾ ಟಂಡನ್ ನಟನೆಯ ʼಖಿಲಾಡಿಯೋಂ ಕಾ ಖಿಲಾಡಿʼ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳುವ ಮೂಲಕ ಬಾಲಿವುಡ್‌ ಪಾದರ್ಪಣೆ ಮಾಡಿದರು. ʼಖಿಲಾಡಿʼ ಕೊನೆಯ ಸರಣಿಯಲ್ಲಿ ಅಭಿನಯಿಸಿ ಅಭಿಮಾನಿಗಳ ಪ್ರೀತಿ ಪಾತ್ರಕ್ಕೆ ಕಾರಣರಾದರು. 

ನಿರ್ಮಾಣ ,ನಿರ್ದೆಶನವಲ್ಲದೇ ರಾಮ್ ಗೋಪಾಲ್ ವರ್ಮಾ ಅವರ ಭಯಾನಕ ಚಲನಚಿತ್ರವಾದ ʼಭೂತ್‌ʼ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ʼಸೋಚ್ ಲೋ ಮತ್ತು ಸುರ್ಖಾಬ್ʼ ನಂತಹ ಒಂದೆರಡು ಚಲನಚಿತ್ರಗಳನ್ನು ತಾವೇ ನಿರ್ಮಿಸಿದ್ದಾರೆ.

ಬರ್ಖಾ ಮದನ್ ನಿರ್ಮಾಣದ ʼಸುರ್ಖಾಬ್ʼ ಚಿತ್ರವು 46 ನೇ ವಾರ್ಷಿಕ ವರ್ಲ್ಡ್‌ಫೆಸ್ಟ್-ಹ್ಯೂಸ್ಟನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಪ್ರಶಸ್ತಿ, ಪ್ಲಾಟಿನಂ ರೆಮಿ ಪ್ರಶಸ್ತಿ ಸೇರಿದಂತೆ 9 ಅಂತರರಾಷ್ಟ್ರೀಯ ಪ್ರಶಸ್ತಿ, ಮ್ಯಾಡ್ರಿಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರದ ಅತ್ಯುತ್ತಮ ನಿರ್ಮಾಪಕ,  2016 ರಲ್ಲಿ ಅತ್ಯುತ್ತಮ ಸಂಪಾದಕರಿಗಾಗಿ ವಿಶ್ವ ಚಲನಚಿತ್ರ  ಎಂದು ಗೋಲ್ಡನ್ ವರ್ಲ್ಡ್ ಪ್ರಶಸ್ತಿ ಪಡೆದುಕೊಂಡಿದೆ.  

ಇದನ್ನೂ ಓದಿ: ‘ಹೌದು ಅಣ್ಣಾ.. ನಾನು ಹೀರೋಯಿನ್​ ಅಲ್ಲ’: ʼನಟ ಸಾರ್ವಭೌಮʼ ನಟಿ ಅನುಪಮಾ ಪರಮೇಶ್ವರನ್​ ಗರಂ..!

ತಾವೇ ನಿರ್ಮಿಸಿ ನಟಿಸಿರುವ ʼಸುರ್ಖಾಬ್ʼ ಇವರ ಕೊನೆಯ ಚಿತ್ರವಾಯಿತು. ಈ ನಟಿಯನಟನೆ,ನಿರ್ಮಾಣದ ಸಿನಿಮಾಗಳೆಲ್ಲಾವು ಹಿಟ್‌ ಆಗುತ್ತಿದ್ದವು. ಅದೇನು ಆಯಿತೋ ಏನೊ 2000 ರಲ್ಲಿ ಹಿಮಾಚಲ ಪ್ರದೇಶದಲ್ಲಿರುವ ಬೌದ್ದ ಶಾಲೆಗೆ ಭೇಟಿ ನೀಡಿದ ಬಳಿಕ ಸಿನಿಮಾದ ಮೇಲೆ ಆಸಕ್ತಿ ಕಳೆದುಕೊಂಡರು.

ಚಿತ್ರ ಮೇಲೆ ಆಸಕ್ತಿ ತೊರೆದು ನೇಪಾಳದ ಕಠ್ಮಂಡುವಿನಲ್ಲಿ ದೀಕ್ಷೆ ಪಡೆದ ನಂತರ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದರು. ಮಾಡೆಲ್ ಮತ್ತು ನಟನೆಯಿಂದ ದೂರ ಆದ ಬಳಿಕ ಇವರನ್ನು ಗ್ಯಾಲ್ಟೆನ್ ಸ್ಯಾಮ್ಟೆನ್ ಎಂದು ಕರೆಯುತ್ತಾರೆ. ಈಗ ನಟಿ ಹಿಮಾಲಯನ್ ಅಲ್ಲದ ಭಾರತೀಯ ಟಿಬೆಟಿಯನ್ ಬೌದ್ಧ ಸನ್ಯಾಸಿನಿಯರಲ್ಲಿ ಒಬ್ಬರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News