ನವದೆಹಲಿ: ಇತ್ತೀಚಿಗೆ ಮಾರ್ಚ್ 14 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಮೀರ್ ಖಾನ್, ಇದೇ ಮೊದಲ ಬಾರಿಗೆ ಪತ್ನಿ ಕಿರಣ್ ರಾವ್ ಜೊತೆಗಿನ ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.


COMMERCIAL BREAK
SCROLL TO CONTINUE READING

ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅಮೀರ್ ಖಾನ್ (Aamir Khan)"ಕಿರಣ್ ಮತ್ತು ನಾನು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ. ಒಬ್ಬರಿಗೊಬ್ಬರ ಮೇಲೆ ಪರಸ್ಪರ ತುಂಬಾ ಗೌರವ ಮತ್ತು ಪ್ರೀತಿ ಇದೆ. ಆದರೆ ಜನರು ಇದನ್ನು ಸ್ವೀಕರಿಸುವುದಿಲ್ಲ ಮತ್ತು ನಾನು ಅದನ್ನು ಸ್ವೀಕರಿಸುತ್ತೇನೆ, ಏಕೆಂದರೆ ನಾವು ಇದನ್ನು ಗಮನಿಸಲು ಹೋಗುವುದಿಲ್ಲ" ಎಂದು ಅವರು ಹೇಳಿದರು.


ಇನ್ನು ಮುಂದುವರೆದು "ನಿಜವಾಗಿ, ಕಿರಣ್ ಮತ್ತು ನಾನು ನಾವು ಒಬ್ಬರನ್ನೊಬ್ಬರು ತುಂಬಾ ಇಷ್ಟಪಡುತ್ತೇವೆ ಮತ್ತು ಒಬ್ಬರನ್ನೊಬ್ಬರು ಕುಟುಂಬವನ್ನು ನಿಜವಾದ ಅರ್ಥದಲ್ಲಿ ಪರಿಗಣಿಸುತ್ತೇವೆ ಎಂದು ಅರಿತುಕೊಂಡಿದ್ದೇವೆ, ಕಿರಣ್ ಮತ್ತು ನಾನು ನಿಜವಾಗಿ ಕುಟುಂಬವಾಗಿದ್ದೇವೆ.ಆದರೆ ನಮ್ಮ ಗಂಡ ಮತ್ತು ಹೆಂಡತಿಯ ಸಂಬಂಧವು ಒಂದು ನಿರ್ದಿಷ್ಟ ಬದಲಾವಣೆಯನ್ನು ಅನುಭವಿಸಿದೆ ಮತ್ತು ನಾವು ಮದುವೆಯ ಸಂಸ್ಥೆಯನ್ನು ಗೌರವಿಸಲು ಬಯಸುತ್ತೇವೆ.ಯಾವಾಗಲೂ ಒಬ್ಬರಿಗೊಬ್ಬರು ಜೊತೆಯಾಗಿ ಇರುತ್ತೇವೆ.ನಾವು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ.ನಾವು ಹತ್ತಿರದಲ್ಲಿಯೇ ವಾಸಿಸುತ್ತೇವೆ.ಆದರೆ ನಾವು ಇನ್ನು ಮುಂದೆ ಗಂಡ ಮತ್ತು ಹೆಂಡತಿಯಲ್ಲ ಹಾಗಾಗಿ ನಾವು ಅದನ್ನು ತ್ಯಜಿಸಲು ನಿರ್ಧರಿಸಿದ್ದೇವೆ." ಎಂದು ಅವರು ಹೇಳಿದರು.


ಇದನ್ನೂ ಓದಿ: ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಲ್ಲ, ಆದರೆ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಾರೆ: ಕಪಿಲ್ ಸಿಬಲ್


ತಮ್ಮ ಮಾಜಿ ಪತ್ನಿ ರೀನಾ ದತ್ತಾ ಬಗ್ಗೆ ಪ್ರಸ್ತಾಪಿಸುತ್ತಾ ಕಿರಣ್ ಳಿಂದಾಗಿ ತಾನು ಅವರಿಂದ ಬೇರೆಯಾಗಲಿಲ್ಲ ಎಂದು ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ.ಅವರು ಕಿರಣ್ ರಾವ್ ಮದುವೆಯಾಗುವ ಮೊದಲು ರೀನಾ ದತ್ತಾ ಅವರನ್ನು ಮದುವೆಯಾಗಿ 16 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು.ಈ ದಂಪತಿಗೆ ಜುನೈದ್ ಎಂಬ ಮಗ ಮತ್ತು ಮಗಳು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ.


ಅಮೀರ್ ಖಾನ್ ಮತ್ತು ಕಿರಣ್ ರಾವ್ ಡಿಸೆಂಬರ್ 28, 2005 ರಂದು ವಿವಾಹವಾದರು.ಅವರು ಲಗಾನ್ ಸೆಟ್‌ನಲ್ಲಿ ಅಶುತೋಷ್ ಗೋವಾರಿಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು.ಡಿಸೆಂಬರ್ 5, 2011 ರಂದು, ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ತಮ್ಮ ಮಗ ಆಜಾದ್ ರಾವ್ ಖಾನ್ ಜನನವನ್ನು ಘೋಷಿಸಿದರು.ಜುಲೈ 3 ರಂದು ಜಂಟಿ ಹೇಳಿಕೆಯೊಂದಿಗೆ ಇಬ್ಬರು ತಮ್ಮ 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದರು.ಇದೇ ವೇಳೆ ಅಮೀರ್ ಮತ್ತು ಕಿರಣ್ ತಮ್ಮ ಮಗು ಆಜಾದ್ ರಾವ್ ಖಾನ್ ಅವರಿಗೆ ಸಹ-ಪೋಷಕರಾಗಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: Karnataka Hijab Controversy: ಹಿಜಾಬ್ ವಿವಾದದಲ್ಲಿ HC ತೀರ್ಪಿನ ಕುರಿತು AIMIM ಮುಖ್ಯಸ್ಥ Asaduddin Owaisi ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.