ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಲ್ಲ, ಆದರೆ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಾರೆ: ಕಪಿಲ್ ಸಿಬಲ್

ರಾಹುಲ್ ಗಾಂಧಿ ಈಗಾಗಲೇ ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ‘ವಾಸ್ತವ ಅಧ್ಯಕ್ಷ'ರಾಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್  ಹೇಳಿದ್ದಾರೆ. 

Last Updated : Mar 15, 2022, 04:26 PM IST
  • ಗಾಂಧಿ ಕುಟುಂಬ ರಾಜಕಾರಣದ ವಿರುದ್ಧ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅಸಮಾಧಾನ
  • ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯ ಬಂದಿದೆ
  • ಗಾಂಧಿಗಳು ಸ್ವಯಂಪ್ರೇರಣೆಯಿಂದ ಅಧಿಕಾರದಿಂದ ದೂರ ಸರಿಯಬೇಕು ಎಂದು ಹೇಳಿದ ಕಪಿಲ್ ಸಿಬಲ್
ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಲ್ಲ, ಆದರೆ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತಾರೆ: ಕಪಿಲ್ ಸಿಬಲ್ title=
ಗಾಂಧಿ ಕುಟುಂಬದ ವಿರುದ್ಧ ಸಿಬಲ್ ಅಸಮಾಧಾನ

ಕೋಲ್ಕತ್ತಾ: ‘ಪಂಚ’ರಾಜ್ಯಗಳ ಚುನಾವಣೆ(5 State Election Result)ಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಕಂಡಿದ್ದು, ದೊಡ್ಡ ಮುಖಭಂಗ ಅನುಭವಿಸಿದೆ. ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ ಎದುರು ಧೂಳಿಪಟವಾಗಿರುವುದು, ಉತ್ತರಪ್ರದೇಶದಲ್ಲಿ ಕೇವಲ 2 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟುಕೊಂಡಿರುವುದು, ಗೋವಾದಲ್ಲಿ ಸರ್ಕಾರ ರಚಿಸುವ ಆಸೆ ಈಡೇರದಿರುವುದು ‘ಕೈ’ ನಾಯಕರಿಗೆ ಆಘಾತವನ್ನುಂಟು ಮಾಡಿದೆ.

ಐದೂ ರಾಜ್ಯಗಳಲ್ಲಿ ನೀರಸ ಪ್ರದರ್ಶನದಿಂದ ಆಘಾತಕ್ಕೊಳಗಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾನುವಾರ 5 ಗಂಟೆಗಳ ಸುದೀರ್ಘ ಸಭೆ(CWC Meeting) ನಡೆಸಿತು. ಈ ವೇಳೆ ಪಕ್ಷದ ಸದಸ್ಯರು ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ತಮ್ಮ ನಂಬಿಕೆಯನ್ನು ಪುನರುಚ್ಚರಿಸಿದ ಕಾರಣ ಯಥಾಸ್ಥಿತಿಯಿಂದ ದೂರ ಸರಿಯದಿರಲು ನಿರ್ಧರಿಸಲಾಯಿತು.

ಇದನ್ನೂ ಓದಿ: ಕರ್ನಾಟಕ ಬಳಿಕ ಗೋವಾದಲ್ಲಿಯೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ತೆರಿಗೆ ವಿನಾಯಿತಿ

ಆದರೆ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್(Kapil Sibal) ಮಾತ್ರ ಗಾಂಧಿ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಪಂಚ’ ರಾಜ್ಯಗಳ ಚುನಾವಣೆಯಲ್ಲಿ ಸೋಲು ಅನುಭವಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು, ‘ಗಾಂಧಿಗಳು ನಾಯಕತ್ವದ ಸ್ಥಾನಗಳಿಂದ ದೂರ ಸರಿಯಲು ಮತ್ತು ಇತರರಿಗೆ ಅವಕಾಶ ನೀಡುವ ಸಮಯ ಬಂದಿದೆ’ ಎಂದು ಹೇಳಿದ್ದಾರೆ. ‘ಗಾಂಧಿಗಳು ಸ್ವಯಂಪ್ರೇರಣೆಯಿಂದ ದೂರ ಸರಿಯಬೇಕು, ಏಕೆಂದರೆ ನಾಮನಿರ್ದೇಶನಗೊಂಡ ಸಂಸ್ಥೆಯು ಅಧಿಕಾರದ ಹಿಡಿತವನ್ನು ಮುಂದುವರಿಸಬಾರದು ಅಂತಾ ಅವರಿಗೆ ಎಂದಿಗೂ ಹೇಳುವುದಿಲ್ಲ’ವೆಂದು ತಿಳಿಸಿದ್ದಾರೆ. 

ಪುನಃ ಪಕ್ಷದ ಮುಖ್ಯಸ್ಥರಾಗಿ(Congress President) ಹಿಂತಿರುಗುವಂತೆ ರಾಹುಲ್ ಗಾಂಧಿಯವರಿಗೆ ಹೆಚ್ಚುತ್ತಿರುವ ಬೇಡಿಕೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಬಲ್, ‘ರಾಹುಲ್ ಈಗಾಗಲೇ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ‘ವಾಸ್ತವ ಅಧ್ಯಕ್ಷ’ರಾಗಿದ್ದಾರೆ ಎಂದು ಹೇಳಿದರು.   

ಇದನ್ನೂ ಓದಿ: Ujjwala Yojana: ಹೋಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್! 1.65 ಕೋಟಿ ಜನರಿಗೆ ಉಚಿತ LPG ಸಿಲಿಂಡರ್

ಯಾವ ಸಾಮರ್ಥ್ಯದಲ್ಲಿ ಸಿಎಂ ಘೋಷಿಸಿದರು?

‘ರಾಹುಲ್ ಗಾಂಧಿ ಪಂಜಾಬ್‌ಗೆ ಹೋಗಿ ಚರಣ್‌ಜಿತ್ ಸಿಂಗ್ ಚನ್ನಿ(Charanjit Singh Channi) ಮುಖ್ಯಮಂತ್ರಿಯಾಗುತ್ತಾರೆ ಎಂದು ಘೋಷಿಸಿದರು. ಅವರು ಯಾವ ಸಾಮರ್ಥ್ಯದ ಮೇಲೆ ಈ ರೀತಿ ಘೋಷಿಸಿದರು? ರಾಹುಲ್ ಪಕ್ಷದ ಅಧ್ಯಕ್ಷರಲ್ಲ, ಆದರೆ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅವರು ಈಗಾಗಲೇ ವಾಸ್ತವಿಕ ಅಧ್ಯಕ್ಷರಾಗಿದ್ದಾರೆ. ಹೀಗಿರುವಾಗ ಅವರು ಅಧಿಕಾರದ ಹಿಡಿತವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಏಕೆ ಕೇಳುತ್ತಿದ್ದಾರೆ? ಎಂದು ಸಿಬಲ್ ಪ್ರಶ್ನಿಸಿದ್ದಾರೆ.

‘ಸಬ್ ಕಿ ಕಾಂಗ್ರೆಸ್’ಗಾಗಿ ಹೋರಾಟ

‘ನನ್ನ ಕೊನೆಯ ಉಸಿರು ಇರುವವರೆಗೂ ‘ಸಬ್ ಕಿ ಕಾಂಗ್ರೆಸ್’ಗಾಗಿ ನಾನು ಹೋರಾಡುತ್ತೇನೆ. ಈ ‘ಸಬ್ ಕಿ ಕಾಂಗ್ರೆಸ್’ ಎಂದರೆ ಭಾರತದಲ್ಲಿ ಬಿಜೆಪಿಯನ್ನು ಬಯಸದ ಎಲ್ಲ ಜನರನ್ನು ಒಟ್ಟುಗೂಡಿಸುವುದಾಗಿದೆ’ ಅಂತಾ ಸಿಬಲ್(Kapil Sibal) ಹೇಳಿದ್ದಾರೆ. A, B ಅಥವಾ C ಇಲ್ಲದೆ ಕಾಂಗ್ರೆಸ್ ಇರುವುದಿಲ್ಲವೆಂದು ಕೆಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನಿಸ್ಸಂಶಯವಾಗಿ ‘ಘರ್ ಕಿ ಕಾಂಗ್ರೆಸ್’ ಇಲ್ಲದೆ ‘ಸಬ್ ಕಿ ಕಾಂಗ್ರೆಸ್’ ಉಳಿಯುವುದಿಲ್ಲವೆಂದು ಅವರು ನಂಬುತ್ತಾರೆ. ಇದೇ ನಮಗೆ ಎದುರಾಗಿರುವ ಸವಾಲು ಎಂದು ಸಿಬಲ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News