ನವದೆಹಲಿ : ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸ್ಯಾಂಡಲ್ ವುಡ್ ಸ್ಟಾರ್ ನಟ 'ಯಶ್' ಬಳಿ ಕ್ಷಮೆ ಯಾಚಿಸಿದ್ದಾರೆ. ಅಮೀರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಸಿನಿಮಾವು ಏಪ್ರಿಲ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ನಟ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್ ಚಾಪ್ಟರ್ 2 ನೊಂದಿಗೆ ಪೈಪೋಟಿ ನೀಡಲಿದೆ. ಎರಡೂ ಸಿನಿಮಾಗಳು ಪೈಪೋಟಿಗೆ ಕಾರಣವಾಗಿದ್ದಕ್ಕೆ ಯಶ್ ಬಳಿ ಅಮೀರ್ ಕ್ಷಮೆ ಕೇಳಿದ್ದಾರೆ.


COMMERCIAL BREAK
SCROLL TO CONTINUE READING

ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಫೈಟ್ 


ಕೆಜಿಎಫ್ ಚಾಪ್ಟರ್ 2(KGF Chapter 2) ನಿರ್ಮಾಪಕರು ಈಗಾಗಲೇ ಸಿನಿಮಾ ಬಿಡುಗಡೆ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ. ಇದೀಗ ಅಮೀರ್ ಖಾನ್ ಅಭಿನಯದ ಸಿನಿಮಾ ಕೂಡ ಅದೇ ದಿನ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇತರ ನಿರ್ಮಾಪಕರು ನಿಗದಿಪಡಿಸಿದ ದಿನಾಂಕವನ್ನು ನಾನು ಎಂದಿಗೂ ಆಯ್ಕೆ ಮಾಡುವುದಿಲ್ಲ. ನಾನು ಚಿತ್ರದಲ್ಲಿ ಸಿಖ್ ಪಾತ್ರದಲ್ಲಿ ನಟಿಸುತ್ತಿದ್ದೇನೆ, ಅದಕ್ಕಾಗಿಯೇ ನಾವು ಬೈಸಾಖಿಯಲ್ಲಿ 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ.


ಇದನ್ನೂ ಓದಿ : Video : ತೆಲುಗು RRR ಸಿನಿಮಾ 'ನಾಟು ನಾಟು ಸಾಂಗ್'ಗೆ ಪುನೀತ್ ರಾಜ್‌ಕುಮಾರ್ ಡಾನ್ಸ್!


ಅಮೀರ್ ಖಾನ್ ಯಶ್ ಬಳಿ ಕ್ಷಮೆ ಕೇಳಿದ್ದೇಕೆ?


ಅಮೀರ್ ಖಾನ್(Aamir Khan), 'ಈ ಘೋಷಣೆಗೂ ಮುನ್ನ ನಾನು ಕೆಜಿಎಫ್ 2 ಚಿತ್ರದ ನಿರ್ಮಾಪಕ ಮತ್ತು ನಟ ಯಶ್ ಅವರಲ್ಲಿ ಕ್ಷಮೆಯಾಚಿಸಿದ್ದೆ. 'ಲಾಲ್ ಸಿಂಗ್ ಚಡ್ಡಾ' ಬಿಡುಗಡೆಗೆ ಏಪ್ರಿಲ್ 14 ಅತ್ಯಂತ ಸೂಕ್ತವಾದ ದಿನಾಂಕ ಎಂದು ನಾನು ಅವರಿಗೆ ವಿವರಿಸಿದೆ. ಅವರು ನನ್ನ ಮಾತನ್ನು ಅರ್ಥಮಾಡಿಕೊಂಡರು ಮತ್ತು ನನ್ನ ಮಾತನ್ನು ಒಪ್ಪಿಕೊಂಡರು. ಅಮೀರ್ ಖಾನ್ ಅವರ ಚಿತ್ರ 'ಲಾಲ್ ಸಿಂಗ್ ಚಡ್ಡಾ' ಹಾಲಿವುಡ್ ಚಿತ್ರ 'ಫಾರೆಸ್ಟ್ ಗಂಪ್' ನ ಹಿಂದಿ ರೀಮೇಕ್.


Laal Singh Chaddha) ಅಮೀರ್ ಖಾನ್ ಜೊತೆಗೆ ಕರೀನಾ ಕಪೂರ್ ಖಾನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಥಗ್ಸ್ ಆಫ್ ಹಿಂದೂಸ್ತಾನ್ ನಂತರ ಅಮೀರ್ ಖಾನ್ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಹೀಗಿರುವಾಗ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕು.


ಇದನ್ನೂ ಓದಿ : Divorce Rumours ಹಿನ್ನೆಲೆ ಮೌನ ಮುರಿದ Priyanka Chopra, Nick Jonas ವೀಡಿಯೊ ಕಾಮೆಂಟ್ನಲ್ಲಿ ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.