Divorce Rumours ಹಿನ್ನೆಲೆ ಮೌನ ಮುರಿದ Priyanka Chopra, Nick Jonas ವೀಡಿಯೊ ಕಾಮೆಂಟ್ನಲ್ಲಿ ಹೇಳಿದ್ದೇನು?

Priyanka Chopra Divorce Rumours - ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತನ್ನ ಇನ್ಸ್ತಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ತಮ್ಮ ಪತಿ ನಿಕ್ ಜೋನಾಸ್ (Nick Jonas) ಅವರ ಸರ್ನೇಮ್ ಅನ್ನು ತೆಗೆದುಹಾಕಿದ್ದಾಳೆ. ಪ್ರಿಯಾಂಕಾ ಮಾಡಿರುವ ಈ ಕೆಲಸದ ಬಳಿಕ ಆಕೆಯ ವಿವಾಹ ವಿಚ್ಛೇದನೆಯ ಕುರಿತು ವದಂತಿಗಳು ಕೇಳಿಬಂದಿವೆ. ಅಷ್ಟೇ ಅಲ್ಲ ಪ್ರಿಯಾಂಕಾ ಹಾಗೂ ಅವರ ಪತಿ ನಿಕ್ ಜೋನಾಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳು ಕೂಡ ಕೇಳಿಬಂದಿವೆ. 

Written by - Nitin Tabib | Last Updated : Nov 23, 2021, 03:57 PM IST
  • ವಿಚ್ಛೇದನದ ವರದಿಗಳ ಹಿನ್ನೆಲೆ ಮೌನ ಮುರಿದ ಪ್ರಿಯಾಂಕಾ.
  • ನಿಕ್ ಖಾತೆಯ ವಿಡಿಯೋವೊಂದಕ್ಕೆ ಕಾಮೆಂಟ್ ಮಾಡುವ ಮೂಲಕ ಪ್ರಿಯಾಂಕಾ ತನ್ನ ಮೌನ ಮುರಿದಿದ್ದಾಳೆ.
  • ಮೌನ ಮುರಿದ ಪ್ರಿಯಾಂಕಾ ಹೇಳಿರುವ ಸತ್ಯ ಎಂದು ತಿಳಿಯಲು ವರದಿ ಓದಿ
Divorce Rumours ಹಿನ್ನೆಲೆ ಮೌನ ಮುರಿದ Priyanka Chopra, Nick Jonas ವೀಡಿಯೊ ಕಾಮೆಂಟ್ನಲ್ಲಿ ಹೇಳಿದ್ದೇನು? title=
Priyanka Chopra Break Silence On Divorce(File Photo)

Priyanka Chopra Break Silence On Divorce - ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತನ್ನ ಇನ್ಸ್ತಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರಿನ ಮುಂದೆ ಇದ್ದ ತಮ್ಮ ಪತಿ ನಿಕ್ ಜೋನಾಸ್ ಅವರ ಸರ್ನೇಮ್ ಅನ್ನು ತೆಗೆದುಹಾಕಿದ್ದಾಳೆ. ಪ್ರಿಯಾಂಕಾ ಮಾಡಿರುವ ಈ ಕೆಲಸದ ಬಳಿಕ ಆಕೆಯ ವಿವಾಹ ವಿಚ್ಛೇದನೆಯ ಕುರಿತು ವದಂತಿಗಳು ಕೇಳಿಬಂದಿವೆ. ಅಷ್ಟೇ ಅಲ್ಲ ಪ್ರಿಯಾಂಕಾ ಹಾಗೂ ಅವರ ಪತಿ ನಿಕ್ ಜೋನಾಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳು ಕೂಡ ಕೇಳಿಬಂದಿವೆ.  ಇದರ ಜೊತೆಗೆ ಇಬ್ಬರೂ ಶೀಘ್ರದಲ್ಲಿಯೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಈ ನಡುವೆ ಪತಿ ನಿಕ್ ಜೋನಾಸ್ ವಿಡಿಯೋಗೆ ಪ್ರಿಯಾಂಕಾ ಈ ರೀತಿ ಕಾಮೆಂಟ್ ಮಾಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 
 
 
 

 
 
 
 
 
 
 
 
 
 
 

A post shared by Nick Jonas (@nickjonas)

ನಿಕ್ ವಿಡಿಯೋಗೆ ಪ್ರಿಯಾಂಕ ಮಾಡಿರುವ ಕಾಮೆಂಟ್ ಆದ್ರು ಏನು?
ನಿಕ್ ಜೋನಾಸ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವೀಡಿಯೊವೊಂದನ್ನು (Nick Jonas Workout Videos)  ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ವರ್ಕೌಟ್ ಮಾಡುತ್ತಿರುವುದನ್ನು ನೀವು ಕಾಣಬಹುದು. ಈ ವಿಡಿಯೋಗೆ ಪ್ರತಿಕ್ರಿಯಿಸಿದ ಪತ್ನಿ ಪ್ರಿಯಾಂಕಾ, 'Damn! I just died in your arms… 😍 🥵 ❤️' ಎಂದು ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಪ್ರಿಯಾಂಕಾ ಕಣ್ಣುಗಳಲ್ಲಿ ಪ್ರೀತಿ ಮತ್ತು ಹೃದಯದ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಈ ಕಾಮೆಂಟ್ ಮೂಲಕ ವಿಚ್ಛೇದನದ ಸುದ್ದಿಗೆ ತೆರೆ ಎಳೆದಿದ್ದು, ತಮ್ಮ ಮತ್ತು ನಿಕ್ ಜೋನಾಸ್ ನಡುವೆ ಎಲ್ಲವೂ ಸರಿಯಾಗಿಯೇ ನಡೆದಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇದನ್ನೂ ಓದಿ-Instagram ಪ್ರೊಫೈಲ್‌ನಿಂದ ಪತಿ ಹೆಸರು ತೆಗೆದ ಪ್ರಿಯಾಂಕಾ ಚೋಪ್ರಾ!

ಇದಕ್ಕೂ ಮುನ್ನ ವಿಚ್ಛೇದನೆ ವದಂತಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ತಾಯಿ
ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ತಾಯಿ ಮಧು ಚೋಪ್ರಾ ಆಗಾಗ್ಗೆ ತಮ್ಮ ಮಗಳು ಮತ್ತು ಅಳಿಯನೊಂದಿಗೆ ಸಮಯ ಕಳೆಯುತ್ತಿರುವುದನ್ನು ಹಲವು ಬಾರಿ ವೀಕ್ಷಿಸಲಾಗಿದೆ. ಅವರು ತಮ್ಮ ಅಳಿಯನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ವಿಚ್ಛೇದನದ ಸುದ್ದಿ ಬಂದಾಗ ಅವರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದರು. ವದಂತಿಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು ಅವು ಕೇವಲ ಬಕ್ವಾಸ್ ಸುದ್ದಿಗಳು ಹೇಳಿದ್ದರು. ನ್ಯೂಸ್ 18 ಜೊತೆಗಿನ ಸಂಭಾಷಣೆಯ ಸಮಯದಲ್ಲಿ, ಪ್ರಿಯಾಂಕಾ ಮತ್ತು ನಿಕ್ ನಡುವೆ ಎಲ್ಲವೂ ಸರಿಯಾಗಿದೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ-Nayanthara: ಲೇಡಿ ಸೂಪರ್​ಸ್ಟಾರ್ ನಯನತಾರಾ ಸಂಭಾವನೆ ಎಷ್ಟು ಗೊತ್ತಾ..?

ಮೂರು ವರ್ಷಗಳ ಹಿಂದೆ ವಿವಾಹ ನಡೆದಿದೆ
ಪ್ರಿಯಾಂಕಾ ಮತ್ತು ನಿಕ್ ಡಿಸೆಂಬರ್ 1, 2018 ರಂದು ಜೋಧ್‌ಪುರದಲ್ಲಿ ವಿವಾಹವಾಗಿದ್ದಾರೆ. ಇಬ್ಬರೂ ಹಿಂದೂ ಮತ್ತು ನಂತರ ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹ ಮಾಡಿಕೊಂಡಿದ್ದಾರೆ. ಮದುವೆಯಲ್ಲಿ ಕುಟುಂಬದವರು ಮತ್ತು ಕೆಲವು ವಿಶೇಷ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು. ಈ ದಿನಗಳಲ್ಲಿ ಪ್ರಿಯಾಂಕಾ ಚೋಪ್ರಾ ತನ್ನ ಹೊಸ ಹಾಲಿವುಡ್ ಪ್ರಾಜೆಕ್ಟ್ ಕುರಿತು ಚರ್ಚೆಯಲ್ಲಿದ್ದಾರೆ. ಅವರು ಶೀಘ್ರದಲ್ಲೇ ಹಾಲಿವುಡ್ ಚಿತ್ರ 'ಮ್ಯಾಟ್ರಿಕ್ಸ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಸೂಪರ್ಹಿಟ್ ಫ್ರ್ಯಾಂಚೈಸ್ ಆಗಿದ್ದು, ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ-Kamal Haasan Covid positive : ನಟ ಕಮಲ್ ಹಾಸನ್ ಗೆ ಕೋವಿಡ್ ಪಾಸಿಟಿವ್! ಚೆನ್ನೈ ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News