ಮುಂಬೈ: ಇತ್ತೀಚೆಗೆ ತಮ್ಮ 15 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದ ಬಾಲಿವುಡ್ ನಟ ಅಮೀರ್ ಖಾನ್ (Aamir Khan) ತಮ್ಮ ಎರಡನೇ ಪತ್ನಿ ಕಿರಣ್ ರಾವ್ ವಿಚ್ಛೇದನ ಪಡೆಯುತ್ತಿದ್ದಾರೆ. ಈ ಕುರಿತಂತೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದ್ದು ಸುದೀರ್ಘ ಹೇಳಿಕೆಯಲ್ಲಿ, ದಂಪತಿಗಳು ಕಳೆದ ಕೆಲವು ದಿನಗಳಿಂದ ತಾವು ಪರಸ್ಪರ ಬೇರಾಗುವ ಬಗ್ಗೆ ಯೋಚಿಸುತ್ತಿದ್ದೆವು ಎಂದು ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಅಮೀರ್ ಖಾನ್ (Aamir Khan) ಮತ್ತು ಕಿರಣ್ ರಾವ್ (Kiran Rao) - 'ಈ 15 ಸುಂದರ ವರ್ಷಗಳಲ್ಲಿ ನಾವು ಒಟ್ಟಿಗೆ ಜೀವನದ ಅನುಭವಗಳು, ಸಂತೋಷ ಮತ್ತು ನಗೆಯನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ - ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಅಲ್ಲ, ಆದರೆ ಪರಸ್ಪರ ಪೋಷಕರು ಮತ್ತು ಕುಟುಂಬವಾಗಿರುತ್ತೇವೆ ಎಂದಿದ್ದಾರೆ.


ಇದನ್ನೂ ಓದಿ- Rocking Star Yash: ಐಷಾರಾಮಿ ಬಂಗಲೆಗೆ ಎಂಟ್ರಿ ಕೊಟ್ಟ 'ರಾಕಿ ಭಾಯ್' ದಂಪತಿ


ಪರಸ್ಪರ ಬೇರಾಗುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ಅಮೀರ್ ಖಾನ್ ಮತ್ತು ಅವರ ಎರಡನೇ ಪತ್ನಿ ಕಿರಣ್ ರಾವ್ (Kiran Rao) ಅವರು, 'ನಾವು ಬಹಳ ದಿನಗಳಿಂದ ಇಬ್ಬರೂ ಪ್ರತ್ಯೆಕವಾಗುವ ಬಗ್ಗೆ ಚಿಂತಿಸುತ್ತಿದ್ದೆವು. ಈಗ ಔಪಚಾರಿಕವಾಗಿ ಬೇರೆ ಆಗಲು ನಿರ್ಧರಿಸಿದ್ದೇವೆ. ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ವಿಸ್ತೃತ ಕುಟುಂಬವಾಗಿ ನಮ್ಮ ಜೀವನವನ್ನು ಹಂಚಿಕೊಳ್ಳುತ್ತೇವೆ. ನಾವು ನಮ್ಮ ಮಗ ಆಜಾದ್‌ಗೆ ಪೋಷಕರಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಅವನ ಪಾಲನೆ-ಪೋಷಣೆಯಲ್ಲಿ ನಾವು ಒಟ್ಟಿಗೆ ಇರುತ್ತೇವೆ. ಇದಲ್ಲದೆ ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳ ಸಹಯೋಗವನ್ನು ಮುಂದುವರಿಸುತ್ತೇವೆ ಎಂದು ವಿವರಿಸಿದ್ದಾರೆ.


ಇದನ್ನೂ ಓದಿ- Bollywood Actresses in School Uniform: ಶಾಲೆಯ ಸಮವಸ್ತ್ರದಲ್ಲಿ ಬಾಲಿವುಡ್ ನಟಿಯರು ಹೇಗೆ ಕಾಣ್ತಿದ್ರು? ಇಲ್ಲೊಂದು ಸಣ್ಣ ಝಲಕ್


ನಮ್ಮ ಸಂಬಂಧದಲ್ಲಿ ಈ ಬೆಳವಣಿಗೆಯ ಬಗ್ಗೆ ನಿರಂತರ ಬೆಂಬಲ ಮತ್ತು ತಿಳುವಳಿಕೆ ನೀಡಿದ್ದಕ್ಕಾಗಿ ನಮ್ಮ ಕುಟುಂಬಗಳು ಮತ್ತು ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು. ಯಾರ ಸಹಕಾರವೂ ಇಲ್ಲದೆ ನಾವು ಅಷ್ಟು ಸುರಕ್ಷಿತವಾಗಿ ಈ ಹೆಜ್ಜೆ ಇಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಹಿತೈಷಿಗಳ ಶುಭಾಶಯಗಳನ್ನು ಮತ್ತು ಆಶೀರ್ವಾದಗಳನ್ನು ನಾವು ಎದುರು ನೋಡುತ್ತಿದ್ದೇವೆ ಮತ್ತು ನಮ್ಮಂತೆಯೇ - ಈ ವಿಚ್ಛೇದನವನ್ನು ನೀವು ಅಂತ್ಯವಾಗಿ ನೋಡುವ ಬದಲು ಹೊಸ ಪ್ರಯಾಣದ ಪ್ರಾರಂಭವೆಂದು ಭಾವಿಸುತ್ತೀರಿ ಎಂದು ನಂಬಿದ್ದೇವೆ ಎಂದಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.