Aamir Khan- ಕರೋನಾಗೆ ತುತ್ತಾಗಿರುವ ಅಮೀರ್ ಖಾನ್‌ಗೆ ಚೀನಾ ಅಭಿಮಾನಿಗಳು ಹೇಳಿದ್ದೇನು?

Aamir Khan covid 19 positive- ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್‌ಗೆ ಕರೋನಾ ದೃಢಪಟ್ಟ ಬಳಿಕ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಅಮೀರ್ ಖಾನ್‌ ಅವರ ಚೀನಾದ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದ್ದಾರೆ.

Written by - Yashaswini V | Last Updated : Mar 26, 2021, 12:05 PM IST
  • ಅಮೀರ್ ಖಾನ್ ಭಾರತದ ಪ್ರಸಿದ್ಧ ನಟ
  • ಚೀನಾದಲ್ಲಿಯೂ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ
  • ಅಮೀರ್ ಖಾನ್ ಅವರ ಚಿತ್ರಗಳು ಚೀನಾದ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಗಳಿಸಿವೆ
Aamir Khan- ಕರೋನಾಗೆ ತುತ್ತಾಗಿರುವ ಅಮೀರ್ ಖಾನ್‌ಗೆ ಚೀನಾ ಅಭಿಮಾನಿಗಳು ಹೇಳಿದ್ದೇನು? title=
Aamir Khan covid 19 positive, Chinese fans express worry

ಮುಂಬೈ: ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್ ಮತ್ತು ಮಿಲಿಂದ್ ಸೋಮನ್ ನಂತರ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಇತ್ತೀಚೆಗೆ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅಮೀರ್ ಖಾನ್ ಅವರಿಗೆ ಕರೋನಾ ಪಾಸಿಟಿವ್ ಕಂಡು ಬಂದ ಬಳಿಕ ತಮ್ಮ ಮನೆಯಲ್ಲಿಯೇ ಐಸೋಲೇಶನ್ ನಲ್ಲಿದ್ದಾರೆ ಎಂದು ಅಮೀರ್ ಖಾನ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಏತನ್ಮಧ್ಯೆ, ನಟ ಅಮೀರ್ ಖಾನ್‌ಗೆ ಕೋವಿಡ್ ಪಾಸಿಟಿವ್ (Corona Positive) ಎಂದು  ತಿಳಿದ ಬಳಿಕ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅವರ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಅಮೀರ್ ಖಾನ್‌ ಅವರ ಚೀನಾದ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಿದ್ದಾರೆ.

ಇದನ್ನೂ ಓದಿ - Coronavirus: ಕರೋನಾದಿಂದ ರಕ್ಷಿಸಬಹುದಾದ ಹ್ಯಾಂಡ್ ಸ್ಯಾನಿಟೈಜರ್‌ಗಳಿಂದ ಕ್ಯಾನ್ಸರ್ ಅಪಾಯ

ಅಮೀರ್ ಖಾನ್ (Aamir Khan) ಭಾರತದ ಪ್ರಸಿದ್ಧ ನಟ. ಚೀನಾದಲ್ಲಿಯೂ ಅವರು ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅಮೀರ್ ಖಾನ್ ಅವರ ಚಿತ್ರಗಳು ಚೀನಾದ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಗಳಿಸಿವೆ. ಉದಾಹರಣೆಗೆ, ತ್ರೀ ಈಡಿಯಟ್ಸ್, ಪಿಕೆ, ದಂಗಲ್, ಸೀಕ್ರೆಟ್ ಸೂಪರ್ಸ್ಟಾರ್ ಇತ್ಯಾದಿ. ವಿಶೇಷವೆಂದರೆ, 'ದಂಗಲ್' ಚಿತ್ರವು ಕೇವಲ 26 ದಿನಗಳಲ್ಲಿ ಚೀನಾದ ಮುಖ್ಯಭೂಮಿಯಲ್ಲಿ ಚಿತ್ರಮಂದಿರಗಳಲ್ಲಿ 1 ಬಿಲಿಯನ್ ಯುವಾನ್ ಗಳಿಸಿದೆ. 

ಈಗ ಈ ಜನಪ್ರಿಯ ನಟ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಅವರ ಚೀನಾದ ಅಭಿಮಾನಿಗಳು  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಳಜಿ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ - Video ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣ ತೊರೆಯುವ ಹಿಂದಿನ ಕಾರಣ ಬಿಚ್ಚಿಟ್ಟ Aamir Khan

ನಟನ ಅನೇಕ ಚೀನೀ ಅಭಿಮಾನಿಗಳು ಅಮೀರ್ ಖಾನ್ ಅವರು ತ್ವರಿತವಾಗಿ ಗುಣಮುಖರಾಗುವಂತೆ ಹಾರೈಸಿ ಪೋಸ್ಟ್ ಮಾಡಿದ್ದಾರೆ. ಕೆಲವರು ನಟನಿಗೆ ಕರೋನಾ ಲಸಿಕೆ ಪಡೆಯುವಂತೆ ಸಲಹೆ ನೀಡಿದ್ದಾರೆ. ಇನ್ನೂ ಕೆಲವರು 'ಅಮೀರ್ ಖಾನ್ ಸರ್, ನಿಮಗೆ ಕೋವಿಡ್ -19 ವಿರೋಧಿ ಲಸಿಕೆ ಸಿಕ್ಕಿದೆಯೇ?' ಎಂದು ಪ್ರಶ್ನಿಸಿದ್ದಾರೆ. 

ಈ ರೀತಿಯಾಗಿ ಅಮೀರ್ ಖಾನ್ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಅನೇಕ ಪೋಸ್ಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ, ಅದು ಈಗ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News