ನವದೆಹಲಿ: ನಟ ಅಮೀರ್ ಖಾನ್ ಬಾಲಿವುಡ್ ನ ಜಂಟಲ್ ಮೆನ್, ಪರ್ಫೆಕ್ಟನಿಸ್ಟ್ ಎಂದೇ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದಾರೆ. ಏನೇ ಕೆಲಸ ಮಾಡಿದರು ಅದನ್ನು ನೀಟಾಗಿ ಮಾಡುವುದರಲ್ಲಿ ಅಮೀರ್ ಖಾನ್ ಎತ್ತಿದ ಕೈ. ಆದರೆ ಈ ನಟ ಈಗ ಒಂದು ವೇಳೆ ಈ ಹೊಸ ಕೆಲಸಕ್ಕೆ ಕೈ ಹಾಕಿದರೆ ತಮ್ಮ ನಟನೆಗೆ ಗುಡ್ ಬೈ ಹೇಳುವುದಾಗಿ ಎಂದು ಹೇಳಿಕೆ ನೀಡಿರುವುದು ಮಾತ್ರ ಈಗ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಹಾಗಾದರೆ ಅಷ್ಟಕ್ಕೂ ಈ ಹೇಳಿಕೆ ನೀಡಿರುವುದರ ಹಿನ್ನಲೆ ಏನು ಗೊತ್ತಾ?


COMMERCIAL BREAK
SCROLL TO CONTINUE READING

ಈ ಹಿಂದೆ ತಾರೆ ಜಮೀನ್ ಪರ್ ಚಿತ್ರದ ಮೂಲಕ ತಮ್ಮ ನಿರ್ದೇಶನದ ಕೌಶಲ್ಯವನ್ನು ಸಿನಿಮಾ ಜಗತ್ತಿಗೆ ತೋರಿಸಿ ಅಚ್ಚರಿ ಮೂಡಿಸಿದ್ದ ಅಮೀರ್ ಖಾನ್, ಈಗ ಪೂರ್ಣ ರೀತಿಯ ನಿರ್ದೇಶನಕ್ಕೆ ತೆರೆದುಕೊಳ್ಳುವ ಕುರಿತಾಗಿ ಮಾತಾನಾಡುತ್ತಾ ಒಂದು ವೇಳೆ ತಾವು ಪೂರ್ಣ ಪ್ರಮಾಣದಲ್ಲಿ ನಿರ್ದೇಶನಕ್ಕೆ ತೊಡಗಿಸಿಕೊಂಡದ್ದೆ ಆದಲ್ಲಿ ನಟನೆಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ.


"ನಾನು ಸಿನಿಮಾ ನಿರ್ದೇಶನಕ್ಕೆ ಆಕರ್ಷಿತನಾಗಿ ತಾರೆ ಜಮೀನ್ ಪರ್ ಸಿನಿಮಾವನ್ನು ನಿರ್ದೇಶಿಸಿದೆ, ನನಗೆ ನಿರ್ದೇಶನ ಮತ್ತು ನಟನೆ ಎರಡು ಇಷ್ಟ, ಆದ್ರೆ ಎರಡನ್ನು ಒಟ್ಟಿಗೆ ಮಾಡಲು ಅಸಾಧ್ಯ. ನಾನು ಈಗ ಹೇಳುವುದಿಷ್ಟೇ ನನ್ನ ಸಿನಿಮಾ ವೃತ್ತಿ ಜೀವನವನ್ನು ನಟನೆಯೊಂದಿಗೆ ಆರಂಭಿದೆ. ಆದ್ದರಿಂದ ಅದು ಹೆಚ್ಚು ನನಗೆ ಖುಷಿ ಕೊಡುತ್ತದೆ. ನಾನು ಪೂರ್ಣ ಪ್ರಮಾಣದ ನಿರ್ದೇಶಕನಾದಲ್ಲಿ ನಟನೆಯನ್ನು ನಿಲ್ಲಿಸುತ್ತೇನೆ.ಆದರೆ ಈಗ ನನಗೆ ನಟನೆಯನ್ನು ನಿಲ್ಲಿಸಲು ಇಷ್ಟವಿಲ್ಲ, ಆದ್ದರಿಂದ ನನ್ನೊಳಗಿನ ನಿರ್ದೇಶಕನನ್ನು ನಾನು ತಡೆಹಿಡಿದ್ದಿದ್ದೇನೆ" ಎಂದು ಅಮೀರ್ ಖಾನ್ ಹೇಳಿದರು. 


ಅಮೀರ್ ಖಾನ್ ನಿರ್ಮಾಪಕನಾಗಿ ಲಗಾನ್, ತಾರೆ ಜಮೀನ್ ಪರ್, ಜಾನೆ ತು ಯಾ ಜಾನೆ ನಾ, ಪಿಪ್ಲಿ ಲೈವ್, ಧೋಭಿ ಘಾಟ್, ಡೆಲ್ಲಿ ಬೆಲ್ಲಿ, ತಲಾಶ್, ದಂಗಲ್, ಸಿಕ್ರೆಟ್ ಸೂಪರ್ ಸ್ಟಾರ್ ನಂತಹ ಹಲವು ಮಹತ್ವದ ಸಿನಿಮಾಗಳನ್ನು ನಿರ್ಮಿಸಿದ್ದಾರೆ.ತಮ್ಮ ಉದ್ದೇಶ ಉತ್ತಮ ಕಥೆಗಳನ್ನು ಪ್ರೋತ್ಸಾಹಿಸುವುದು ಹೊರತು ಹಣಗಳಿಸುವುದಲ್ಲ ಅಂತಾರೆ ಅಮೀರ್ ಖಾನ್.