Aamir Khan puja troll : ಬಾಲಿವುಡ್‌ ನಟ ಅಮೀರ್ ಖಾನ್ ಏನೇ ಮಾಡಿದ್ರೂ ಟ್ರೋಲ್‌ಗೆ ಗುರಿಯಾಗುವುದು ಮಾತ್ರ ತಪ್ಪುತ್ತಿಲ್ಲ. ಅವರು ಒಂದು ಹೆಜ್ಜೆ ಇಟ್ಟರೂ ಸಹ ನೆಟ್ಟಿಗರು ಅದರಲ್ಲಿ ತಪ್ಪುಗಳನ್ನೇ ಕಂಡು ಹಿಡಿಯುತ್ತಿದ್ದಾರೆ. ಇದೀಗ ಮಿಸ್ಟರ್ ಪರ್ಫೆಕ್ಟ್ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಅಮೀರ್ ಖಾನ್ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಇದನ್ನು ನೋಡಿದ ನೆಟಿಜನ್ಸ್‌ ಅಮಿರ್‌ ಭಾಯ್‌ ಏನಿದು..? ಅಂತ ಟ್ರೋಲ್‌ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ತಮ್ಮ ಪ್ರೊಡಕ್ಷನ್ಸ್ ಕಚೇರಿಯಲ್ಲಿ ಅಮೀರ್ ಖಾನ್‌ ದೇವರ ಪೂಜೆ ನೆರವೇರಿಸಿದರು. ಅಲ್ಲದೆ, ಮಾಜಿ ಪತ್ನಿ ಕಿರಣ್ ಜೊತೆ ಒಟ್ಟಿಗೆ ನಿಂತು ಆರತಿಯನ್ನು ಸಹ ಬೆಳಗಿದರು. ಈ ಕುರಿತ ಫೋಟೋಗಳನ್ನು ಲಾಲ್ ಸಿಂಗ್ ಚಡ್ಡಾ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪೂಜೆಯಲ್ಲಿ ಭಾಗವಹಿಸಿದ ಇತರರು ಸಹ ಹಲವಾರು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.


ಇದನ್ನೂ ಓದಿ: ಟ್ಯಾಕ್ಸ್‌ ಕಟ್ಟೋಕೆ 5 ಕೋಟಿ ರೂ. ಸಾಲ : ಪವನ್‌ ಕಲ್ಯಾಣ್‌ಗೆ ಈ ಗತಿ ಏಕೆ ಬಂತು..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.