ಟ್ಯಾಕ್ಸ್‌ ಕಟ್ಟೋಕೆ 5 ಕೋಟಿ ರೂ. ಸಾಲ : ಪವನ್‌ ಕಲ್ಯಾಣ್‌ಗೆ ಈ ಗತಿ ಏಕೆ ಬಂತು..!

ನಟ, ಜನಸೇನಾ ನಾಯಕ ಪವನ್ ಕಲ್ಯಾಣ್ ಹೆಸರು ಕೇಳಿದ್ರೆ ಸಾಕು ಕೋಟ್ಯಾಂತರ ಅಭಿಮಾನಿಗಳ ಹೃದಯದ ಕಂಪಿಸುತ್ತದೆ. ಪವನ್‌ ಒಂದು ಶಕ್ತಿ ಅಂತ ಅವರ ಅಭಿಮಾನಿಗಳು ಕರೆಯುತ್ತಿದ್ದಾರೆ. ಪವರ್‌ಸ್ಟಾರ್‌ ಸಿನಿಮಾಗಳು ಥಿಯೇಟರ್‌ಗೆ ಬರುವ ತಿಂಗಳ ಮುಂಚೆಯೇ ಸಖತ್‌ ಹೈಪ್ ಕ್ರಿಯೆಟ್‌ ಮಾಡುತ್ತವೆ. ತೆರೆ ಮೇಲೆ ಪವರ್ ಸ್ಟಾರ್ ಎಂಟ್ರಿ ಕೊಟ್ರೆ ಸಾಕು, ಚಿತ್ರಮಂದಿರದ ಟಾಪ್‌ ಕಿತ್ತೋಗುವಂತೆ ಪ್ಯಾನ್ಸ್‌ ಅಬ್ಬರಿಸುತ್ತಾರೆ.

Written by - Krishna N K | Last Updated : Dec 10, 2022, 02:02 PM IST
  • ನಟ, ಜನಸೇನಾ ನಾಯಕ ಪವನ್ ಕಲ್ಯಾಣ್ ಹೆಸರು ಕೇಳಿದ್ರೆ ಸಾಕು ಕೋಟ್ಯಾಂತರ ಅಭಿಮಾನಿಗಳ ಹೃದಯದ ಕಂಪಿಸುತ್ತದೆ
  • ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅವರ ಆರ್ಥಿಕ ಪರಿಸ್ಥಿತಿ ಕುರಿತು ಜನಸೇನಾ ಮುಖಂಡರೊಬ್ಬರು ಹೇಳಿದ ಮಾತುಗಳು ವೈರಲ್ ಆಗುತ್ತಿವೆ
  • ತೆರಿಗೆ ಕಟ್ಟಲು ನನ್ನ ಕಣ್ಣೆದುರೇ ಪವನ್‌ ಕಲ್ಯಾಣ್‌ ಅವರು 5 ಕೋಟಿ ಸಾಲ ಮಾಡಿದ್ದಾರೆ ಎಂದು ಜನಸೇನಾ ನಾಯಕ ಹೇಳಿದ್ದಾರೆ
ಟ್ಯಾಕ್ಸ್‌ ಕಟ್ಟೋಕೆ 5 ಕೋಟಿ ರೂ. ಸಾಲ : ಪವನ್‌ ಕಲ್ಯಾಣ್‌ಗೆ ಈ ಗತಿ ಏಕೆ ಬಂತು..! title=

Pawan Kalyan : ನಟ, ಜನಸೇನಾ ನಾಯಕ ಪವನ್ ಕಲ್ಯಾಣ್ ಹೆಸರು ಕೇಳಿದ್ರೆ ಸಾಕು ಕೋಟ್ಯಾಂತರ ಅಭಿಮಾನಿಗಳ ಹೃದಯದ ಕಂಪಿಸುತ್ತದೆ. ಪವನ್‌ ಒಂದು ಶಕ್ತಿ ಅಂತ ಅವರ ಅಭಿಮಾನಿಗಳು ಕರೆಯುತ್ತಿದ್ದಾರೆ. ಪವರ್‌ಸ್ಟಾರ್‌ ಸಿನಿಮಾಗಳು ಥಿಯೇಟರ್‌ಗೆ ಬರುವ ತಿಂಗಳ ಮುಂಚೆಯೇ ಸಖತ್‌ ಹೈಪ್ ಕ್ರಿಯೆಟ್‌ ಮಾಡುತ್ತವೆ. ತೆರೆ ಮೇಲೆ ಪವರ್ ಸ್ಟಾರ್ ಎಂಟ್ರಿ ಕೊಟ್ರೆ ಸಾಕು, ಚಿತ್ರಮಂದಿರದ ಟಾಪ್‌ ಕಿತ್ತೋಗುವಂತೆ ಪ್ಯಾನ್ಸ್‌ ಅಬ್ಬರಿಸುತ್ತಾರೆ.

ಅಪಾರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿರುವ ಪವನ್‌ ಕಲ್ಯಾಣ್‌ ಅವರು ಇದೀಗ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನಸೇನಾ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಅಲ್ಲದೆ, ತಮ್ಮ ಮೂಲ ವೃತ್ತಿಯನ್ನೂ ಬಿಡದ ಜನಸೇನ ನಾಯಕ ಆಗಾಗ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. ರಾಜಕೀಯ ಚಟುವಟಿಕೆಯಲ್ಲಿ ಬ್ಯುಸಿಯಾದ್ರೆ ಕೆಲವೊಮ್ಮೆ ಚಿತ್ರಗಳಿಗೆ ಸಮಯ ನೀಡಲು ಆಗದ ಕಾರಣ ಅವರ ಸಿನಿಮಾಗಳ ಬಿಡುಗಡೆಯಲ್ಲಿ ವಿಳಂಬವಾಗುತ್ತದೆ.

ಇದನ್ನೂ ಓದಿ: ಬಿಕಿನಿ ತೊಟ್ಟ ದೀಪಿಕಾ ಪಕ್ಕ ʼABDʼ : ವೈರಲ್‌ ಆಗ್ತಿದೆ ಇಬ್ಬರ ಫೋಟೋ..!

ಅದಕ್ಕೆ ಪವನ್ ಅವರನ್ನು ಪಾರ್ಟ್ ಟೈಮ್ ರಾಜಕಾರಣಿ ಅಂತ ವಿರೋಧ ಪಕ್ಷದ ನಾಯಕರು ಟೀಕಿಸುತ್ತಾರೆ. ಟೀಕೆ ಟಿಪ್ಪಣಿಗಳಿಗೆ ತಮ್ಮದೆ ಸ್ಟೈಲ್‌ನಲ್ಲಿ ಪ್ರತಿಕ್ರಿಯೆ ನೀಡುವ ಗಬ್ಬರ್‌ ಸಿಂಗ್‌, ʼಪಕ್ಷ ನಡೆಸಲು ಹಣ ಬೇಕುʼ ಅದಕ್ಕಾಗಿ ದುಡಿಯುತ್ತೇನೆ ಅಂತ ಮಾತಿನ ಚಾಟಿ ಬೀಸುತ್ತಾರೆ. ಇನ್ನು ಇತ್ತೀಚೆಗಷ್ಟೇ ಪವನ್ ಕಲ್ಯಾಣ್ ಅವರ ಆರ್ಥಿಕ ಪರಿಸ್ಥಿತಿ ಕುರಿತು ಜನಸೇನಾ ಮುಖಂಡರೊಬ್ಬರು ಹೇಳಿದ ಮಾತುಗಳು ವೈರಲ್ ಆಗುತ್ತಿವೆ.

ವೈರಲ್‌ ವಿಡಿಯೋದಲ್ಲಿ,  'ನಮ್ಮ ನಾಯಕರು ತಮ್ಮ ಹತ್ತಿರ ಇದ್ದದ್ದನ್ನೆಲ್ಲಾ ಇಲ್ಲದವರ ಹತ್ತಿರ ಹಂಚಿಕೊಂಡಿದ್ದಾರೆ. ತಮ್ಮ ತೆರಿಗೆ ಕಟ್ಟಲು ನನ್ನ ಕಣ್ಣೆದುರೇ 5 ಕೋಟಿ ಸಾಲ ಮಾಡಿದ್ದಾರೆ..' ತಮ್ಮ ನಾಯಕನ ಹಿರಿಮೆಗೆ ಇನ್ನೇನು ಸಾಕ್ಷಿ ಎಂದಿದ್ದಾರೆ. ಆದರೆ ಜನ ಸೇನಾನಿ ಪವನ್‌ ತೆರಿಗೆ ಕಟ್ಟಲು ಸಾಲ ಮಾಡಿದ್ದಾರಾ..? ಈ ವಿಚಾರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. ಈ ವಿಡಿಯೋ ಬಗ್ಗೆ ಪವನ್‌ ಕಲ್ಯಾಣ್‌ ಪ್ರತಿಕ್ರಿಯಿಸುತ್ತಾರೋ ಇಲ್ಲವೋ ಅಂತ ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News