ʼಅಮಿರ್ ಖಾನ್ ಇನ್ಸಲ್ಟ್ ಹಿಂದೂ ಧರ್ಮ ʼ: ಮತ್ತೆ ಟ್ರೋಲ್ಗೆ ಗುರಿಯಾದ ಮಿಸ್ಟರ್ ಪರ್ಫೆಕ್ಷನಿಸ್ಟ್
ಬಾಲಿವುಡ್ ನಟ ಅಮಿರ್ ಖಾನ್‌ಗೆ ಟ್ರೋಲಿಂಗ್ ಕಾಟ ತಪ್ಪುತ್ತಿಲ್ಲ. ಸದ್ಯ ಅಮಿರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಒಳಗೊಂಡ ಬ್ಯಾಂಕ್‌ನ ಜಾಹೀರಾತಿನ ಮೇಲೆ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪ ಕೇಳಿ ಬಂದಿದೆ.
ನವದೆಹಲಿ : ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮಿರ್ ಖಾನ್‌ಗೆ ಟ್ರೋಲಿಂಗ್ ಕಾಟ ತಪ್ಪುತ್ತಿಲ್ಲ. ಸದ್ಯ ಅಮಿರ್ ಖಾನ್ ಮತ್ತು ಕಿಯಾರಾ ಅಡ್ವಾಣಿ ಒಳಗೊಂಡ ಬ್ಯಾಂಕ್‌ನ ಜಾಹೀರಾತಿನ ಮೇಲೆ ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪ ಕೇಳಿ ಬಂದಿದೆ. ಈ ಕುರಿತು ಇಂಟರ್‌ನೆಟ್‌ನಲ್ಲಿ ಭಾರಿ ಚರ್ಚೆ ನಡಿತಿದೆ. ಅಲ್ಲದೆ, ಈ ವಿವಾದದ ಬಗ್ಗೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯಿಸಿ ಜಾಹೀರಾತು ಮೇಕರ್‌ಗೆ ಈಡಿಯಟ್ಸ್ ಎಂದು ಬೈದಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, "ಯಾವಾಗಿನಿಂದ ಬ್ಯಾಂಕ್‌ಗಳು ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸಲು ಪ್ರಾರಂಭಿಸಿದವು..? ನನಗೆ ಇದು ಅರ್ಥವಾಗಲೇ ಇಲ್ಲ... ಮೊದಲು ಭ್ರಷ್ಟ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬದಲಾಯಿಸಿ. ಈ ರೀತಿ ಮಾಡ್ತೀರಾ ಮತ್ತೆ ಹಿಂದೂಗಳು ಟ್ರೋಲ್ ಮಾಡ್ತಾರೆ ಅಂತ ಆರೋಪ ಮಾಡ್ತೀರಾ.. ಈಡಿಯಟ್ಸ್" ಎಂದು ಅಗ್ನಿಹೋತ್ರಿ ಎಯು ಬ್ಯಾಂಕ್ ಇಂಡಿಯಾ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ 14 ರಿಂದ ಬಾಲಿವುಡ್ ನಲ್ಲೂ "ಕಾಂತಾರ"ದ ಹವಾ ಶುರು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.