ಬೆಂಗಳೂರು : ಥಿಯೇಟರ್ಗಳಲ್ಲಿ ಬ್ಲಾಕ್ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದ ನಿರ್ದೇಶಕ ಚಂದೂ ಮೊಂಡೇಟಿ ಅವರ ಮಿಸ್ಟರಿ ಸಾಹಸ ಚಿತ್ರ, ʼಕಾರ್ತಿಕೇಯ 2ʼ, ಒಟಿಟಿಯಲ್ಲೂ ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ 100 ಕೋಟಿ ವೀಕ್ಷಣಾ ನಿಮಿಷಗಳಿಗೆ ಪಡೆದಿದೆ.
ದಸರಾ ಹಬ್ಬದಂದು ZEE5 ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಪ್ರಥಮವಾಗಿ ಸ್ಟ್ರೀಮಿಂಗ್ ಆದ ಸಿನಿಮಾ ಈಗ ದೊಡ್ಡ ಯಶಸ್ಸನ್ನು ಕಂಡಿದೆ. ಬಿಡುಗಡೆಯಾದ 48 ಗಂಟೆಗಳಲ್ಲಿ ಚಲನಚಿತ್ರವು 100 ಕೋಟಿ ವೀಕ್ಷಣಾ ನಿಮಿಷಗಳನ್ನು ಗಳಿಸಿದೆ. ʼಕಾರ್ತಿಕೇಯ - 2ʼನ್ನು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದೆ. ನಾಯಕ ಕಾರ್ತಿಕೇಯ (ನಟ ನಿಖಿಲ್ ಸಿದ್ಧಾರ್ಥ) ಭಗವಾನ್ ಕೃಷ್ಣನ ಕುರಿತ ಸತ್ಯದ ಅನ್ವೇಷಣೆ ಮಾಡುವ ರೋಚಕ ಕಥೆ ಸಿನಿಮಾದಲ್ಲಿದೆ. ಭಾರತೀಯ ಪುರಾತನ ನಂಬಿಕೆ ಮತ್ತು ಭಗವಾನ್ ಶ್ರೀ ಕೃಷ್ಣನ ತತ್ವದ ಶಕ್ತಿಯನ್ನು ಕಂಡುಹಿಡಿಯಲು ಶತ್ರುಗಳ ಜೊತೆ ಹೊರಾಡುವ ಅದ್ಭುತ ಸಿನಿಮಾ ಕಾರ್ತಿಕೇಯ-2.
ಇದನ್ನೂ ಓದಿ: Video: ಕೋಟೆನಾಡಿನಲ್ಲಿ ಪುಟ್ಟ ಬಾಲಕನೊಂದಿಗೆ ಡಿಪ್ಸ್ ಹೊಡೆದ ರಾಹುಲ್ ಗಾಂಧಿ
ZEE5 ಇಂಡಿಯಾ ಚೀಫ್ ಬ್ಯುಸಿನೆಸ್ ಆಫೀಸರ್ ಮನೀಶ್ ಕಲ್ರಾ ಅವರು, ʼಕಾರ್ತಿಕೇಯ 2ʼ ಪ್ಲಾಟ್ಫಾರ್ಮ್ನಲ್ಲಿ ಒಂದು ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿದೆ. ನಿರ್ದೇಶಕ ಚಂದೂ ಮೊಂಡೇಟಿ ಮತ್ತು ʼಕಾರ್ತಿಕೇಯ 2ʼ ನಿಜವಾಗಿಯೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಭಾರತದ ಭವ್ಯ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹಿಂದೂ ಪುರಾಣಗಳನ್ನು ಎತ್ತಿ ತೋರಿಸುವ ಈ ಚಿತ್ರವು ಜಾಗತಿಕ ಪ್ರೇಕ್ಷಕರನ್ನು ತಲುಪಬೇಕೆಂದು ನಾವು ಬಯಸಿದ್ದೇವೆ. ಇದು ZEE5 ನಿಂದ ಮಾತ್ರ ಸಾಧ್ಯವಾಯಿತು. ಇಡೀ ತಂಡವು ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದೆ ಮತ್ತು ಇದು ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ ಅದರ ಡಿಜಿಟಲ್ ಪ್ರೀಮಿಯರ್ನಲ್ಲಿಯೂ ಸಾಧನೆ ಮಾಡಿದೆ. 48 ಗಂಟೆಗಳಲ್ಲಿ 100 ಕೋಟಿ ವೀಕ್ಷಣಾ ನಿಮಿಷಗಳನ್ನು ಪಡೆದಿದೆ. ಇದು ನಮಗೆಲ್ಲರಿಗೂ ಅಮೂಲ್ಯ ಕ್ಷಣವಾಗಿದೆ ಎಂದಿದ್ದಾರೆ.
ನಟ ನಿಖಿಲ್ ಸಿದ್ಧಾರ್ಥ ಮಾತನಾಡಿ, ʼಕಾರ್ತಿಕೇಯ 2ʼ ಮೇಲೆ ಪ್ರೇಕ್ಷಕರು ತೋರಿದ ಪ್ರೀತಿಯಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ. ಈ ಪ್ರಾಜೆಕ್ಟ್ ಪ್ರಾರಂಭಿಸಿದಾಗ, ನಮ್ಮ ಸಿನಿಮಾಗೆ ಇಷ್ಟೊಂದು ಪ್ರೀತಿ ಮತ್ತು ಬೆಂಬಲ ಸಿಗುತ್ತೆ ಅಂತ ನಾವು ಊಹಿಸಿರಲಿಲ್ಲ. ಆದರೆ ಟ್ರೈಲರ್ಗೆ ಸಿಕ್ಕ ಪ್ರತಿಕ್ರಯೆ ನೋಡಿ ಭರವಸೆ ಮೂಡಿತು. ಸದ್ಯ ನಮ್ಮ ಚಿತ್ರ ZEE5 ವರ್ಲ್ಡ್ ಡಿಜಿಟಲ್ ಪ್ರೀಮಿಯರ್ನಲ್ಲಿ ಸಿಕ್ಕ ಪ್ರೇಕ್ಷಕರ ಪ್ರತಿಕ್ರಿಯೆ ಸಂತೋಷ ತಂದಿದೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.