Abhishek Ambareesh: ಅಪ್ಪನಿಲ್ಲದೆ ಹಸೆಮಣೆ ಏರಲು ಸಿದ್ಧರಾಗಿರುವ ಅಭಿಗೆ ಕಾಡಿದೆ ಆ ಒಂದು ದೊಡ್ಡ ನೋವು..!
Abhishek Ambareesh Marriage: ಸುಮಲತಾ ಅವರು ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡವರು. ಅಂಬರೀಷ್ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ತಂದೆಯ ಹುಟ್ಟುಹಬ್ಬದ 7 ದಿನಗಳಲ್ಲಿ ಅಭಿಷೇಕ್ ಅಂಬರೀಷ್ ಹಸೆಮಣೆ ಏರಲಿದ್ದಾರೆ.
Abhishek Ambareesh Marriage: ತಂದೆಯ ಹುಟ್ಟುಹಬ್ಬದ 7 ದಿನಗಳಲ್ಲಿ ಅಭಿಷೇಕ್ ಅಂಬರೀಷ್ ಹಸೆಮಣೆ ಏರಲಿದ್ದಾರೆ. ಯೆಸ್ ಮೇ 29 ರೆಬೆಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬ. ಮಗನ ಮದುವೆ ಮತ್ತು ಸಿನಿಮಾಗಳ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ಅಂಬಿ ತುಂಬಾ ಬೇಗ ದೇವರ ಬಳಿ ಹೋಗ್ಬಿಟ್ರು. ಮಗ ಅಂದ್ರೆ ಅಂಬಿಗೆ ತುಂಬಾ ಇಷ್ಟ. ಅಭಿಗೂ ತಂದೆ ಅಂದ್ರೆ ಪಂಚಪ್ರಾಣ. ಅಪ್ಪನಿಲ್ಲದೆ ಮದುವೆಯಾಗುತ್ತಿರೋ ನೋವು ಅಭಿಗೆ ಕಾಡುತ್ತಿದೆ ಅಂತ ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಅಂಬರೀಶ್ ಗೆ ಮಂಡ್ಯದ ಗಂಡು ಎಂದು ಹೆಸರಿಟ್ಟವರು ಯಾರು ಗೊತ್ತಾ ?
ನಿಮಗೆಲ್ಲ ಗೊತ್ತಿರೋ ಹಾಗೇ 2022ರ ಡಿಸೆಂಬರ್ 11ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು ಹಾಗೂ ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಸಿಗ್ತಾ ಇರೋ ಮಾಹಿತಿ ಪ್ರಕಾರ ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: "ಹ್ಯಾಪಿ ಬರ್ತ್ ಡೇ ಮೈ ಅಂಬಿ.." ಭಾವುಕ ಪೋಸ್ಟ್ ಹಾಕಿದ ಸುಮಲತಾ ಅಂಬರೀಷ್
ಸುಮಲತಾ ಅವರು ಚಿತ್ರರಂಗದಲ್ಲಿ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡವರು. ಅಂಬರೀಷ್ ಕೂಡ ಸಾಕಷ್ಟು ಜನಪ್ರಿಯತೆ ಹೊಂದಿದ್ದರು. ಹೀಗಾಗಿ, ಎರಡೂ ಕ್ಷೇತ್ರದ ಗಣ್ಯರು ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರು ಮಾತ್ರ ಹಾಜರಿ ಹಾಕಲಿದ್ದಾರೆ.
ಇನ್ನು, ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಸುಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಪುತ್ರಿ ಆಗಿರುವ ಅವಿವ ಬಿಡಪ ಹಾಗೂ ಅಭಿಷೇಕ್ ಅಂಬರೀಷ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಪರಿಚಯ ಬೆಳೆದಿತ್ತು. ಪರಿಚಯ ಪ್ರೀತಿಗೆ ತಿರುಗಿತು. ಕುಟುಂಬದ ಒಪ್ಪಿಗೆ ಪಡೆದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಈಗ ಇಬ್ಬರೂ ಮದುವೆ ಆಗುತ್ತಿದ್ದಾರೆ.
ಇದನ್ನೂ ಓದಿ: ಬಟ್ಟೆ ಇಲ್ಲದೆ ಬೆಡ್ ಮೇಲೆ ಮಲಗಿರುವ ಅರ್ಜುನ್ ಕಪೂರ್ ಫೋಟೋ ಶೇರ್ ಮಾಡಿದ ಮಲೈಕಾ ಅರೋರಾ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.