Happy birthday Ambareesh : ಅಂಬರೀಶ್ ಗೆ ಮಂಡ್ಯದ ಗಂಡು ಎಂದು ಹೆಸರಿಟ್ಟವರು ಯಾರು ಗೊತ್ತಾ ?

ಅಂಬರೀಶ್ ಅವರು ಇದ್ದಿದ್ದರೆ ಇವತ್ತಿಗೆ ಅವರಿಗೆ 71 ವರುಷವಾಗಿರುತ್ತಿತ್ತು. ಕನ್ನಡಿಗರ ಪ್ರೀತಿಯ ಅಂಬಿ ಅಣ್ಣನಿಗೆ ಇಂದು ಹುಟ್ಟುಹಬ್ಬ. 

Written by - YASHODHA POOJARI | Last Updated : May 29, 2023, 11:11 AM IST
  • ಮಂಡ್ಯದ ಗಂಡು ಅಂದರೆ ನೆನಪಾಗೋದು ರೆಬೆಲ್ ಸ್ಟಾರ್ ಅಂಬರೀಶ್.
  • ನೇರನುಡಿಯ ಅಂಬಿ ಅಂದ್ರೆ ಎಲ್ಲರಿಗೂ ಪಂಚಪ್ರಾಣ.
  • ಅಂಬರೀಶ್ ಇದ್ದಿದ್ದರೆ ಇವತ್ತಿಗೆ ಅವರಿಗೆ 71 ವರುಷವಾಗಿರುತ್ತಿತ್ತು.
Happy birthday Ambareesh : ಅಂಬರೀಶ್ ಗೆ  ಮಂಡ್ಯದ ಗಂಡು ಎಂದು ಹೆಸರಿಟ್ಟವರು ಯಾರು ಗೊತ್ತಾ ?  title=

ಬೆಂಗಳೂರು : ಮಂಡ್ಯದ ಗಂಡು ಅಂದರೆ ನೆನಪಾಗೋದು ರೆಬೆಲ್ ಸ್ಟಾರ್ ಅಂಬರೀಶ್. ನೇರನುಡಿಯ ಅಂಬಿ ಅಂದ್ರೆ ಎಲ್ಲರಿಗೂ ಪಂಚಪ್ರಾಣ. ಕನ್ನಡಿಗರ ಪ್ರೀತಿಯ ಅಂಬಿ ಅಣ್ಣನಿಗೆ ಇಂದು ಹುಟ್ಟುಹಬ್ಬ. ಹೌದು ಅಂಬರೀಶ್ ಅವರು ಇದ್ದಿದ್ದರೆ ಇವತ್ತಿಗೆ ಅವರಿಗೆ 71 ವರುಷವಾಗಿರುತ್ತಿತ್ತು.  ಮಂಡ್ಯದ ಗಂಡು ನಮ್ಮನ್ನ ಅಗಲಿದರೂ ಅವರ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆಗುವುದೂ ಇಲ್ಲ. 

ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಹುಟ್ಟುಹಬ್ಬದ ನಲ್ಮೆಯ ಹಾರೈಕೆಗಳು ಎಂದು ಅಭಿಮಾನಿಗಳು ಪ್ರೀತಿಯಿಂದ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ನಿಮ್ಮ ನೆನಪಲ್ಲಿ ಕನ್ನಡಿಗರು ಸದಾ ಕಾಲ ಕಳೆಯುತ್ತೇವೆ ಅಂತ ಕಾಮೆಂಟ್ ಗಳನ್ನ ಹಾಕುತ್ತಿದ್ದಾರೆ. ಕರುನಾಡು ಕಂಡ ಸಹೃದಯೀ ಕಲಾವಿದ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಜನ್ಮದಿನದ ಸಲುವಾಗಿ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. 

ಇದನ್ನೂ ಓದಿ : ಎದೆಯೊಳಗಿದ್ದ ಪ್ರೀತಿ ಎದೆಮೇಲೆ ಬಂದಾಗ.. ‘ಅಪ್ಪು’ ಟ್ಯಾಟೂ ಹಾಕಿಸಿಕೊಂಡ ರಾಘಣ್ಣ! ಹೇಗಿದೆ ನೋಡಿ

ಚಿತ್ರರಂಗ ಮತ್ತು ರಾಜಕೀಯದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ್ದ ಅಂಬರೀಶ್ ಅವರ 71ನೇ ಹುಟ್ಟುಹಬ್ಬದ ಸಾಲುವಾಗಿ ಅಂಬರಿಷ್  ಪುಣ್ಯಭೂಮಿಯಲ್ಲಿ ವಿಶೇಷ ಪೂಜೆಯನ್ನ ನೆರವೇರಿಸಲಿದ್ದಾರೆ. ಕರುನಾಡ ಕರ್ಣ, ಸ್ಯಾಂಡಲ್​​ವುಡ್ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಶ್ ಸವಿನೆನಪು ಸದಾ ಇದ್ದೇ ಇರುತ್ತದೆ. ಅಂಬರೀಶ್‌ ಅವರು 'ಮಂಡ್ಯದ ಗಂಡು' ಎಂದೇ ನಾಡಿಗೆ ಚಿರಪರಿತ. ಅಂಬರೀಶ್‌ ಹೆಸರು ಹೇಳುವಾಗ 'ಮಂಡ್ಯದ ಗಂಡು' ಅನ್ವರ್ಥ ನಾಮ ತಾನೇ ತಾನಾಗಿ ಬಂದು ಬಿಡುತ್ತದೆ. ಆದರೆ, ಈ ಬಿರುದು ಕೊಟ್ಟವರು ಅಂಬರೀಶ್‌ಗೆ ಗುರು ಸಮಾನರಾಗಿದ್ದ ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡ ಅವರು. ಅಂಬರೀಶ್‌ಗೆ 'ಮಂಡ್ಯದ ಗಂಡು' ಎಂದು ಬಿರುದು ಕೊಟ್ಟಿದ್ದು ತಾನೇ ಎಂದು ಮಾದೇಗೌಡ ಅವರೇ ಹೇಳಿಕೊಂಡಿದ್ದಾರೆ. ಕರುನಾಡಿನ ಪ್ರೀತಿಯ ಅಂಬರೀಷ್ ಗೆ ಜೀ ಕನ್ನಡ ನ್ಯೂಸ್ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.

ಇದನ್ನೂ ಓದಿ : Ambareesh's Birthday: ಅಪ್ಪನ ಹುಟ್ಟುಹಬ್ಬಕ್ಕೆ ಅಭಿಷೇಕ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರತಂಡದಿಂದ ಬಿಗ್ ಗಿಫ್ಟ್...!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News