ಮಂಡ್ಯ: ಅಭಿಷೇಕ್ - ಅವಿವಾ ಮದುವೆಯ ಬೀಗರ ಔತಣಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಪ್ರಧಾನಿ ಮೋದಿ ಕಾರ್ಯಕ್ರಮ ನಡೆದಿದ್ದ ಜಾಗದಲ್ಲೇ ಬಾಡೂಟ ಆಯೋಜಿಸಲಾಗಿದೆ. ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಕಾರ್ಯಕ್ರಮ ನಡೆಯಲಿದೆ. ಇದೇ ಸ್ಥಳದಲ್ಲಿ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಜೂನ್‌ 16 ರಂದು ಶುಕ್ರವಾರ ಬೀಗರ ಔತಣಕೂಟ ನಡೆಯಲಿದೆ.


COMMERCIAL BREAK
SCROLL TO CONTINUE READING

ಸಂಸದೆ ಸುಮಲತಾ ಕುಟುಂಬಸ್ಥರು ಹಾಗೂ ಆಪ್ತ ವಲಯದವರು ಬೀಗರೂಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿ ಊಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಸುಮಾರು 50 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಅಂಬರೀಶ್ ಕುಟುಂಬದ ಆಪ್ತ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ ಸಿದ್ದತೆ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಅಂಬರೀಶ್ ಅಣ್ಣನ ಮಗ ಮದನ್, ಸುಮಲತಾ ಬೆಂಬಲಿಗರು ಸಾಥ್‌ ನೀಡಿದರು‌.


ಇದನ್ನೂ ಓದಿ: ರಾವಣನ ಪಾತ್ರದಲ್ಲಿ ನಟಿಸಲು ʻNOʼ ಎಂದಿದ್ದೇಕೆ ಯಶ್?


ಮಂಡ್ಯ ಶೈಲಿಯಲ್ಲಿ ಜನರಿಗೆ ಊಟ ಹಾಕಲು ಸಿದ್ದತೆ ಮಾಡಲಾಗುತ್ತಿದೆ. ಊಟದಲ್ಲಿ ಮುದ್ದೆ, ಬೋಟಿ ಗೊಜ್ಜು, ಮಟನ್, ಚಿಕನ್, ಮೊಟ್ಟೆ, ಗೀ ರೈಸ್, ಅನ್ನ ತಿಳಿ ಸಾಂಬಾರ್, ಮಜ್ಜಿಗೆ, ಬೀಡಾ, ಐಸ್ ಕ್ರೀಂ ಇರಲಿವೆ. 


ಅಂಬರೀಶ್‌ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟವನ್ನೆ ಬಡಿಸಲಾಗುವುದು. ಎಷ್ಟೇ ಸಾವಿರ ಜನರು ಬಂದರೂ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಸಿದ್ಧತೆ ಪರಿಶೀಲನೆ ಬಳಿಕ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹೇಳಿದರು.


ಶುಕ್ರವಾರ ಮಂಡ್ಯದ ಗೆಜ್ಜಲಗೆರೆ ಕಾಲೋನಿ ಬಳಿ ಬೆಳಿಗ್ಗೆ 11 ಗಂಟೆಯಿಂದಲೇ ಊಟದ ವಿತರಣೆ ಆರಂಭವಾಗಲಿದೆ. ಸಿನಿಮಾ ಹಾಗೂ ರಾಜಕೀಯದಲ್ಲಿ ಅಂಬಿ ಕುಟುಂಬ ಪರ ನಿಂತ ಎಲ್ಲರಿಗೂ ಊಟ ಹಾಕಿಸುವುದು ಕುಟುಂಬಸ್ಥರ ಆಸೆ ಆಗಿದೆ. ಅದರಂತೆ ಅಭಿಷೇಕ್ ಬೀಗರೂಟ ಮಂಡ್ಯದಲ್ಲೇ ಮಾಡಲಾಗ್ತಿದೆ. ಸ್ಥಳೀಯ ಬಾಣಸಿಗರಿಂದಲೇ ಅಡುಗೆ ತಯಾರು ಮಾಡಿಸಲಾಗ್ತಿದೆ.


ಇದನ್ನೂ ಓದಿ: ಸ್ಟಾರ್ ನಟ - ನಟಿಯರ ಬಾಡಿಗಾರ್ಡ್‌ಗಳಲ್ಲಿ ಅತಿ ಹೆಚ್ಚು ಸ್ಯಾಲರಿ ಯಾರದ್ದು ಗೊತ್ತಾ?


ಅಂಬರೀಶ್ ಅವರಿಗೆ ಪ್ರಿಯವಾದ ಕೈಮಾ, ಬೋಟಿ ಗೊಜ್ಜು, ಮಟನ್ ಸೇರಿದಂತೆ ಮಂಡ್ಯ ಶೈಲಿಯಲ್ಲೇ ಅಡುಗೆ ಇರಲಿದೆ. ವಧು ವರರಿಗೆ ಕೇಕ್, ಹಾರ - ಬೊಕ್ಕೆ ತರದೆ ಜನರು ಬಂದು ಆಶೀರ್ವಾದ ಮಾಡದರೆ ಸಾಕು ಎಂದು ಅಭಿಷೇಕ್‌ ಅಂಬರೀಶ್ ಮನವಿ ಮಾಡಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಕುಟುಂಬ ಸದಸ್ಯರಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.