Abhishek Bachchan Aishwarya Rai Wedding: ಬಾಲಿವುಡ್ ತಾರಾ ಜೋಡಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಾಂಪತ್ಯ ಜೀವನಕ್ಕೆ 16 ವರ್ಷ ಪೂರೈಸಿದ್ದಾರೆ. ಇಬ್ಬರೂ 20 ಏಪ್ರಿಲ್ 2007 ರಂದು ಮುಂಬೈನಲ್ಲಿ ವೈಭವದಿಂದ ಹಸೆಮಣೆ ಏರಿದರು. ಅಫೇರ್‌ನಿಂದ ಮದುವೆಯವರೆಗಿನ ಅವರ ಪಯಣ ಯಾವ ಸಿನಿಮಾ ಕಥೆಗೂ ಕಡಿಮೆಯಿಲ್ಲ. ಗುರು ಚಿತ್ರದ ಪ್ರಥಮ ಪ್ರದರ್ಶನದ ವೇಳೆ ಅಭಿಷೇಕ್ ಬಚ್ಚನ್‌ ಅವರು ಐಶ್ವರ್ಯಾಗೆ ಪ್ರಪೋಸ್‌ ಮಾಡಿದರು. ಈ ಪ್ರಥಮ ಪ್ರದರ್ಶನವು ಟೊರೊಂಟೊದಲ್ಲಿ ನಡೆಯಿತು. ಐಶ್ವರ್ಯಾ ಕೂಡ ಅಭಿಷೇಕ್ ಅವರ ಪ್ರಪೋಸಲ್‌ನ್ನು ಒಪ್ಪಿಕೊಂಡರು ಮತ್ತು ನಂತರ ಇಬ್ಬರೂ ಭಾರತಕ್ಕೆ ಬಂದರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಯನತಾರಾ ಬೆದರಿಕೆ ಹಾಕಿ ಆ ಅವಕಾಶ ಕಿತ್ತುಕೊಂಡ್ರು - ‘ಗೂಳಿ’ ನಟಿ ಮಮತಾ ಮೋಹನ್‌ದಾಸ್‌


ಮುಂಬೈಗೆ ಬಂದ ತಕ್ಷಣ ಅಭಿಷೇಕ್ ಕಾಯಲಾರದೆ ಐಶ್ವರ್ಯಾಳ ಮನೆಗೆ ಹೋದರು. ಕರ್ನಾಟಕದವರಾದ ಐಶ್ವರ್ಯಾ ರೈಗೆ ಆ ಪದ್ಧತಿಗಳೆಲ್ಲ ಹೊಸದೆನಿಸಿದವು. ಎಂಗೇಜ್‌ಮೆಂಟ್‌ ಮಾಡಿಕೊಳ್ಳಲು ಅಭಿಷೇಕ್‌ ಒತ್ತಾಯಿಸಿದರು. ಆದರೆ ಐಶ್ವರ್ಯ ಕೊಂಚ ಸಮಯ ತಡೆಯಲು ಹೇಳಿದರು. ಆದರೆ ಅಭಿಷೇಕ್ ಒಪ್ಪಲಿಲ್ಲ ಮತ್ತು ಇಬ್ಬರು ಬೇಗನೇ ನಿಶ್ಚಿತಾರ್ಥ ಮಾಡಿಕೊಂಡರು.


ಏಪ್ರಿಲ್ 20 ರಂದು ಮುಂಬೈನಲ್ಲಿ ಎಲ್ಲಾ ವಿವಾಹ ವಿಜೃಂಭಣೆಯಿಂದ ನೆರವೇರಿತು. ಮಾಧ್ಯಮ ವರದಿಗಳ ಪ್ರಕಾರ, ಈ ಮದುವೆಗೆ ಸುಮಾರು 6-7 ಕೋಟಿ ಖರ್ಚು ಮಾಡಲಾಗಿದೆ. ಇದು ಆ ಯುಗದ ಅತ್ಯಂತ ದುಬಾರಿ ಸೆಲೆಬ್ರಿಟಿ ವಿವಾಹಗಳಲ್ಲಿ ಒಂದಾಗಿದೆ. ಮದುವೆಯಲ್ಲಿ ಐಶ್ವರ್ಯಾ ಧರಿಸಿದ್ದ ಕಾಂಚಿವರಂ ಸೀರೆಗೆ ಸುಮಾರು 75 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದಲ್ಲದೇ ಕೋಟ್ಯಾಂತರ ಮೌಲ್ಯದ ಚಿನ್ನಾಭರಣಗಳನ್ನೂ ಧರಿಸಿದ್ದರು. ಬಾಲಿವುಡ್ ಮತ್ತು ರಾಜಕೀಯ ಜಗತ್ತಿನ ಹಲವು ದೊಡ್ಡ ವ್ಯಕ್ತಿಗಳು ಈ ಮದುವೆಗೆ ಸಾಕ್ಷಿಯಾದರು. ಮದುವೆಯ ನಂತರ, ಐಶ್ವರ್ಯಾ ಮತ್ತು ಅಭಿಷೇಕ್ ಅವರಿಗೆ ಆರಾಧ್ಯ ಎಂಬ ಮುದ್ದಾದ ಮಗಳು ಜನಿಸಿದಳು. 


ಇದನ್ನೂ ಓದಿ: Nishvika Naidu : ಕನಸಲ್ಲೂ ಕಾಡುವ ನಿನ್ನ ಸೌಂದರ್ಯದ ಮುಂದೆ ಎಲ್ಲವೂ ನಶ್ವರ ʼನಿಶ್ವಿಕಾʼ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.