Aishwarya Rai Abhishek Bachchan: ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿವಾಹ ಬಂಧನವನ್ನು ಕೊನೆಗೊಳಿಸಿದ್ದಾರೆ. ಇಬ್ಬರೂ ಗ್ರೇ ಡಿವೋರ್ಸ್ ಪಡೆದು ಬೇರ್ಪಟ್ಟಿದ್ದಾರೆ ಎಂಬ ವದಂತಿಗಳ ಮಧ್ಯೆ ಅಭಿಷೇಕ್ ಬಚ್ಚನ್ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಉಮ್ರಾವ್ ಜಾನ್, ಗುರು ಮತ್ತು ಧೂಮ್ 2 ನಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ನಡುವೆ ಪ್ರೇಮಾಂಕುರವಾಗಿತ್ತು. 'ಗುರು' ಸಿನಿಮಾ ಟೈಮ್ ನಲ್ಲಿ ಅಭಿಷೇಕ್ ಬಚ್ಚನ್ ಮಾಜಿ ವಿಶ್ವ ಸುಂದರಿಗೆ ಪ್ರಾಂಪ್ಸ್ ಮಾಡಿದ್ದು, ಏಪ್ರಿಲ್ 20, 2007ರಲ್ಲಿ ಇಬ್ಬರೂ ಸಪ್ತಪದಿ ತುಳಿದು ವಿವಾಹ ಜೀವಕ್ಕೆ ಕಾಲಿಟ್ಟಿದ್ದು ಈಗ ಇತಿಹಾಸ. 


ಇದನ್ನೂ ಓದಿ- ಓ ಪ್ರೇಮವೇ, ನೀನೆಷ್ಟು ಕ್ರೂರಿ… ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಹೇಳಿದ್ದೇನು?


ಪ್ರಸ್ತುತ, ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಡೇಟಿಂಗ್ ನಲ್ಲಿದ್ದಾರೆ. ಈಕೆಯಿಂದಲೇ ಅಭಿಷೇಕ್ ಐಶ್ವರ್ಯ ನಡುವೆ ಬಿರುಕು ಮೂಡಿದೆ ಎಂಬಿತ್ಯಾದಿ ವರದಿಗಳು ಹರಿದಾಡುತ್ತಿವೆ. ಏತನ್ಮಧ್ಯೆ, ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ. 


ಇದನ್ನೂ ಓದಿ- ಅಭಿಷೇಕ್ ಬಚ್ಚನ್ ಜೊತೆ ಜಗಳ ಆದ್ರೆ ಯಾವಾಗ್ಲೂ ನಾನೇ Sorry ಕೇಳಬೇಕು… ವಿಚ್ಛೇದನ ವದಂತಿ ನಡುವೆ ಐಶ್ವರ್ಯ ರೈ ಮಾತು!


ಈ ಥ್ರೋಬ್ಯಾಕ್ ವೈರಲ್ ವಿಡಿಯೋದಲ್ಲಿ, ಅಭಿಷೇಕ್ ಬಚ್ಚನ್, "ನಾನಿಲ್ಲಿ ನನ್ನ ಹೆಂಡತಿಯನ್ನು, ಸುಂದರ ಹೆಂಡತಿಯನ್ನು ರಕ್ಷಿಸುತ್ತಿದ್ದೇನೆ. ಆದರವಳು ಮೊದಲು ಉದ್ಯಮಕ್ಕೆ ಬಂದಾಗ ವಿಶ್ವ ಸುಂದರಿಯಾಗಿದ್ದಳು. ಹೌದು, "ಅವಳು ಇಂದಿಗೂ ಭೂಮಿಯ ಮೇಲಿನ ಅತಿ ಸುಂದರ ಮಹಿಳೆ...". ಸೌಂದರ್ಯವೇ ಐಶ್ವರ್ಯ ಮತ್ತವಳ ಮೋಡಿಯೂ ಸತ್ಯ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಅವಳ ಸೌಂದರ್ಯ, ನಾದವಳಿಕೆಯ ಹೊರತಾಗಿ ಆಕೆ ತನ್ನ ಕಾರ್ಯಕ್ಷಮತೆಯಿಂದ ದೂರವಾಗುವುದಿಲ್ಲ" ಎಂದು ಪತ್ನಿ ಐಶ್ವರ್ಯ ರೈ ಅವರನ್ನು ಅಭಿಷೇಕ್ ಹಾಡಿ ಹೊಗಳಿದ್ದಾರೆ. 


ಈ ಜೋಡಿಯ ಥ್ರೋಬ್ಯಾಕ್ ವೈರಲ್ ವಿಡಿಯೋವನ್ನು ನೀವು ಇಲ್ಲಿ ನೋಡಿ ಆನಂದಿಸಿ...