Abhishek Aishwarya rai divorce : ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ದಂಪತಿ ಮದುವೆಯಾಗಿ 17 ವರ್ಷಗಳಾಗಿವೆ, ಈ ಜೋಡಿಗೆ ಆರಾಧ್ಯ ಬಚ್ಚನ್ ಎಂಬ ಮಗಳಿದ್ದಾಳೆ.  ಆದರೆ ಇದೀಗ ಈ ಸ್ಟಾರ್‌ ಕಪಲ್‌ ಡಿವೋರ್ಸ್‌ ಪಡೆಯಲು ಮುಂದಾಗಿದ್ದಾರೆ ಎಂದು ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ..


COMMERCIAL BREAK
SCROLL TO CONTINUE READING

ಇದೇ ವೇಳೆ ಈ ಹಿಂದೆ ಐಶ್ ಮತ್ತು ಅಭಿ ಕೆಲವು ಸಂದರ್ಶನಗಳಲ್ಲಿ ಪರಸ್ಪರ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದರು. ಇದೀಗ ಆ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಈ ಪೈಕಿ ಅಭಿಷೇಕ್‌ ಐಶು ಅಡುಗೆ ಟ್ಯಾಲೆಂಟ್‌ ಬಗ್ಗೆ ಮಾತನಾಡಿರುವ ಥ್ರೋಬ್ಯಾಕ್ ವಿಡಿಯೋ ಒಂದು ಸಂಚಲನ ಸೃಷ್ಟಿಸುತ್ತಿದೆ..


ಇದನ್ನೂ ಓದಿ: ಶ್ರೀದೇವಿ ಎಷ್ಟು ದುರಹಂಕಾರಿ ಗೊತ್ತಾ.. ಲೆಜೆಂಡರಿ ನಟಿಯ ಸೆನ್ಸೇಷನಲ್ ಕಾಮೆಂಟ್!


ವರ್ಷಗಳ ಹಿಂದೆ, ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಹೋಮ್ ಅಪ್ಲಿಕೇಶನ್ ಬ್ರ್ಯಾಂಡ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ, ಪತ್ರಿಕಾಗೋಷ್ಠಿಯಲ್ಲಿ, ನಟನಿಗೆ ಐಶ್ವರ್ಯಾ ಯಾವ ಬಗೆಯ ಆಹಾರವನ್ನು ಉತ್ತಮವಾಗಿ ಅಡುಗೆ ಮಾಡುತ್ತಾರೆ ಎಂದು ಕೇಳಲಾಯಿತು. ಪತ್ನಿ ಏನೇ ಅಡುಗೆ ಮಾಡಿದರೂ ತುಂಬಾ ಪ್ರೀತಿಯಿಂದ ಅಡುಗೆ ಮಾಡುತ್ತಾಳೆ ಎಂದು ಅಭಿಷೇಕ್ ಹೇಳಿದ್ದರು.


ಅಭಿಷೇಕ್ ಬಚ್ಚನ್ ಅವರಿಗೆ ನಿರ್ದಿಷ್ಟ ಖಾದ್ಯದ ಬಗ್ಗೆ ಹೇಳಿ ಎಂದಾಗ, ಐಶ್ವರ್ಯಾ ಮದುವೆಯಾದ ಹೊಸತರಲ್ಲಿ ರುಚಿಕರವಾದ ಹಲ್ವಾ ಮಾಡಿದ್ದಾಗಿ ನೆನಪಿಸಿಕೊಂಡರು. ಅಲ್ಲದೆ, ತನ್ನ ಹೆಂಡತಿಯ ಅಡುಗೆ ಕೌಶಲ್ಯದ ಬಗ್ಗೆ ಸಾರ್ವಜನಿಕವಾಗಿ ಹೊಗಳಿದರು. ಸಧ್ಯ ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ.


ಇದನ್ನೂ ಓದಿ:ಎಲ್ಲವೂ ‘ಪೌಡರ್’ಮಯ… ವಾಸುಕಿ ವೈಭವ್-ಬಿಜ್ಜು ಭರ್ಜರಿ ಕಾಂಬಿನೇಷನ್ ಹಾಡು ‘ಮಿಷನ್ ಘಮ ಘಮ’ ಬಿಡುಗಡೆ


ಜುಲೈ 11 ರಂದು ನಡೆದ ಅಂಬಾನಿ ಮದುವೆಯ ನಂತರ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸುದ್ದಿಯಲ್ಲಿದ್ದಾರೆ. ಎಲ್ಲಿಯೂ ಸಹ ಈ ದಂಪತಿಗಳು ಒಟ್ಟಿಗೆ ಕಾಣಿಸಿಕೊಂಡಿಲ್ಲ.. ಇದು ಇಬ್ಬರ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಅನುಮಾನಕ್ಕೆ ಕಾರಣವಾಗಿತ್ತು.. ಇದರ ನಡುವೆ ಇದೀಗ ಡಿವೋರ್ಸ್‌ ಮ್ಯಾಟರ್‌ ಹರಿದಾಡುತ್ತಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.