ಎಲ್ಲವೂ ‘ಪೌಡರ್’ಮಯ… ವಾಸುಕಿ ವೈಭವ್-ಬಿಜ್ಜು ಭರ್ಜರಿ ಕಾಂಬಿನೇಷನ್ ಹಾಡು ‘ಮಿಷನ್ ಘಮ ಘಮ’ ಬಿಡುಗಡೆ

ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್‌ ಮತ್ತು Rap ಸಂಗೀತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಎಂ.ಸಿ ಬಿಜ್ಜು ಒಟ್ಟಾಗಿ ಬಂದಿರುವುದು ಹಾಡಿಗೆ ಹೆಚ್ಚು ಮೆರುಗನ್ನು ತಂದಿದೆ.

Written by - YASHODHA POOJARI | Last Updated : Jul 5, 2024, 09:25 PM IST
    • ಬಹುನಿರೀಕ್ಷಿತ ಹಾಸ್ಯ ಚಟಾಕಿ ‘ಪೌಡರ್’‌ ಚಿತ್ರ ತಂಡ
    • ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮತ್ತು ಖ್ಯಾತ ಗಾಯಕ ಎಂ.ಸಿ.ಬಿಜ್ಜು ಕಾಂಬಿನೇಷನ್‌
    • ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್‌
ಎಲ್ಲವೂ ‘ಪೌಡರ್’ಮಯ… ವಾಸುಕಿ ವೈಭವ್-ಬಿಜ್ಜು ಭರ್ಜರಿ ಕಾಂಬಿನೇಷನ್ ಹಾಡು ‘ಮಿಷನ್ ಘಮ ಘಮ’ ಬಿಡುಗಡೆ title=
File Photo

Sandalwood Cinema: ಬಹುನಿರೀಕ್ಷಿತ ಹಾಸ್ಯ ಚಟಾಕಿ ‘ಪೌಡರ್’‌ ಚಿತ್ರ ತಂಡ, ಮಿಷನ್‌ ಘಮ ಘಮ ಎಂಬ ಹಾಡನ್ನು ಇಂದು ಬಿಡುಗಡೆ ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್‌ ಮತ್ತು ಖ್ಯಾತ ಗಾಯಕ ಎಂ.ಸಿ.ಬಿಜ್ಜು ಅವರ ಕಾಂಬಿನೇಷನ್‌ ಅಲ್ಲಿ ಮೂಡಿ ಬಂದಿರುವ ಮೊದಲ ಗೀತೆ ಇದಾಗಿದ್ದು, ತನ್ನ ವಿಭಿನ್ನವಾದ ಟ್ಯೂನ್‌ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಒಂದು ಚಮಚ ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!

ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್‌ ಮತ್ತು Rap ಸಂಗೀತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಎಂ.ಸಿ ಬಿಜ್ಜು ಒಟ್ಟಾಗಿ ಬಂದಿರುವುದು ಹಾಡಿಗೆ ಹೆಚ್ಚು ಮೆರುಗನ್ನು ತಂದಿದೆ.

ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ‌ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ಪೌಡರ್.‌ ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? "ಪೌಡರ್" ‌ಹಿಂದಿನ "ಪವರ್"‌ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಉತ್ತರ ದೊರೆಯಲಿದೆ.

ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರುವ‌ ಪೌಡರ್ ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿದ್ದಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.

ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿ ಅಸಲಿ ವಯಸ್ಸೆಷ್ಟು? ಈಕೆ ಮೊದಲು ನಟಿಸಿದ್ದು ತೆಲುಗಿನಲ್ಲಿ ಅಲ್ಲ…

ಕೆ‌.ಆರ್.ಜಿ. ಸ್ಟುಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್’ನ ಚೊಚ್ಚಲ ಸಹಯೋಗವಾದ "ಪೌಡರ್" ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ‌.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುತ್ತಾರೆ‌.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News