ಮಾರ್ಟಿನ್... ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಹೈಬಜೆಟ್ ಸಿನಿಮಾ. ಬರೋಬ್ಬರಿ 3 ವರ್ಷಗಳ ಕಾಲ ಶೂಟಿಂಗ್ ಮಾಡಲಾಗಿರೋ ‘ಮಾರ್ಟಿನ್‘ ರಿಲೀಸ್ ಗೆ ಕೆಲವೇ ಗಂಟೆಗಳು ಬಾಕಿ ಇದೆ.  ಆಕ್ಷನ್ ಪ್ರಿನ್ಸ್ ಅಬ್ಬರ ನೋಡಲು ಕಾದಿದ್ದ ಅಭಿಮಾನಿಗಳು ಇದೀಗ ಫುಲ್ ಖುಷ್ ಆಗಿದ್ದಾರೆ. ಯಾಕಂದ್ರೆ ಮಾರ್ಟಿನ್ ಸಿನಿಮಾ ಹಾಡುಗಳು, ಟೀಸರ್ ಮತ್ತು ಟ್ರೇಲರ್ ನೋಡಿದ್ದ ಫ್ಯಾನ್ಸ್‌ಗೆ ಬಿಗ್ ಸ್ಕ್ರೀನ್ ಮೇಲೆ ಕಂಪ್ಲೀಟ್ ಸಿನಿಮಾವನ್ನ ನೋಡೋ ಕಾಲ ಹತ್ತಿರವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹೊಸ ದಾಖಲೆ ನಿರ್ಮಿಸಿದ ಇಂಗ್ಲೆಂಡ್; 66 ವರ್ಷಗಳ ಹಳೆಯ ದಾಖಲೆ ಬ್ರೇಕ್!


ಸಿನಿಮಾ ನೋಡಿದ ಚಿತ್ರತಂಡ ಹೇಳುವ ಪ್ರಕಾರ, ಆಕ್ಷನ್ ಪ್ರಿನ್ಸ್ ಸಿನಿಮಾ ರಸಿಕರನ್ನ ಹುಚ್ಚರಂತೆ ಕಾಡಿ ಬೆವರಿಳಿಸುತ್ತಾರಂತೆ. ಏನೇ ಅಡೆಚಣೆ ಇದ್ದರೂ ಕೂಡ ಈ ಸಿನಿಮಾ ಹಿಸ್ಟರಿ ಕ್ರಿಯೇಟ್ ಮಾಡೋದು ಪಕ್ಕಾ ಅನ್ನೋ ಮಾತು ಕೂಡ ಗಾಂಧಿನಗರದಲ್ಲಿ ಸೌಂಡ್ ಮಾಡುತ್ತಿದೆ. ಯಾರೂ ಮಾಡದ ಹೊಸ ಪ್ರಯತ್ನಕ್ಕೆ ಮುನ್ನುಡಿ ಇಟ್ಟಿದೆ ಮಾರ್ಟಿನ್ ಚಿತ್ರತಂಡ ಅನ್ನೋ ವಿಚಾರ ಈಗಾಗಲೇ ರಿವಿಲ್ ಆಗಿದೆ.


ಈಗಾಗಲೇ ರಿಲೀಸ್ ಆಗಿರೋ ’ಜೀವ ನೀನೇ‘ ಮತ್ತು ಮಾರ್ಟಿನ್ ಎಂಟ್ರಿ ಸಾಂಗ್ ಸಖತ್ ಥ್ರಿಲ್ ಕೊಟ್ಟಿದೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಅದ್ದೂರಿಯಾಗಿ ರೀಲ್ಸ್ ಕೂಡ ಆಗುತ್ತಿದೆ. ಎಲ್ಲಾ ಹೇಳೋ ಪ್ರಕಾರ BGM ಮತ್ತು ವಿಶುಯಲ್ ಟ್ರೀಟ್ ಹಾಗೂ ಸ್ಟೋರಿ ನಮ್ಮನ್ನ ಎಣ್ಣೆ ಹೊಡೆದು ನೆಕ್ಸ್ಟ್ ಡೇ ಹ್ಯಾಂಗ್ಓವರ್ ತರ ಕಾಡೋದು ಫಿಕ್ಸ್ ಎನ್ನಲಾಗಿದೆ.


ಕಂಪ್ಲೀಟ್ ಮನರಂಜನೆ ಇರೋ ಸಿನಿಮಾವನ್ನ ನೋಡಲು ಜನ ಕೂಡ ಬುಕ್ ಮೈ ಶೋ ಮೂಲಕ ಈಗಾಗಲೇ ಬುಕ್ ಮಾಡಿ ಕುಟುಂಬ ಸಮೇತರಾಗಿ ನೋಡಲು ಭರ್ಜರಿಯಾಗಿ ರೆಡಿಯಾಗಿದ್ದಾರೆ.  ನೀವು ಕೂಡ ಈ ಕೂಡಲೇ ಟಿಕೆಟ್ ಬುಕ್ ಮಾಡಿಕೊಂಡು ಥೀಯೇಟರ್ ಗೆ ಹೋಗಿ ಸಿನಿಮಾ ನೋಡಿ ಆನಂದಿಸಿ


ಅಡ್ವಾನ್ಸ್ ಬುಕ್ಕಿಂಗ್ ವಿಚಾರಕ್ಕೆ ಬಂದರೆ ಮೊದಲ ದಿನ ಬೆಂಗಳೂರಿನಲ್ಲಿ 450ಕ್ಕೂ ಅಧಿಕ ಶೋಗಳು ನಿಗದಿಯಾಗಿದೆ. ಈ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. 20ಕ್ಕೂ ಅಧಿಕ ಶೋಗಳು ಸೋಲ್ಡೌಟ್ ಹಾಗೂ ಫಾಸ್ಟ್‌ ಫಿಲ್ಲಿಂಗ್ ಇದೆ.


ಇದನ್ನೂ ಓದಿ: ರತನ್‌ ಟಾಟಾ ನೆನೆದು ಕಣ್ಣಿರಿಟ್ಟ ಖ್ಯಾತ ನಟಿ! ಮಾಜಿ ಪ್ರೇಮಿಯನ್ನು ನೆನೆದು ಭಾವುಕರಾದ್ರು ನಾಯಕಿ


ವೈಭವಿ ಶಾಂಡಿಲ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ್‌ ಕುಮಾರ್, ಸಾಧು ಕೋಕಿಲ, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರವಿ ಬಸ್ರೂರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸತ್ಯಾ ಹೆಗಡೆ ಛಾಯಾಗ್ರಹಣವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ