ರತನ್‌ ಟಾಟಾ ನೆನೆದು ಕಣ್ಣಿರಿಟ್ಟ ಖ್ಯಾತ ನಟಿ! ಮಾಜಿ ಪ್ರೇಮಿಯನ್ನು ನೆನೆದು ಭಾವುಕರಾದ್ರು ನಾಯಕಿ

Ratan Tata Ex lover Simi Garewal: ಥ್ರೋಬ್ಯಾಕ್ ಚಿತ್ರ ಶೇರ್ ಮಾಡಿ, ನೀವು ಹೋಗಿದ್ದೀರಿ ಎಂದು ಅವರು ಹೇಳುತ್ತಾರೆ.... ಆದರೆ... ರತನ್ ಟಾಟಾ ನಿಧನಕ್ಕೆ ಮಾಜಿ ಪ್ರೇಯಸಿ ಭಾವನಾತ್ಮಕ ವಿದಾಯ! 

Ratan Tata Ex Lover Emotional Farewell: ಟಾಟಾ ಸನ್ಸ್‌ ಮಾಜಿ ಅಧ್ಯಕ್ಷ ರತನ್ ಟಾಟಾ ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಕಂಡಿತ್ತು. ಅವರನ್ನು ಸೋಮವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಅವರು ತಮ್ಮ 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರತನ್ ಟಾಟಾ ನಿಧನಕ್ಕೆ ಮಾಜಿ ಪ್ರೇಯಸಿಯ ಭಾವನಾತ್ಮಕ ವಿದಾಯ ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ದೇಶದ ಪ್ರಖ್ಯಾತ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ಅವರ ಸಾವಿನ ಸುದ್ದಿ ಕೇಳಿ ಇಡೀ ದೇಶವೇ ಮರುಕ ವ್ಯಕ್ತಪಡಿಸುತ್ತಿರುವುದರ ನಡುವೆಯೆ ರತನ್ ಟಾಟಾ ಅವರ ಮಾಜಿ ಪ್ರೇಯಸಿ ಭಾವನಾತ್ಮಕವಾದ ವಿದಾಯ ಹೇಳಿದ್ದಾರೆ.

2 /8

ರತನ್ ಟಾಟಾ 1960ರ ದಶಕದ ಆರಂಭದ ವೇಳೆ ಅಮೆರಿಕದಲ್ಲಿ ಕೆಲಸ ಮಾಡುವಾಗ ಒಬ್ಬರನ್ನು ಪ್ರೀತಿಸಿದ್ದರು. ಈ ಪ್ರೀತಿ ಮದುವೆಯ ಹಂತಕ್ಕೆ ಹೋಗಿ 1962ರ ಇಂಡೋ-ಚೀನಾ ಯುದ್ಧ ಮತ್ತಿತರ ಕಾರಣಗಳಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ. 

3 /8

ಬಳಿಕ ಚಿತ್ರ ನಟಿ ಸಿಮಿ ಗರೆವಾಲ್ ಅವರ ಪ್ರೇಮ ಪಾಶದಲ್ಲಿ ಸಿಲುಕಿದ್ದರು ‘ಭಾರತೀಯ ಕೈಗಾರಿಕಾ ಕ್ರಾಂತಿಯ ಹರಿಕಾರ’ ರತನ್ ಟಾಟಾ

4 /8

ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಸಿಮಿ ಗರೆವಾಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ‘ನನ್ನ ಮತ್ತು ರತನ್ ಸಂಬಂಧ ತುಂಬಾ ಹಳೆಯದು’ ಎಂದಿದ್ದರು. ನಾಲ್ಕು ಸಂದರ್ಭಗಳಲ್ಲಿ ರತನ್ ಟಾಟಾ ಅವರನ್ನು ಪ್ರೀತಿಸುತ್ತಿದ್ದೆ ಆದರೆ ವಿವಿಧ ಕಾರಣಗಳಿಂದ ಅವರೊಂದಿಗೆ ಮದುವೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.

5 /8

ರತನ್ ಟಾಟಾ ಅವರೊಬ್ಬ ಪರಿಪೂರ್ಣ, ಅಸಾಧಾರಣ ಮತ್ತು ಸಂಭಾವಿತ ಮನುಷ್ಯ, ಅವರ ಹಾಸ್ಯ ಪ್ರಜ್ಞೆ ಕೂಡ ಚೆನ್ನಾಗಿತ್ತು. ಅವರಿಗೆ ಎಂದಿಗೂ ಹಣ ಮುಖ್ಯವಾಗಿರಲಿಲ್ಲ. ಅವರು ವಿದೇಶದಲ್ಲಿ ಇದ್ದಷ್ಟು ನಿರಾಳರಾಗಿ ಭಾರತದಲ್ಲಿ ಇರಲಿಲ್ಲ’ ಎಂದಿದ್ದರು ಸಿಮಿ.

6 /8

ರತನ್ ಟಾಟಾ ಮತ್ತು ಸಿಮಿ ಗರೆವಾಲ್ ಡೇಟಿಂಗ್​ನಲ್ಲಿ ಇದ್ದರು. ಇವರ ಪ್ರೀತಿ ಮದುವೆಯ ಹಂತಕ್ಕೆ ಹೋಗಲಿಲ್ಲ. ಇಬ್ಬರೂ ಬೇರೆಯವರನ್ನು ಮದುವೆಯಾದರು. ನಂತರ ತುಂಬಾ ವರ್ಷ ನಿಕಟ ಸ್ನೇಹಿತರಾಗಿಯೇ ಇದ್ದರು.

7 /8

ರತನ್ ಟಾಟಾ ಸಾವಿಗೆ ಕಂಬನಿ ಮಿಡಿದಿರುವ ನಟಿ  ಸಿಮಿ ಗರೆವಾಲ್ ಅವರು ತಮ್ಮ ಭಾವನಾತ್ಮಕ ಶ್ರದ್ಧಾಂಜಲಿಯಲ್ಲಿ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. 

8 /8

‘ಎಲ್ಲರು ನೀವು ಹೋಗಿದ್ದೀರಿ ಎಂದು ಹೇಳುತ್ತಿದ್ದಾರೆ. ನಿಮ್ಮ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ. ತುಂಬಾ ಕಷ್ಟ. ವಿದಾಯ ನನ್ನ ಸ್ನೇಹಿತ’ ಎಂದು ಸಿಮಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.