Allu Arjun At Nandyal : ಆಂಧ್ರ ಪ್ರದೇಶದಲ್ಲಿ ಚುನಾವಣಾ ಕಾವು ಜೋರಾಗಿದೆ. ಇಂದು ಸಂಜೆ ವೇಳೆಗೆ ಚುನಾವಣಾ ಪ್ರಚಾರ ಕಾರ್ಯ ಕೊನೆಗೊಳ್ಳಲಿದ್ದು, ಸೆಕ್ಷನ್ 144 ಜಾರಿಯಾಗಲಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳು ತಮ್ಮ ಕೊನೆಯ ಬ್ರಹ್ಮಾಸ್ತ್ರವನ್ನು ಬಳಸುತ್ತಿವೆ. ಅದರಲ್ಲೂ ನಂದ್ಯಾಲ ವೈಸಿಪಿ ಅಭ್ಯರ್ಥಿ ತನ್ನ ಗೆಲುವಿಗಾಗಿ ಮೆಗಾ ಕುಟುಂಬದ ಹೀರೋ ಅಲ್ಲು ಅರ್ಜುನ್ ಅವರನ್ನು ಕಣಕ್ಕಿಳಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಎರಡು ದಿನಗಳ ಹಿಂದೆ ಅಲ್ಲು ಅರ್ಜುನ್ ತಮ್ಮ ಟ್ವಿಟ್ಟರ್ ನಲ್ಲಿ ಪವನ್ ಕಲ್ಯಾಣ್ ಪರ ಪೋಸ್ಟ್ ಮಾಡಿದ್ದರು. ಇದೀಗ ಪವನ್‌ ಅವರ ವಿರೋಧ ಪಕ್ಷವಾಗಿರುವ YSR ಪಕ್ಷದ ಅಭ್ಯರ್ಥಿಯ ಪ್ರಚಾರ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮತ್ತೊಂದೆಡೆ, ರಾಮ್ ಚರಣ್ ಚಿಕ್ಕಪ್ಪ ಪವನ್‌ ಕಲ್ಯಾಣ್‌ ಪರ ಪಿಠಾಪುರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ.


ಇದನ್ನೂ ಓದಿ: ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೀವನದಲ್ಲಿ ʼಗುರು ರಾಯರʼ ಪವಾಡ..! ಆತ್ಮಹತ್ಯೆಗೆ ಯತ್ನಿಸಿದ್ದ ನಟ ಬದುಕ್ಕಿದ್ದೇಗೆ..?


ನಂದ್ಯಾಲ ಚುನಾವಣಾ ಪ್ರಚಾರಕ್ಕೆ ಸ್ಟೈಲಿಶ್ ಸ್ಟಾರ್ ದಿಢೀರ್ ಎಂಟ್ರಿ ಕೊಟ್ಟಿದ್ದು, ವೈಸಿಪಿ ಅಭ್ಯರ್ಥಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಪರ ಪ್ರಚಾರ ನಡೆಸಿದರು. ರವಿಚಂದ್ರರೆಡ್ಡಿ ಅವರನ್ನು ಗೆಲ್ಲಿಸಬೇಕು ಎಂದು ಬನ್ನಿ ಮತದಾರರಿಗೆ ಕರೆ ನೀಡಿದರು. ನಂದ್ಯಾಲ YCP MLA ಅಭ್ಯರ್ಥಿ ಶಿಲ್ಪಾ ರವಿಚಂದ್ರ ಕಿಶೋರ್ ರೆಡ್ಡಿ ಅಲ್ಲು ಅರ್ಜುನ್ ದಂಪತಿಗೆ ತುಂಬಾ ಒಳ್ಳೆಯ ಸ್ನೇಹಿತರು ಈ ಹಿನ್ನಲೇ ಅವರ ಪರ ಪ್ರಚಾರ ನಡೆಸಿದ್ದಾರೆ.


ಮತ್ತೊಂದೆಡೆ, ಎರಡು ದಿನಗಳ ಹಿಂದೆ ಬನ್ನಿ ಪವನ್ ಕಲ್ಯಾಣ್ ಅವರ ಚುನಾವಣಾ ಯಾತ್ರೆ ಯಶಸ್ವಿಯಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಪವನ್ ಅವರ ಆಯ್ಕೆ ಮಾರ್ಗ ಮತ್ತು ಸೇವೆ ಮಾಡುವ ಬದ್ಧತೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. “ಕುಟುಂಬದ ಸದಸ್ಯನಾಗಿ ನನ್ನ ಪ್ರೀತಿ ಮತ್ತು ಬೆಂಬಲ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ. ನಿಮ್ಮ ಮಹತ್ವಾಕಾಂಕ್ಷೆಗಳು ಮತ್ತು ಗುರಿಗಳು ನನಸಾಗಲಿ ಎಂದು ಅಲ್ಲು ಅರ್ಜುನ್ ಶುಭ ಹಾರೈಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.