Actor Darshan Arrest Live Updates: ಬಗೆದಷ್ಟು ಬಯಲಾಗ್ತಿದೆ ದರ್ಶನ್‌ ಮತ್ತು ಡಿ ಗ್ಯಾಂಗ್‌ ಕ್ರೌರ್ಯ!?

Darshan In Renukaswamy Murder case:  ಡಿ ಗ್ಯಾಂಗ್‌ನಿಂದ ಕೊಲೆ ಕೇಸ್‌ ಸಂಬಂಧಪಟ್ಟಂತೆ ನಟ ದರ್ಶನ್‌ ಹಾಗೂ ತಂಡ ಇನ್ನೂ ಒಂದು ದಿನ ಪೊಲೀಸ್‌ ಕಸ್ಟಡಿಯಲ್ಲಿ ಇರಲಿದ್ದಾರೆ.  ಈ ಸಮಯದಲ್ಲಿ ದರ್ಶನ್‌ ಮನಸ್ಥಿತಿ ಬದಲಾವಣೆಯಾಗುತ್ತಿದ್ದು, ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರೆ ಎನ್ನಲಾಗುತ್ತಿದೆ..  

Written by - Savita M B | Last Updated : Jun 15, 2024, 03:57 PM IST
Actor Darshan Arrest Live Updates: ಬಗೆದಷ್ಟು ಬಯಲಾಗ್ತಿದೆ ದರ್ಶನ್‌ ಮತ್ತು ಡಿ ಗ್ಯಾಂಗ್‌ ಕ್ರೌರ್ಯ!?
Live Blog

Actor Darshan Arrest: ದರ್ಶನ್‌ ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದ ಎನ್ನುವ ಕಾರಣದಿಂದ ರೇಣುಕಾಸ್ವಾಮಿಯನ್ನು ಹತ್ಯೆಗೈಯಲಾಗಿದೆ ಎಂಬ ಆರೋಪದಡಿ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್‌ ಪಶ್ಚಾತ್ತಾಪದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ A1 ಆರೋಪಿಯಾಗಿದ್ದು, ದರ್ಶನ್‌ A2 ಆಗಿದ್ದಾರೆ. ಒಟ್ಟು 17 ಮಂದಿ ಸದ್ಯ ಪೊಲೀಸ್‌ ಕಸ್ಟಡಿಯಲ್ಲಿದ್ದು, ತನಿಖೆ ತೀವ್ರಗೊಂಡಿದೆ.

15 June, 2024

  • 15:56 PM

    Darshan:​ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕೊಲೆ ಪ್ರಕರಣಕ್ಕೆ ಸಿಲುಕಿದ್ರಾ ದರ್ಶನ್‌ ಅಭಿಮಾನಿಗಳು?! 
    ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ಷಣಕ್ಷಣಕ್ಕೊಂದು ಮಾಹಿತಿ ಬಹಿರಂಗವಾಗುತ್ತಿದೆ.. ಈ ಕೇಸ್‌ನಲ್ಲಿ ಆರೋಪಿ ಎಂದು ಗುರುತಿಸಲಾಗಿರುವ ರವಿ, ಅನು, ಜಗ್ಗ ಅವರನ್ನು ನಟ ದರ್ಶನ್ ಜೊತೆ ಸೆಲ್ಫಿ ತೆಗೆದುಕೊಳ್ಳುವುದಾಗಿ ಹೇಳಿ ಕರೆದೊಯ್ಯಲಾಗಿತ್ತು ಎನ್ನಲಾಗಿದ್ದು, ಫೋಟೋ ಆಸೆಗೆ ರವಿ, ಅನು, ಜಗ್ಗ ಕೇಸ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.. 

  • 13:06 PM

    ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ದರ್ಶನ್‌ ಕುರಿತಾಗಿ ಜೀ ಕನ್ನಡ ನ್ಯೂಸ್ ಪ್ರತಿನಿಧಿ ಜೊತೆ ಮಾತನಾಡಿದ ಸಹೋದರ ದಿನಕರ್ ತೂಗುದೀಪ ನನ್ನ ಜೊತೆ ಏನು ಕೇಳಬೇಡಿ, ನಾನು ಏನು ಮಾತಾಡೋದಿಲ್ಲ, ನನಗೇನು ಗೊತ್ತಿಲ್ಲ ಎಂದು ನೋವಿನಲ್ಲೇ ಮಾತನಾಡಿದ್ದಾರೆ.. 
     

  • 13:01 PM

    Darshan Brother: ದರ್ಶನ್ ಬಗ್ಗೆ ಸಹೋದರ  ದಿನಕರ್ ತೂಗುದೀಪ ಮೊದಲ ರಿಯಾಕ್ಷನ್

    ದರ್ಶನ್ ಬಗ್ಗೆ ಸಹೋದರ  ದಿನಕರ್ ತೂಗುದೀಪ ಮೊದಲ ರಿಯಾಕ್ಷನ್. ಜೀ ಕನ್ನಡ ನ್ಯೂಸ್ ಪ್ರತಿನಿಧಿ ಜೊತೆ ಮಾತನಾಡಿದ ದಿನಕರ್ ತೂಗುದೀಪ. ನನ್ನ ಜೊತೆ ಏನು ಕೇಳಬೇಡಿ. ನಾನು ಏನು ಮಾತಾಡೋದಿಲ್ಲ, ನನಗೇನು ಗೊತ್ತಿಲ್ಲ ಎಂದ ದಿನಕರ್ ತೂಗುದೀಪ. 

  • 12:59 PM

    Actor Darshan Arrest: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ದರ್ಶನ್‌ ಹಾಗೂ ಡಿ ಗ್ಯಾಂಗ್‌ ಪೊಲೀಸ್‌ ಕಸ್ಟಡಿಯಲಿದ್ದಾರೆ.. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.. ಸದ್ಯ ಈ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಗ್ಯಾಂಗ್ ವಿರುದ್ಧ ಪೊಲೀಸ್‌ 21 ಸಾಕ್ಷ್ಯ ಪ್ರಬಲ ಸಾಕ್ಷ್ಯ ಕಲೆಹಾಕಿರುವ ಮಾಹಿತಿ ಲಭ್ಯವಾಗಿದೆ.. 

    ಸಾಕ್ಷ್ಯ 1 - ಕೊಲೆ ನಡೆದ ಸ್ಥಳದಲ್ಲಿ ದರ್ಶನ್‌ ಸೇರಿ 6 ಆರೋಪಿಗಳು ಇರೋದು ಪತ್ತೆಯಾಗಿದೆ. 
    ಸಾಕ್ಷ್ಯ 2 - ಕೊಲೆ ನಡೆದ ನಂತರ ಇಬ್ಬರು ಆರೋಪಿಗಳು ಕೃತ್ಯದ ಬಗ್ಗೆ ಚರ್ಚೆ ಮಾಡಿರುವ ಕಾಲ್ ಡೀಟೇಲ್ಸ್ 
    ಸಾಕ್ಷ್ಯ 3 - ಕೊಲೆ ನಡೆದ ಬಳಿಕ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ 
    ಸಾಕ್ಷ್ಯ 4 - ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲು ಡೀಲ್ ನಡೆಸಲಾಗಿದ್ದ ಮೂವತ್ತು ಲಕ್ಷ ಹಣ ಸೀಜ್
    ಸಾಕ್ಷ್ಯ 5 - ಸರೆಂಡರ್ ಆದವರ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗಗೊಂಡಿದೆ
    ಸಾಕ್ಷ್ಯ 6 - ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್, ಪವಿತ್ರಾ ಗೌಡ ಹೆಸರು ಬಹಿರಂಗಗೊಂಡಿದೆ
    ಸಾಕ್ಷ್ಯ 7 - ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡ್ತಿದ್ದ ಬಗ್ಗೆ ಪವನಗೆ ತಿಳಿಸಿದ್ದು,ಆತನ ಮೂಲಕ ದರ್ಶನ್‌ಗೆ ತಿಳಿಸಿದ್ದಾಗಿ ಪವಿತ್ರಾ ಹೇಳಿಕೆ ಕೊಟ್ಟಿದ್ದಾರಂತೆ.
    ಸಾಕ್ಷ್ಯ 8 - ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರನಿಂದ ರೇಣುಕಾಸ್ವಾಮಿ ಕಿಡ್ನ್ಯಾಪ್
    ಸಾಕ್ಷ್ಯ 9 - ಪವನ್, ದರ್ಶನ್‌ ಹೇಳಿದಂತೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಸ್ಟೇಟ್‌ಮೆಂಟ್ ಕೊಟ್ಟಿದ್ದಾನಂತೆ
    ಸಾಕ್ಷ್ಯ 10 - ಆರ್‌ಆರ್‌ ನಗರ ಶೆಡ್‌ನಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ, ಕೂದಲು, ಬೆವರಿನ ಸ್ಯಾಂಪಲ್ಸ್ ಅನ್ನು ಪೊಲೀಸರು ಸಂಗ್ರಹಿಸಿದ್ದಾರೆ
    ಸಾಕ್ಷ್ಯ 11 - ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್‌ ಪ್ರಿಂಟ್‌, ಬ್ಲಡ್ ಸ್ಯಾಂಪಲ್‌ಗಳನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ
    ಸಾಕ್ಷ್ಯ 12 - ರೇಣುಕಾಸ್ವಾಮಿ ಹಾಗೂ ಆರೋಪಿಗಳ ಸ್ಯಾಂಪಲ್ಸ್ ಮ್ಯಾಚ್ ಮಾಡುವ ಸಾಧ್ಯತೆ
    ಸಾಕ್ಷ್ಯ 13 - ಕೊಲೆ ನಡೆದ ಬಳಿಕ ಆರೋಪಿಗಳಿಂದ ದರ್ಶನ್‌ಗೆ ಪದೇ ಪದೇ ಕಾಲ್ ಹೋಗಿದ್ಯಂತ
    ಸಾಕ್ಷ್ಯ 14 - ಮೊಬೈಲ್ ಸಿಡಿಆರ್ ಟವರ್ ಡಂಪ್ ಮೂಲಕ ಆರೋಪಿಗಳು ಒಂದೇ ಕಡೆ ಇದ್ದಿದ್ದು ಪತ್ತೆಯಾಗಿದೆ
    ಸಾಕ್ಷ್ಯ 15 - ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ಕಟ್ಟಿಗೆ ಶೆಡ್‌ನಲ್ಲಿ ಪತ್ತೆ
    ಸಾಕ್ಷ್ಯ 16 - ಹತ್ಯೆಗೂ ಮುನ್ನ ರೇಣುಕಾಸ್ವಾಮಿ ಕಟ್ಟಿಹಾಕಲು ಬಳಸಿರುವ ಹಗ್ಗ ಸಿಕ್ಕಿರೋ ಮಾಹಿತಿ
    ಸಾಕ್ಷ್ಯ 17 - ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಬಳಸಿರುವ ಕಬ್ಬಿಣದ ವಸ್ತುಗಳು ಶೆಡ್‌ನಲ್ಲೇ ಪತ್ತೆ ಮಾಹಿತಿ
    ಸಾಕ್ಷ್ಯ 18 - ಆರೋಪಿಗಳು ಶೆಡ್‌ಗೆ ಹೋಗುವ,ಹಲ್ಲೆ‌ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ
    ಸಾಕ್ಷ್ಯ 19 - ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕರೆದುಕೊಂಡು ಬಂದ ಕಾರು
    ಸಾಕ್ಷ್ಯ 20 - ರೇಣುಕಾಸ್ವಾಮಿ ಶವವನ್ನ ಸಾಗಾಟ ಮಾಡಲು ಬಳಸಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ
    ಸಾಕ್ಷ್ಯ 21 - ಕೊಲೆ ನಡೆದ ಸ್ಥಳದಲ್ಲಿ ಆರೋಪಿಗಳು ಬಳಸಿರುವ ನೀರಿನ ಬಾಟಲ್, ಮದ್ಯದ ಬಾಟಲಿಗಳು ಪತ್ತೆ
     

  • 12:41 PM
    RenukaSwamy case: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ A7 ಆರೋಪಿಯಾಗಿರುವ ಅನಿಲ್ ಮನೆಯಲ್ಲಿ ದುರಂತವೊಂದು ನಡೆದಿದೆ.. ಮಗನ ಬಂಧನದ ಬಳಿಕ ಮನನೊಂದಿದ್ದ ಅನಿಲ್ ಅಲಿಯಾಸ್ ಅನು ತಂದೆ ಚಂದ್ರಣ್ಣ ಹೃದಯಾಘತದಿಂದ ಮೃತಪಟ್ಟಿದ್ದಾರೆ.. ಬಂಧನದ ಬೆನ್ನಲ್ಲೇ ಅನಿಲ್‌ ಕುಟುಂಬಕ್ಕೆ ಮತ್ತೊಂದು ತೀವ್ರ ಆಘಾತವಾಗಿದೆ..    
    

Trending News