Jothe Jotheyali: ಮತ್ತೆ ಒಂದಾದ ನಟ ಅನಿರುದ್ಧ್ ಮತ್ತು ನಿರ್ದೇಶಕ ಆರೂರು ಜಗದೀಶ್..!
Jothe Jotheyali Controversy: ವಿವಾದ ಸುಖಾಂತ್ಯವಾಗುತ್ತಿದ್ದಂತೆಯೇ ನಟ ಅನಿರುದ್ಧ್ ಅವರು ಆರೂರು ಜಗದೀಶ್ ಹೆಗಲ ಮೇಲೆ ಕೈ ಹಾಕಿ ಭಾವುಕರಾಗಿ ಹಳೆಯ ನೆನಪುಗಳ ಮೆಲುಕು ಹಾಕಿದರು.
ಬೆಂಗಳೂರು: ‘ಜೊತೆ ಜೊತೆಯಲಿ’ ಕಿರುತೆರೆ ಲೊಕದಲ್ಲಿ ಹೊಸ ದಾಖಲೆ ನಿರ್ಮಿಸಿದ್ದ ಧಾರಾವಾಹಿ ಅಂದರೆ ತಪ್ಪಾಗಲ್ಲ. TRP, ಕ್ವಾಲಿಟಿ ಹೀಗೆ ಎಲ್ಲದರಲ್ಲೂ ದಾಖಲೆ ಬರೆದಿದ್ದ ಈ ಧಾರಾವಾಹಿ ಕೊನೆಗೆ ಕಾಂಟ್ರವರ್ಸಿಯಲ್ಲೂ ಕಿರುತೆರೆ ಪ್ರೇಕ್ಷಕರನ್ನು ಕನ್ಪ್ಯೂಸ್ ಮಾಡಿತ್ತು. ಅಲ್ಲದೆ ನಿರ್ದೇಶಕ ಆರೂರು ಜಗದೀಶ್ ‘ಜೊತೆ ಜೊತೆಯಲಿ’ ಎಂಬ ಸುಂದರ ಟೈಟಲ್ ನಲ್ಲಿ ಧಾರಾವಾಹಿ ಮಾಡಿ, ನಟ ಅನಿರುದ್ಧ್ ನಡುವಿನ ಚಿಕ್ಕ ಮನಸ್ತಾಪದಿಂದ ನಾನ್ಯಾರೋ ನೀನ್ಯಾರೋ ಅನ್ನೊ ಮಟ್ಟಕ್ಕೆ ಬೆಳೆದು.. ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈ ಬಿಟ್ಟು ‘ಅರ್ಯವರ್ಧನ್’ ಪಾತ್ರವನ್ನೇ ಸಾಯಿಸಿದ್ರು...
ಇದಾದ ನಂತರ ಎರಡ್ಮೂರು ತಿಂಗಳು ಸೈಲೆಂಟ್ ಆಗಿದ್ದ ಅನಿರುದ್ಧ್ ತಮ್ಮ ಹೊಸ ಮನೆಯ ಗೃಹ ಪ್ರವೇಶದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಹಿರಿಯ ನಿರ್ದೇಶಕ ಎಸ್.ನಾರಾಯಣ್ ಜೊತೆಗೆ ‘ಸೂರ್ಯವಂಶ’ ಎಂಬ ಸೀರಿಯಲ್ ಮಾಡ್ತಿರೋ ವಿಚಾರವನ್ನು ಹಂಚಿಕೊಂಡಿದ್ದರು. ಯಾವಾಗ ಅನಿರುದ್ಧ್ ಮತ್ತೆ ಕಿರುತೆರೆಗೆ ಎಂಟ್ರಿಕೊಡ್ತಾರೆ ಅಂತಾ ತಿಳಿಯಿತೋ ಆ ಕೂಡಲೇ ನಿರ್ದೇಶಕ ಆರೂರ್ ಜಗದೀಶ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘ ಎಸ್.ನಾರಾಯಣ್ ಅವರನ್ನು ಭೇಟಿಯಾಗಿ ಅವರನ್ನು ನಾವು ಕಿರುತೆರೆಯಿಂದ ಬ್ಯಾನ್ ಮಾಡಿದ್ದೀವಿ.. ನೀವು ಕೂಡ ನಮ್ಮ ನಿರ್ಧಾರವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಇದರ ಬೆನ್ನಲ್ಲೆ ಎಸ್.ನಾರಾಯಣ್ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿ ಫಿಲ್ಮ್ ಚೇಂಬರ್‍ನಲ್ಲಿ ಸಂಧಾನ ಸಭೆ ಇದೆ. ಇದಾದ ನಂತರ ನೋಡೋಣವೆಂದು ತಿಳಿಸಿದ್ದರು.
ಇದನ್ನೂ ಓದಿ: ಅದ್ಧೂರಿಯಾಗಿ ಜರುಗಿದ ಅಭಿ-ಅವಿವಾ ನಿಶ್ಚಿತಾರ್ಥ : ಜೋಡಿ ಸೂಪರ್ ಅಲ್ವಾ..!
ಕಿರುತೆರೆಯಿಂದ ಅನಿರುದ್ಧ್ ಅವರನ್ನು ಬ್ಯಾನ್ ಮಾಡಿ ಅಂತಾ ನಿರ್ಮಾಪಕರ ಸಂಘ ಎಸ್.ನಾರಾಯಣ್ ಅವರಿಗೆ ಒತ್ತಡ ಹಾಕಿದ ಬೆನ್ನಲ್ಲೇ ನಟ ಅನಿರುದ್ಧ್ ಫಿಲ್ಮ್ ಚೆಂಬರ್‍ಗೆ ಪತ್ರ ಬರೆದು ವಿವಾದ ಬಗೆಹರಿಸುವಂತೆ ಮನವಿ ಮಾಡಿದ್ದರು. ಯಾವಾಗ ಅನಿರುದ್ಧ್ ಪತ್ರ ಬರೆದರೋ ಕೂಡಲೇ ವಾಣಿಜ್ಯ ಮಂಡಳಿ ಅನಿರುದ್ಧ್ ಹಾಗೂ ಕಿರುತೆರೆ ನಿರ್ಮಾಪಕರ ಸಂಘವನ್ನುಒಟ್ಟಿಗೆ ಸೇರಿಸಿ ಇಬ್ಬರ ನಡುವಿನ ಬಿಕ್ಕಟ್ಟನು ಪರಿಹರಿಸುವ ಪ್ರಯತ್ನ ಮಾಡಿತು. ಅದರೆ ನಿರ್ಮಾಪಕರ ಸಂಘದ ಸದಸ್ಯರು ವಾಣಿಜ್ಯ ಮಂಡಳಿಯ ಸಂಧಾನ ಸಭೆಗೆ ಗೈರಾಗಿದ್ದರು. ಇದರ ಬೆನ್ನಲ್ಲೇ ವಾಣಿಜ್ಯ ಮಂಡಳಿ, ‘ಚಿತ್ರರಂಗದಲ್ಲಿ ಯಾರು.. ಯಾರನ್ನೂ ಬ್ಯಾನ್ ಮಾಡಲು ಆಗಲ್ಲ.. ನಾವೆಲ್ಲಾ ಅನಿರುದ್ಧ್ ಪರವಾಗಿ ಇದ್ದೀವಿ ಅಂತಾ ಹೇಳಿದರು.
ಇದನ ಬೆನ್ನಲ್ಲೇ ನಿರ್ಮಾಪಕರ ಸಂಘ ಹಾಗೂ ಆರೂರು ಜಗದೀಶ್ ಟಿಲಿಷನ್ ಅಸೋಸಿಯೇಷನ್ ಜೊತೆ ಅನಿರುದ್ಧ್ ಅವರನ್ನು ಕರೆಸಿ ಒಟ್ಟಿಗೆ ಕುಳಿತುಕೊಂಡು 2 ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಒಮ್ಮತದಿಂದ ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ. ಈ ಮೂಲಕ ಅನಿರುದ್ಧ್ ಹಾಗೂ ಆರೂರು ಜಗದೀಶ್ ಅವರ ನಡುವಿನ ಮನಸ್ತಾಪಕ್ಕೆ ಬ್ರೇಕ್ ಬಿದ್ದಿದೆ. ನಿಮ್ಮ ಕೆಲಸವನ್ನು ನೀವು, ಅನಿರುದ್ಧ್ ಅವರ ಕೆಲಸವನ್ನು ಅವರು ಮಾಡಿಕೊಂಡು ಹೋಗಲಿ.. ನಾವೆಲ್ಲರೂ ಒಂದೇ ಕುಟುಂಬದವರು. ನಮ್ಮ ನಡುವೆ ವೈಮನಸ್ಸು ಬೇಡವೆಂದು ವಿವಾದಕ್ಕೆ ಅಂತ್ಯ ಹಾಡಿದ್ದೇವೆ ಅಂತಾ ಕಿರುತೆರೆ ಪರವಾಗಿ ಹಿರಿಯ ನಿರ್ದೇಶಕ ಪಿ.ಶೇಷಾದ್ರಿ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ : ʼಉಸ್ತಾದ್ ಭಗತ್ ಸಿಂಗ್ʼ ಆದ ಪವರ್‌ಸ್ಟಾರ್..!
ವಿವಾದ ಸುಖಾಂತ್ಯವಾಗುತ್ತಿದ್ದಂತೆಯೇ ನಟ ಅನಿರುದ್ಧ್ ಅವರು ಆರೂರು ಜಗದೀಶ್ ಹೆಗಲ ಮೇಲೆ ಕೈ ಹಾಕಿ ಭಾವುಕರಾಗಿ ಹಳೆಯ ನೆನಪುಗಳ ಮೆಲುಕು ಹಾಕಿದರು. ಇದೇ ವೇಳೆ ಕಣ್ಣೀರಿಟ್ಟ ಅವರು, ‘ಜೊತೆ ಜೊತೆಯಲಿ’ ಧಾರಾವಾಹಿಯ ಬಳಗದ ಈ ಕಹಿ ಘಟನೆಯಿಂದ ಅಭಿಮಾನಿಗಳಿಗೆ ರಸಭಂಗವಾಗಿದೆ. ಹೀಗೆ ಆಗಬಾರದಿತ್ತು, ಇದಕ್ಕೆ ನಾನು ಅಭಿಮಾನಿಗಳ ಬಳಿ ಕ್ಷಮೆ ಕೇಳುತ್ತೇನೆ' ಅಂತಾ ಮತ್ತಷ್ಟು ಭಾವುಕರಾದರು.
ಒಟ್ಟಿನಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿದ್ದ ಅನಿರುದ್ಧ್ ಮತ್ತು ಆರೂರು ಜಗದೀಶ್ ಅವರ ಮನಸ್ತಾಪಕ್ಕೆ ಕೊನೆಗೂ ಮುಕ್ತಿ ಸಿಕ್ಕಿದ್ದು, ದೂರಾಗಿದ್ದ ಈ ಹಿಟ್ ಜೋಡಿ ಮತ್ತೆ ಹೆಗಲ ಮೇಲೆ ಕೈ ಹಾಕಿ ಒಂದಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತೆ ನಾವು ಕಿರುತೆರೆ ಮೇಲೆ ಒಂದಾದ್ರೂ ಆಶ್ಚರ್ಯವಿಲ್ಲವೆಂದು ಹೇಳುವ ಮೂಲಕ ‘ಜೊತೆ ಜೊತೆಯಲಿ’ ಧಾರಾವಾಹಿ ಪ್ರಿತಿಸುವ ಹಾಗೂ ಅನಿರುದ್ಧ್ ಅವರನ್ನು ಆರಾಧಿಸುವ ಹೃದಯಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.