ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ʼಉಸ್ತಾದ್ ಭಗತ್ ಸಿಂಗ್ʼ ಆದ ಪವರ್‌ಸ್ಟಾರ್‌..!

ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್. ಸಾಲು ಸಾಲು ಸಿನಿಮಾಗಳ ಜೊತೆ ರಾಜಕೀಯದಲ್ಲಿ ಬ್ಯುಸಿಯಾಗಿರುವ ಜನಸೇನಾ ನಾಯಕ ಇದೀಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಗಬ್ಬರ ಸಿಂಗ್‌ ಖ್ಯಾತಿಯ ನಿರ್ದೇಶ ಹರೀಶ್‌ ಶಂಕರ್‌ ಪವನ್‌ ಕಲ್ಯಾಣ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೆರಲು ಸಿದ್ಧವಾಗುತ್ತಿದೆ.

Written by - Krishna N K | Last Updated : Dec 11, 2022, 11:34 AM IST
  • ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್
  • ಜನಸೇನಾ ನಾಯಕ ಇದೀಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ
  • ಮೈತ್ರಿ ಮೂವಿ ಮೇಕರ್ಸ್ ಪವನ್‌ ಕಲ್ಯಾಣ್‌ ʼಉಸ್ತಾದ್ ಭಗತ್ ಸಿಂಗ್ʼ ಪೋಸ್ಟರ್‌ ಬಿಡುಗಡೆ ಮಾಡಿದೆ
ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ : ʼಉಸ್ತಾದ್ ಭಗತ್ ಸಿಂಗ್ʼ ಆದ ಪವರ್‌ಸ್ಟಾರ್‌..! title=

Ustaad Bhagat Singh Title Poster : ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್. ಸಾಲು ಸಾಲು ಸಿನಿಮಾಗಳ ಜೊತೆ ರಾಜಕೀಯದಲ್ಲಿ ಬ್ಯುಸಿಯಾಗಿರುವ ಜನಸೇನಾ ನಾಯಕ ಇದೀಗ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಗಬ್ಬರ ಸಿಂಗ್‌ ಖ್ಯಾತಿಯ ನಿರ್ದೇಶ ಹರೀಶ್‌ ಶಂಕರ್‌ ಪವನ್‌ ಕಲ್ಯಾಣ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೆರಲು ಸಿದ್ಧವಾಗುತ್ತಿದೆ.

ಆಂಧ್ರ ಪ್ರದೇಶ ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ಈಗಾಗಲೇ ಸಹಿ ಹಾಕಿರುವ ಪ್ರಾಜೆಕ್ಟ್‌ಗಳನು ಬಹುಬೇಗ ಮುಗಿಸಲು ಪವನ್ ನಿರ್ಧರಿಸಿದ್ದಾರೆಂದು ತೋರುತ್ತದೆ. ಇತ್ತೀಚೆಗಷ್ಟೇ ಹರಿಹರ ವೀರಮಲ್ಲು ಚಿತ್ರೀಕರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಗೊತ್ತೇ ಇದೆ. ಇದರ ನಡುವೆ ಪವರ್ ಸ್ಟಾರ್ ಎರಡು ದಶಕಗಳ ಹಿಂದೆ ಈ ಚಿತ್ರಕ್ಕಾಗಿ ಬದಿಗಿಟ್ಟ ತಮ್ಮ ಮಾರ್ಷಲ್ ಆರ್ಟ್ಸ್ ಕೌಶಲ್ಯವನ್ನು ಮತ್ತೇ ಚುರುಕುಗೊಳಿಸುತ್ತಿದ್ದಾರೆ.

ಇದನ್ನೂ ಓದಿ: ಅರ್ಮಾನ್ ಮಲಿಕ್ ಇಬ್ಬರು ಹೆಂಡತಿಯರು ಒಂದೇ ಬಾರಿಗೆ ಪ್ರಗ್ನೆಂಟ್‌ : ಹೇಗೆ ಸಾಧ್ಯ..!

ಗಬ್ಬರ್ ಸಿಂಗ್ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಹರೀಶ್ ಶಂಕರ್ ನಿರ್ದೇಶನದ ‘ಭಾವದಿಯುಡು ಭಗತ್ ಸಿಂಗ್’ ಚಿತ್ರಕ್ಕೆ ಪವನ್ ಒಮ್ಮೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆದರೆ ಇದುವರೆಗೂ ಈ ಸಿನಿಮಾ ಸೆಟ್ಟೇರಿರಲಿಲ್ಲ. ರಾಜಕೀಯ ಕಾರ್ಯಕ್ರಮಗಳು ಹಾಗೂ ಇತರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರಿಂದ ಈ ಸಿನಿಮಾಗೆ ಪವನ್‌ ಬ್ರೇಕ್ ನೀಡಿದ್ದರು. ಆದರೆ ಇತ್ತೀಚೆಗೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಅಪ್ಡೇಟ್ ನೀಡಿದ್ದು, ಬದ್ರಿ ಫ್ಯಾನ್ಸ್‌ಗೆ ಸಖತ್‌ ಖುಷಿ ನೀಡಿದೆ.

ಇನ್ನು ʼಭವಾದಿಯುಡು ಭಗತ್ ಸಿಂಗ್ʼ ಬದಲಿಗೆ ʼಉಸ್ತಾದ್ ಭಗತ್ ಸಿಂಗ್ʼ ಎಂದು ಮತ್ತೊಂದು ಶೀರ್ಷಿಕೆಯನ್ನು ಘೋಷಿಸಿದೆ. ಅದರಲ್ಲಿ ʼನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲʼ ಎಂಬ ಸಬ್‌ ಟೈಟಲ್‌ನ್ನು ಕೂಡಾ ನೀಡಲಾಗಿದೆ. ಪೋಸ್ಟರ್‌ನಲ್ಲಿ ಪವನ್ ಕಲ್ಯಾಣ್ ಒಂದು ಕೈಯಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ ಮತ್ತು ಇನ್ನೊಂದು ಕೈಯಲ್ಲಿ ಟೀ ಗ್ಲಾಸ್ ಹಿಡಿದು ಪವರ್ ಫುಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಗ್ರೌಂಡ್‌ನಲ್ಲಿ ವಿದ್ಯುತ್ ತಂತಿಗಳು ಮತ್ತು ವಿದ್ಯುತ್ ಉತ್ಪಾದಿಸುವ ಕೈಗಾರಿಕೆಗಳು ಕಂಡುಬರುತ್ತವೆ. ಆಕಾಶದಲ್ಲಿ ಮಿಂಚಿನ ಸಂಚಲನದ ನಡುವೆ ರಕ್ತದ ಬಣ್ಣದಲ್ಲಿ ಶೀರ್ಷಿಕೆ ಇದೆ.

ಇದನ್ನೂ ಓದಿ: ಟೀಸರ್ ಮೂಲಕ‌ ಸದ್ದು ಮಾಡುತ್ತಿದೆ GL0PIXS ʼಯದ್ಭಾವಂ ತದ್ಭವತಿʼ

ಇದು ಈ ಹಿಂದೆ ಬಿಡುಗಡೆಯಾದ ʼಭವಾದಿಯುಡು ಭಗತ್ ಸಿಂಗ್ʼ ಚಿತ್ರದ ಪೋಸ್ಟರ್‌ಗೆ ಹತ್ತಿರವಾಗಿದೆ. ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ. ಭಾನುವಾರ ಬೆಳಗ್ಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಟೈಟಲ್ ಪೋಸ್ಟರ್ ನೋಡಿ ಪವನ್ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಪವನ್ ಲುಕ್ ನೋಡಿ ಸಂಭ್ರಮಿಸುತ್ತಿದ್ದಾರೆ. ಥೇರಿ ಚಿತ್ರದ ರಿಮೇಕ್ ಆಗಿ ಈ ಸಿನಿಮಾ ತಯಾರಾಗುತ್ತಿದೆ ಎಂಬ ಸುದ್ದಿ ಕೂಡಾ ಫಿಲ್ಮ್‌ನಗರದಲ್ಲಿ ಕೇಳಿ ಬರುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News