ಅನಿರುದ್ಧ ʼಸೂರ್ಯವಂಶʼಕ್ಕೂ ವಿಘ್ನ : ಯಾರನ್ನೂ ಬ್ಯಾನ್ ಮಾಡೋಕೆ ಆಗಲ್ಲ ಎಂದ ಫಿಲಂ ಚೇಂಬರ್
ಸಾಕಷ್ಟು ವಿವಾದಗಳ ನಂತರ ಮತ್ತೆ ಧಾರಾವಾಹಿ ಮೂಲಕ ತೆರೆಗೆ ಬರಲು ಸಿದ್ಧರಾಗಿದ್ದ ನಟ ಅನಿರುದ್ಧ್ ಅವರಿಗೆ ಮತ್ತೇ ಸಂಕಷ್ಟ ಶುರುವಾಗಿದೆ. ಇದರಿಂದ ಬೇಸತ್ತ ಅವರು ಫಿಲ್ಮ ಚೇಂಬರ್ ಮೊರೆ ಹೋಗಿದ್ದಾರೆ. ಅಲ್ಲದೆ, ಸುದಿಗೋಷ್ಟಿ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ಸ್ಪಷ್ಟತೆ ನೀಡಿದ್ದಾರೆ.
ಬೆಂಗಳೂರು : ಸಾಕಷ್ಟು ವಿವಾದಗಳ ನಂತರ ಮತ್ತೆ ಧಾರಾವಾಹಿ ಮೂಲಕ ತೆರೆಗೆ ಬರಲು ಸಿದ್ಧರಾಗಿದ್ದ ನಟ ಅನಿರುದ್ಧ್ ಅವರಿಗೆ ಮತ್ತೇ ಸಂಕಷ್ಟ ಶುರುವಾಗಿದೆ. ಇದರಿಂದ ಬೇಸತ್ತ ಅವರು ಫಿಲ್ಮ ಚೇಂಬರ್ ಮೊರೆ ಹೋಗಿದ್ದಾರೆ. ಅಲ್ಲದೆ, ಸುದಿಗೋಷ್ಟಿ ನಡೆಸಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಜೊತೆ ಜೊತೆಯಲಿ ಧಾರಾವಾಹಿ ಸಂದರ್ಭದಲ್ಲಿ ನಡೆದ ಘಟನೆಯ ಕುರಿತು ಸ್ಪಷ್ಟತೆ ನೀಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅನಿರುದ್ಧ ಜಾಟ್ಕರ್, ನಾನು ಸಾಕಷ್ಟು ಲೇಖನ ಬರಿತೀನಿ ನಿಮ್ಗೆಲ್ಲಾ ಗೊತ್ತಿದೆ. ಹಲವು ಲೇಖನದಲ್ಲಿ ವಸುದೈವ ಕುಟುಂಬ ಅಂತ ಪದ ಬಳಸಿದ್ದೇನೆ. ಹಾಗೆಂದರೆ ಇಡೀ ವಿಶ್ವವೇ ನಮ್ಮ ಕುಟುಂಬ ಅಂತ ಅರ್ಥ. ಜೊತೆ ಜೊತೆಯಲಿ ಧಾರಾವಾಹಿ ಕೂಡ ನನ್ನ ಕುಟುಂಬ. ಮನೆಯಲ್ಲಿ ಸಮಸ್ಯೆ ಬರೋದು ಸಹಜ ಅದನ್ನ ಕುಟುಂಬ ಸದಸ್ಯರು ಬಗೆ ಹರಿಸಿಕೊಳ್ಳೊದು ಒಳ್ಳೆಯದು ಎಂದು ಧಾರಾವಾಹಿ ನಿರ್ಮಾಪಕರು ಮತ್ತು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರುನಾಡಲ್ಲಿ DBoss ʼಕ್ರಾಂತಿʼ ಅಬ್ಬರ ಶುರು : ನಾಳೆ ʼಧರಣಿʼ ಸಾಂಗ್ ರಿಲೀಸ್
ಅಲ್ಲದೆ, ಮಾತು ಮುಂದುವರೆಸಿದ ಅವರು, ಮನೆಯಲ್ಲಿ ಸಮಸ್ಯೆ ಬಂದಾಗ ಕುಟುಂಬಸ್ಥರನ್ನು ಕರೆದು ಮಾತನಾಡಿ ಬಗೆಹರಿಸಿಕೊಳ್ಳುವುದು ಒಳ್ಳೆಯದು, ಆದರೆ ಅವರು ನನ್ನನ್ನ ಕರೆದಿಲ್ಲ. ನಾನೆ ಹೋಗಿ ಮಾತಾಡೋಕೆ ಪ್ರಯತ್ನ ಪಟ್ಟರೂ ಸಹ ಅವರು ನನ್ನ ಫೋನ್ ಕಾಲ್ ರಿಸೀವ್ ಮಾಡ್ತೀಲ್ಲ. ಅದಕ್ಕೂ ಅವರು ರೆಸ್ಪಾನ್ಸ್ ಮಾಡಿಲ್ಲ.
ಅಲ್ಲದೆ, ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್‌ಗೆ ಕರೆ ಮಾಡಿದ್ದೇನೆ, ಅವರೂ ಸಹ ಆದರೆ ಅವರು ಯಾವುದೇ ರಿಪ್ಲೆ ಮಾಡಿಲ್ಲ ಮಾಡಿಲ್ಲ ಎಂದು ದೂರಿದರು.
ಯಾರನ್ನೂ ಬ್ಯಾನ್ ಮಾಡೋಕೆ ಆಗಲ್ಲ : ಇನ್ನು ಸುದ್ದಿಗೋಷ್ಟಿಯಲ್ಲಿದ್ದ ಹಿರಿಯ ನಟ ಸುಂದರ್ ರಾಜ್ ಅವರು ಮಾತನಾಡಿ, ಯಾರೂ ಯಾರನ್ನೂ ಬ್ಯಾನ್ ಮಾಡೋಕೆ ಆಗಲ್ಲ. ಕಿರುತೆರೆ ಸಿನಿಮಾ ಬಂದ ನಂತರ ಬಂದಿದ್ದು. ಇಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರೋದು ಸಹಜ. ಕಿರುತೆರೆ ನಿರ್ಮಾಪಕರು ಏಕ ಪಕ್ಷೀಯವಾಗಿ ಅನಿರುದ್ಧ್ ರನ್ನ ಬ್ಯಾನ್ ಮಾಡೋಕೆ ಇರ್ಧಾರ ಮಾಡಿದ್ದು ಸರಿ ಅಲ್ಲ. ಅನಿರುದ್ಧ್ ರನ್ನ ಅವರು ಏನನ್ನೂ ಕೇಳಲಿಲ್ಲ ಅಂತ ಹೇಳಿದ್ದಾರೆ. ಕಿರುತೆರೆ ಕೂಡ ಒಂದು ಸಂಸ್ಥೆ ಅವರು ಬ್ಯಾನ್ ನಿರ್ಧಾರ ತೆಗೆದುಕೊಳ್ಳಬಾರದು ಎಂದರು.
ಇದನ್ನೂ ಓದಿ: ನಂದಮುರಿ ಬಾಲಕೃಷ್ಣ, ಅನಿಲ್ ರವಿಪುಡಿ ಹೈ ವೋಲ್ಟೇಜ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ
ಬ್ಯಾನ್ ಪದ ಬಳಕೆ ಮಾಡಬಾರದು : ಇನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್ ಅವರು ಮಾತನಾಡಿ, ನಿರ್ಮಾಪಕ ಸಂಘದ ಪದಾಧಿಕಾರಿಗಳ ಜೊತೆ ಕಾನ್ಫರೆನ್ಸ್ ನಲ್ಲಿ ಮಾತುಕತೆ ಮಾಡಿದ್ದೇವೆ. ನಾಳೆ ಬೆಳಗ್ಗೆ ಫಿಲ್ಮ್ ಚೇಂಬರ್ ಗೆ ಬರ್ತೇವೆ ಎಂದಿದ್ದಾರೆ. ಅವರ ಜೊತೆಗೂ ಮಾತುಕಥೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಬ್ಯಾನ್ ಮಾಡೋದಕ್ಕೆ ಯಾರಿಗೂ ಅಧಿಕಾರ ಇಲ್ಲ. ಕಿರುತೆರೆ ಹಿರಿತೆರೆ ಎಲ್ಲಾ ಸಂಘಗಳು ಒಂದೇ, ಚಿತ್ರರಂಗದಲ್ಲಿ ಬ್ಯಾನ್ ಅನ್ನೋ ಪದವೇ ಇಲ್ಲ. ನಾವು ಬಳಸಲೂ ಭಾರದು, ಮಾಡಲೂ ಭಾರದು ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.