ಕರುನಾಡಲ್ಲಿ DBoss ʼಕ್ರಾಂತಿʼ ಅಬ್ಬರ ಶುರು : ನಾಳೆ ʼಧರಣಿʼ ಸಾಂಗ್‌ ರಿಲೀಸ್‌

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ತೆರೆ ಮೇಲೆ ಬರುವ ದಿನಗಳು ಹತ್ತಿರವಾಗುತ್ತಿವೆ. ಇದೀಗ ಡಿಬಾಸ್‌ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕಾಯ್ದಿದ್ದು, ಕ್ರಾಂತಿ ಸಿನಿಮಾದ ಧರಣಿ ಥೀಮ್‌ ಸಾಂಗ್‌ ನಾಳೆ ಬಿಡುಗಡೆಯಾಗಲಿದೆ. ಬರೀ ಟೈಟಲ್‌ನಿಂದಲೇ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ ಕ್ರಾಂತಿಗೆ ಈಗ ಈ ಸಾಂಗ್‌ ಬೂಸ್ಟ್‌ ನೀಡಲಿದೆ.  

Written by - Krishna N K | Last Updated : Dec 9, 2022, 06:32 PM IST
  • ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ತೆರೆ ಮೇಲೆ ಬರುವ ದಿನಗಳು ಹತ್ತಿರವಾಗುತ್ತಿವೆ
  • ಇದೀಗ ಡಿಬಾಸ್‌ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕಾಯ್ದಿದ್ದೆ
  • ಕ್ರಾಂತಿ ಸಿನಿಮಾದ ಧರಣಿ ಥೀಮ್‌ ಸಾಂಗ್‌ ನಾಳೆ ಬಿಡುಗಡೆಯಾಗಲಿದೆ
ಕರುನಾಡಲ್ಲಿ DBoss ʼಕ್ರಾಂತಿʼ ಅಬ್ಬರ ಶುರು : ನಾಳೆ ʼಧರಣಿʼ ಸಾಂಗ್‌ ರಿಲೀಸ್‌ title=

DBoss Kranti film song : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ತೆರೆ ಮೇಲೆ ಬರುವ ದಿನಗಳು ಹತ್ತಿರವಾಗುತ್ತಿವೆ. ಇದೀಗ ಡಿಬಾಸ್‌ ಅಭಿಮಾನಿಗಳಿಗೊಂದು ಸಿಹಿ ಸುದ್ದಿ ಕಾಯ್ದಿದ್ದು, ಕ್ರಾಂತಿ ಸಿನಿಮಾದ ಧರಣಿ ಥೀಮ್‌ ಸಾಂಗ್‌ ನಾಳೆ ಬಿಡುಗಡೆಯಾಗಲಿದೆ. ಬರೀ ಟೈಟಲ್‌ನಿಂದಲೇ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದ ಕ್ರಾಂತಿಗೆ ಈಗ ಈ ಸಾಂಗ್‌ ಬೂಸ್ಟ್‌ ನೀಡಲಿದೆ.  

ದರ್ಶನ್‌ ಅಭಿಮಾನಿಗಳೇ ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಈ ನಡುವೆ ಯಾವುದೇ ಗಣ್ಯ ವ್ಯಕ್ತಿಗಳ ಕೈಯಿಂದ ಅದ್ಧೂರಿ ವೇದಿಕೆ ಹಾಕಿ ಸಾಂಗ್‌ ರಿಲೀಸ್‌ ಮಾಡಲ್ಲ. ಬದಲಿದೆ ನನ್ನ ಸೆಲೆಬ್ರೆಟಿಗಳಿಂದ ಸಾಂಗ್‌ ರಿಲೀಸ್‌ ಮಾಡಿಸುತ್ತೇನೆ ಎಂದು ಹೇಳಿದ ಮಾತಿನಂತೆ ಯಜಮಾನ ನಾಳೆ ತಮ್ಮ ಫ್ಯಾನ್‌ಗಳಿಂದ ಹಾಡನ್ನು ಬಿಡುಗಡೆ ಮಾಡಿಸುತ್ತಿದ್ದಾರೆ. 

ಇದನ್ನೂ ಓದಿ: ನಂದಮುರಿ ಬಾಲಕೃಷ್ಣ, ಅನಿಲ್ ರವಿಪುಡಿ ಹೈ ವೋಲ್ಟೇಜ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಚಾಲನೆ

ನಾಳೆ ಅಂದ್ರೆ ಡಿಸೆಂಬರ್‌ 10 ಸಂಜೆ 7ಕ್ಕೆ ವಿಜಯ್‌ ಟೆಂಟ್‌ ಹೌಸ್‌, ಹಿನಕಲ್‌ ಹುಣಸೂರು ಮುಖ್ಯರಸ್ತೆ, ಮೈಸೂರಿನಲ್ಲಿ ಅದ್ದೂರಿಯಾಗಿ ಕ್ರಾಂತಿ ಸಿನಿಮಾದ ಧರಣಿ ಸಾಂಗ್‌ ಬಿಡುಗಡೆಯಾಗುತ್ತಿದೆ. ಈ ಹಾಡನ್ನು ಡಿಬಿಟ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ನೋಡಬಹುದುದಾಗಿದೆ. ಇನ್ನು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕ್ರಾಂತಿ ಸಿನಿಮಾ ಬಿಡುಗಡೆಯಾಗಲಿದೆ. ದರ್ಶನ್‌ ಜೊತೆಗೆ ರಚಿತಾ ರಾಮ್‌, ವಿ.ರವಿಚಂದ್ರನ್‌, ಬಹುಭಾಷಾ ನಟ ಸಂಪತ್‌ ರಾಜ್‌ ನಟಿಸಿದ್ದಾರೆ. ಜನವರಿ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ವಿ. ಹರಿಕೃಷ್ಣ ನಿರ್ದೇಶನದ ʼಕ್ರಾಂತಿʼಗೆ ಶೈಲಜಾ ನಾಗ್ ಹಾಗೂ ಬಿ. ಸುರೇಶ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News