Actor Arvind Swamy: ಅರವಿಂದ ಸ್ವಾಮಿ ಒಂದು ಕಾಲದಲ್ಲಿ ನಿಜವಾಗಿಯೂ ನ್ಯಾಷನಲ್ ಕ್ರಷ್ ಆಗಿದ್ದವರು. ‘ರೋಜಾ’ ಸಿನಿಮಾ ರಿಲೀಸ್ ಆದಾಗ ಅರವಿಂದ ಸ್ವಾಮಿ ನೋಡೋಕೆ ಕಾಲೇಜು ಹುಡುಗಿಯರು ಮುಗಿಬೀಳುತ್ತಿದ್ದರು. ಆಂಟಿಯರಿಗೂ ಅರವಿಂದ ಸ್ವಾಮಿ ಅಚ್ಚುಮೆಚ್ಚಾಗಿದ್ದರು. ಅವರನ್ನು ಒಪ್ಪದ ಹುಡುಗಿಯರು-ಮಹಿಳೆಯರೆ ಇಲ್ಲ ಎನ್ನುವಂತಿತ್ತು ಕ್ರೇಜು. ಅರವಿಂದ ಸ್ವಾಮಿ ಅವರನ್ನು ಮದುವೆ ಮಾಡಿಕೊಳ್ಳಲು ಟಾಪ್ ಹೀರೋಯಿನ್ ಗಳು ಕ್ಯೂ ನಿಂತಿದ್ದರು. ಅಂಥ ಅರವಿಂದಸ್ವಾಮಿ ಅವರನ್ನು ಹೆಂಡತಿ ಬಿಟ್ಟುಹೋದರು ಎನ್ನುವುದೇ ಕುತೂಹಲಕಾರಿ ವಿಷಯ.


COMMERCIAL BREAK
SCROLL TO CONTINUE READING

ಅರವಿಂದ ಸ್ವಾಮಿ ಮೊದಲು ನಟಿಸಿದ್ದು ‘ತಲಪತಿ’ ಎನ್ನುವ ಸಿನಿಮಾದಲ್ಲಿ. ಆದರೆ ಅವರಿಗೆ ಸಿಕ್ಕಾಪಟ್ಟೆ ಹೆಸರು ಮತ್ತು ಫ್ಯಾನ್ಸ್ ತಂದುಕೊಟ್ಟದ್ದು 1992ರಲ್ಲಿ ರಿಲೀಸ್ ಆದ ‘ರೋಜಾ’ ಸಿನಿಮಾ. ಜನಪ್ರಿಯತೆ ಎಂದರೆ ಅಂತಿಂಥಾ ಜನಪ್ರಿಯತೆ ಅಲ್ಲ. ಇಡೀ ದೇಶಾದ್ಯಂತ ಹುಡುಗಿಯರು ಅರವಿಂದ ಸ್ವಾಮಿ ಅವರಿಗಾಗಿ ಪ್ರಾಣ ಬಿಡುವಷ್ಟು. ಸುರದ್ರೂಪಿ ಅರವಿಂದ ಸ್ವಾಮಿ ರಾತ್ರೋರಾತ್ರಿ ಕೋಟ್ಯಂತರ ಮಹಿಳಾ ಅಭಿಮಾನಿಗಳನ್ನು ತಮ್ಮ ಖಾತೆಗೆ ಜಮೆ ಮಾಡಿಕೊಂಡುಬಿಟ್ಟಿದ್ದರು. 


ಇದಾದ ಮೇಲೆ 1995ರಲ್ಲಿ ‘ಬಾಂಬೆ’ ಸಿನಿಮಾ ಬಿಡುಗಡೆಯಾಯಿತು. ಅದು ಇನ್ನೊಂದು ಸೂಪರ್ ಹಿಟ್ ಚಿತ್ರ. ಅರವಿಂದ ಸ್ವಾಮಿ ಅವರಿಗೆ ಇನ್ನೊಂದಿಷ್ಟು ಅಭಿಮಾನಿಗಳನ್ನು ಹುಟ್ಟುಹಾಕಿತು. ಹೀಗೆ ಸಿನಿಮಾ ರಂಗದಲ್ಲಿ ಸ್ಟಾರ್ ನಟರನ್ನು ಮೀರಿಸಿ ಉತ್ತುಂಗದಲ್ಲಿ ಇದ್ದಾಗಲೇ 1994ರಲ್ಲಿ ಗಾಯತ್ರಿ ರಾಮಸ್ವಾಮಿ ಎಂಬುವವರ ಜೊತೆ ಅರವಿಂದಸ್ವಾಮಿ ಮದುವೆಯಾದರು.


ಇದನ್ನೂ ಓದಿ- ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?


ಸಂಸಾರ ಸುಂದರವಾಗಿತ್ತು. ಅರವಿಂದ ಸ್ವಾಮಿ ಮತ್ತು ಗಾಯತ್ರಿ ಜೋಡಿಗೆ 1996ರಲ್ಲಿ ಅಧಿರಾ ಎಂಬ ಪುತ್ರಿ ಮತ್ತು 2000ದಲ್ಲಿ ರುದ್ರ ಎಂಬ ಪುತ್ರ ಹುಟ್ಟಿದರು. ಎಲ್ಲವೂ ಚೆನ್ನಾಗಿದೆ ಎನ್ನುವ ಹೊತ್ತಿನಲ್ಲೇ ಸ್ವಾಮಿ ಮತ್ತು ಗಾಯತ್ರಿ ಅವರ ನಡುವೆ ಭಿನ್ನಾಭಿಪ್ರಾಯ ಬಂದು ಅದು ಡಿವೋರ್ಸ್ ಪಡೆಯುವ ಹಂತ ತಲುಪಿತು. 2010ರಲ್ಲಿ ಇಬ್ಬರು ವಿಚ್ಛೇದನ ಪಡೆದರು. ಆ ಸಂದರ್ಭದಲ್ಲಿ ಬಹಳ ಅಚ್ಚರಿ ಎನ್ನುವಂತೆ ಕೋರ್ಟ್ ಎರಡೂ ಮಕ್ಕಳ ಹೊಣೆಗಾರಿಕೆಯನ್ನು ಅರವಿಂದ ಸ್ವಾಮಿ ಅವರಿಗೆ ನೀಡಿತು.


ಇದಕ್ಕೂ ಮೊದಲು 2002ರಿಂದ 2010ರವರೆಗೆ ಗಾಯತ್ರಿ ಮತ್ತು ಅರವಿಂದ ಸ್ವಾಮಿ ಪ್ರತ್ಯೇಕವಾಗಿಯೇ ವಾಸವಿದ್ದರು. ಅಷ್ಟೊತ್ತಿಗಾಗಲೇ ಅರವಿಂದ ಸ್ವಾಮಿ ಸಿನಿಮಾ ರಂಗದಲ್ಲೂ ವೈಫಲ್ಯ ಕಂಡಿದ್ದರು. ಏಕಕಾಲಕ್ಕೆ ಎರಡೆರಡು ಹೊಡೆತ ಬಿದ್ದಿದ್ದರೂ ಆಗಲೂ ಕಡು ಕಷ್ಟದಲ್ಲಿ ಇಬ್ಬರು ಮಕ್ಕಳನ್ನು ಸಾಕಿ ಸಲುಹಿದರು. ಮಕ್ಕಳಿಗೆ ತಾಯಿ ಇಲ್ಲ ಎನ್ನುವ ಕೊರಗು ಬಾರದಂತೆ ನೋಡಿಕೊಂಡರು. ಮಗಳಿಗೆ 16 ಮತ್ತು ಮಗನಿಗೆ 12 ವರ್ಷ ತುಂಬುವವರೆಗೂ ಅರವಿಂದಸ್ವಾಮಿ ಕಷ್ಟಪಟ್ಟು ಸಾಕಿದ್ದಾರೆ. 


ಇದನ್ನೂ ಓದಿ- ನಟ ದರ್ಶನ್‌ ಆಸ್ಪತ್ರೆಯಲ್ಲಿರುವ ಎಕ್ಸ್‌ಕ್ಲ್ಯೂಸಿವ್‌ ಫೋಟೋ ವೈರಲ್‌... ದಾಸನ ಸ್ಥಿತಿ ಕಂಡು ಫ್ಯಾನ್ಸ್‌ ಕಣ್ಣೀರು..?!


ಇದಾದಮೇಲೆ ಅರವಿಂದ ಸ್ವಾಮಿ 2012ರರಲ್ಲಿ ಅಪರ್ಣಾ ಮುಖರ್ಜಿ ಅವರನ್ನು ವಿವಾಹವಾದರು. ಈಗಲೂ ಅವರ ಜೊತೆಗೆ ಚೆನ್ನಾಗಿ ಇದ್ದಾರೆ. ತಮ್ಮ ಸಿನಿಮಾಗಳು ಸೋಲಲು ಶುರುವಾದ ಮೇಲೆ ಬೇರೆ ಉದ್ಯಮದ ಬಗ್ಗೆ ತೊಡಗಿಸಿಕೊಂಡ ಅರವಿಂದ ಸ್ವಾಮಿ ಈಗ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಅವರ ‘ಮೇಯಳಗನ್’ ಸಿನಿಮಾ ಸಿಕ್ಕಾಪಟ್ಟೆ ಸಕ್ಸಸ್ ಆಗಿದೆ. ಆದರೆ ಈಗಲೂ ಗಾಯತ್ರಿ ರಾಮಸ್ವಾಮಿ ಅವರು ಅರವಿಂದ ಸ್ವಾಮಿ ಅವರನ್ನು ಏಕೆ ಬಿಟ್ಟುಹೋದರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.