ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?

Abhishek Bachchan Tips To Married Men: ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

Written by - Yashaswini V | Last Updated : Dec 2, 2024, 09:36 AM IST
  • ಪ್ರಶಸ್ತಿ ಕಾರ್ಯಕ್ರಮವೊದರಲ್ಲಿ ಅಭಿಷೇಕ್ ಬಚ್ಚನ್ ಮೇಲೆ ಸಭಿಕರೊಬ್ಬರು ‘ವಿವಾಹಿತ ಪುರುಷರ’ ಬಗ್ಗೆ ಗೂಗ್ಲಿ ಹಾಕಿದ್ದಾರೆ.
  • ವಿಚಲಿತರಾದ ಅಭಿಷೇಕ್ ಬಚ್ಚನ್, ‘ಹೆಂಡತಿ ಹೇಳಿದಂತೆ ಮಾಡಿ ಅಷ್ಟೇ...’ ಎಂದು ಡಿಪ್ಲೊಮೆಟಿಕ್ ಉತ್ತರ ನೀಡಿದ್ದಾರೆ.
  • ಅನಂತ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆ ವೇಳೆ ಹುಟ್ಟಿಕೊಂಡ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಡಿವೋರ್ಸ್ ರೂಮರ್ಸ್.
ಐಶ್ವರ್ಯ ರೈ ಜೊತೆಗಿನ ಡಿವೋರ್ಸ್ ರೂಮರ್ಸ್ ನಡುವೆ ‘ಮದುವೆಯಾದ ಗಂಡಸರಿಗೆ’ ಅಭಿಷೇಕ್ ಬಚ್ಚನ್ ನೀಡಿದ ಟಿಪ್ಸ್ ಏನು ಗೊತ್ತಾ?

Abhishek Bachchan Tips To Married Men: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ದೊಡ್ಡ ಬಿರುಕು ಮೂಡಿದ್ದು ಶೀಘ್ರವೇ ಅವರಿಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎನ್ನುವ ರೂಮರ್ಸ್ ದಿನಕ್ಕೊಂದು ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಇದರ ನಡುವೆ ಭಾನುವಾರ ರಾತ್ರಿ ಮುಂಬೈನಲ್ಲಿ ನಡೆದ ಪ್ರಶಸ್ತಿ ಕಾರ್ಯಕ್ರಮವೊದರಲ್ಲಿ ಅಭಿಷೇಕ್ ಬಚ್ಚನ್ ಅವರು ‘ಮದುವೆಯಾದ ಗಂಡಸರಿಗೆ’ ಟಿಪ್ಸ್ ನೀಡಿದ್ದಾರೆ.

Add Zee News as a Preferred Source

ಅಭಿಷೇಕ್ ಬಚ್ಚನ್ ಕಾರ್ಯಕ್ರಮದಲ್ಲಿ ವಿಹಾಹಿತ ಪುರುಷರು ಏನು ಮಾಡಬೇಕು ಎಂಬ ಕುರಿತಾಗಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಭಿಕರೊಬ್ಬರು ‘ನೀವು ಇಷ್ಟು ಚೆನ್ನಾಗಿ ನಟನೆ ಮಾಡಿದರೂ ವಿಮರ್ಶಕರು ಟೀಕೆ ಮಾಡುತ್ತಾರಲ್ಲಾ?’ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸಿದ ಅಭಿಷೇಕ್ ಬಚ್ಚನ್ ‘ಇದು ತುಂಬಾ ಸಿಂಪಲ್ ವಿಷಯ. ಇದಕ್ಕೂ ನಮಗೂ ಸಂಬಂಧ ಇಲ್ಲ. ನಾವು ನಿರ್ದೇಶಕರು ಏನು ಹೇಳುತ್ತಾರೋ ಹಾಗೆ ಮಾಡಿ ಮನೆಗೆ ಹೋಗುತ್ತಿರುತ್ತೇವೆ ಅಷ್ಟೇ…’ ಎಂದು ಹೇಳಿದ್ದಾರೆ. 

ಇದನ್ನೂ ಓದಿ- ಬಿಗ್‌ ಬಾಸ್‌ ಶಾಕಿಂಗ್‌ ಎಲಿಮಿನೇಷನ್.. ಸೌಂದರ್ಯದಿಂದ ಯುವಕರ ಮನಗೆದ್ದ ಈ‌ ಸ್ಪರ್ಧಿಯೇ ಔಟ್, ಫೈನಲಿಸ್ಟ್‌ ಆಗಬಹುದು ಎಂದುಕೊಂಡವರೇ ಎಲಿಮಿನೇಟ್!

ವಿಷಯ ಅಷ್ಟಕ್ಕೆ ನಿಲ್ಲಲು ಸಾಧ್ಯವೇ? ಅದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಈಗಾಗಲೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ. ಅವರಿಬ್ಬರ ಸಂಬಂಧ ಸುಧಾರಣೆ ಆಗಲು ಸಾಧ್ಯವೇ ಇಲ್ಲ. ಅಭಿಷೇಕ್ ಬಚ್ಚನ್ ಮಗಳು ಆರಾಧ್ಯಾ ಹುಟ್ಟುಹಬ್ಬಕ್ಕೂ ಹೋಗಿಲ್ಲ. ಅಷ್ಟರಮಟ್ಟಿಗೆ ಸಂಬಂಧ ಹಳಸಿದೆ ಎಂಬಿತ್ಯಾದಿ ಸುದ್ದಿಗಳು ಶರವೇಗದಲ್ಲಿ ಹರಿದಾಡುತ್ತಿರುವ ಈ ಸಂದರ್ಭದಲ್ಲಿ ಸಭಿಕರೊಬ್ಬರು ‘ಮದುವೆಯಾದ ಪುರುಷರ ಬಗ್ಗೆ ನಿಮ್ಮ ಅನಿಸಿಕೆ ಏನು?’ ಎಂಬ ಘನ ಪ್ರಶ್ನೆಯೊಂದನ್ನು ತೂರಿಬಿಟ್ಟಿದ್ದಾರೆ.

‘ವಿವಾಹಿತ ಪುರುಷರ’ ಬಗ್ಗೆ ಕೇಳಲಾದ ಪ್ರಶ್ನೆಗೆ ಸ್ವಲ್ಪ ವಿಚಲಿತರಾದ ಅಭಿಷೇಕ್ ಬಚ್ಚನ್, ‘ಹಾ… ಎಲ್ಲಾ ವಿವಾಹ ಪುರುಷರು ಅದನ್ನೇ ಮಾಡಬೇಕು. ನೀವು ನಿಮ್ಮ ಹೆಂಡತಿ ಹೇಳಿದಂತೆ ಮಾಡಿ...’ ಎಂದು ಡಿಪ್ಲೊಮೆಟಿಕ್ ಉತ್ತರ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ನೆಟ್ಟಿಗರು ವೆರೈಟಿ ವೆರೈಟಿ ಕಾಮೆಂಟ್ ಹಾಕುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Filmfare (@filmfare)

ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಅಭಿಷೇಕ್ ಬಚ್ಚನ್ ಸೇರಿದಂತೆ ಅಮಿತಾಬ್ ಬಚ್ಚನ್ ಕುಟುಂಬ ಹಾಗೂ ಐಶ್ವರ್ಯ ರೈ ಪ್ರತ್ಯೇಕವಾಗಿ ಭಾಗವಹಿಸಿದಾಗ ಶುರುವಾಯಿತು ಈ ರೂಮರ್ಸ್. ಅದಾದ ಮೇಲೆ ಪುತ್ರಿ ಆರಾಧ್ಯಾ ಬಚ್ಚನ್ ಬರ್ತಡೇಯಲ್ಲಿ ಅಭಿಷೇಕ್ ಬಚ್ಚನ್ ಹಾಜರಿರಲಿಲ್ಲ. ಆಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವಿನ ಡಿವೋರ್ಸ್ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿತ್ತು. ಇದಾದ ಮೇಲೆ ಅಭಿಷೇಕ್ ಬಚ್ಚನ್ ಅವರಾಗಲಿ, ಐಶ್ವರ್ಯ ರೈ ಅವರಾಗಲಿ ತಮ್ಮ ವಿಚ್ಛೇದನ ವದಂತಿಗಳ ಬಗ್ಗೆ ಮೌನ ಮುರಿದಿಲ್ಲ. ಆದರೂ ರೂಮರ್ಸ್ ಮಾತ್ರ ಒಂದರ ಮೇಲೊಂದು ಹುಟ್ಟಿಕೊಳ್ಳುತ್ತಿವೆ. 

ಇದನ್ನೂ ಓದಿ- 'ನನ್ನನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಿ'.. ಧಿಡೀರ್‌ ಶೋಭಾ ಶೆಟ್ಟಿ ಈ ರೀತಿ ಹೇಳಿದ್ದೇಕೆ? ಅಷ್ಟಕ್ಕೂ ದೊಡ್ಮನೆಯಲ್ಲಿ ಅಂತದ್ದೇನಾಯ್ತು?!

ತಮ್ಮ ಪುತ್ರನ ವೈವಾಹಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಷ್ಟೆಲ್ಲಾ ರಾದ್ಧಾಂತ ಆಗುತ್ತಿರುವುದರಿಂದ ಬೇಸತ್ತ ಬಿಗ್ ಬಿ ಅಮಿತಾಬ್ ಬಚ್ಚನ್ ಇತ್ತೀಚಿಗೆ ಒಂದು ಪೋಸ್ಟ್ ಮಾಡಿದ್ದರು. ‘ತಾನು ಸಾಮಾನ್ಯವಾಗಿ ಕುಟುಂಬದ ಬಗ್ಗೆ ತುಂಬಾ ವಿರಳವಾಗಿ ಮಾತನಾಡುತ್ತೇನೆ. ಏಕೆಂದರೆ ಅದು ನನ್ನ ವೈಯಕ್ತಿಕ ಡೊಮೇನ್. ಆದುದರಿಂದ ಅದರ ಗೌಪ್ಯತೆಯನ್ನು ಕಾಪಾಡುತ್ತೇನೆ’ ಎಂದು ಹೇಳಿದ್ದರು. ಆದರೆ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ನಡುವಿನ ವಿಚ್ಛೇದನ ವದಂತಿಗೆ ಮಾತ್ರ ವಿರಾಮ ಸಿಕ್ಕಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News