Actor Chikkanna: ಕನ್ನಡದ ಸ್ಟಾರ್ ಹಾಸ್ಯನಟ (Kannada star comedian) ಅಂತ ಬಂದಾಗ ಟ್ರೆಂಡಿಂಗ್ ನಲ್ಲಿ ಇರೋರು ಅಂದ್ರೆ ನಟ ಚಿಕ್ಕಣ್ಣ.  ಇದೀಗ ಹೀರೋ ಆಗಿ ಮಾಡಿದ ಮೊದಲ ಸಿನಿಮಾ ಉಪಾಧ್ಯಕ್ಷ ಕೂಡ ಗ್ರಾಂಡ್ ಸಕ್ಸಸ್ ಕಂಡಿದೆ. ಮುಂದೆ ಯಾವ ಸಿನಿಮಾ ಮಾಡುತ್ತಾರೆ ಉಪಾಧ್ಯಕ್ಷ ಚಿಕ್ಕಣ್ಣ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.  


COMMERCIAL BREAK
SCROLL TO CONTINUE READING

ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ (Director AP Arjun) ಅವರ ನಿರ್ಮಾಣದಲ್ಲಿ ಕೆರೆಬೇಟೆ ಸಿನಿಮಾ ಡೈರೆಕ್ಟರ್ ರಾಜ್ ಗುರು ನಿರ್ದೇಶನದ ಸಿನಿಮಾದಲ್ಲಿ ಚಿಕ್ಕಣ್ಣ ನಟಿಸೋದು ಕನ್ಫರ್ಮ್ ಆಗಿದೆ.  ಅಧಿಕೃತ ಮೂಲಗಳಿಂದ ಸಿಕ್ಕಿರೋ ಮಾಹಿತಿ ಪ್ರಕಾರ ಈಗ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಆಗುತ್ತಿದೆ. 


ಇದನ್ನೂ ಓದಿ- Keerti suresh : ತೂಕ ಇಳಿಸಿಕೊಳ್ಳಲು ಕೀರ್ತಿ ಸುರೇಶ್ ಏನು ಮಾಡ್ತಾರೆ ಗೊತ್ತಾ?


ಇನ್ನೂ ಚಿಕ್ಕಣ್ಣನಿಗೆ (Chikkanna) ಈ ಸಿನಿಮಾದಲ್ಲಿ ಯಾರು ಹೀರೋಯಿನ್ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.  ತಾರಾಬಳಗ ಹೇಗಿರುತ್ತೆ,  ಯಾರೆಲ್ಲ ಇರುತ್ತಾರೆ ಅನ್ನೋದು ಕೂಡ ಪಕ್ಕಾ ಆಗಿಲ್ಲ.  ಆದರೆ, ಚಿಕ್ಕಣ್ಣ ಸ್ಕ್ರಿಪ್ಟ್ ಓಕೆ ಮಾಡಿ  2ನೇ ಬಾರಿಗೆ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿಯಲು ಸಿದ್ಧತೆ ಮಾತ್ರ ಜೋರಾಗೆ ಮಾಡಿಕೊಂಡಿದ್ದಾರೆ. 


10 ವರ್ಷಗಳ ಹಿಂದೆ ಬಂದಿದ್ದ 'ಅಧ್ಯಕ್ಷ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ಉಪಾಧ್ಯಕ್ಷ ಆಗಿ ಚಿಕ್ಕಣ್ಣ ನಟಿಸಿದ್ದರು. ಶರಣ್ ಜೊತೆ ಜೊತೆಗೆ ಸಾಗುವ ಪಾತ್ರದಲ್ಲಿ ಒಳ್ಳೆ ಅಂಕ ಗಿಟ್ಟಿಸಿದ್ದರು. ದಶಕದ ಬಳಿಕ ಅದೇ ಕಥೆಯನ್ನು ಬೇರೆಯದ್ದೇ ರೂಪದಲ್ಲಿ 'ಉಪಾಧ್ಯಕ್ಷ'ನ ಪಾತ್ರವನ್ನೇ ಲೀಡ್ ಮಾಡಿ ಕಥೆ ಹೇಳಲಾಗಿತ್ತು. ಜನವರಿ 26ಕ್ಕೆ ಸಿನಿಮಾ ತೆರೆಗೆ ಬಂದಿತ್ತು.


ಇದನ್ನೂ ಓದಿ- ₹ 2 ಕೋಟಿ ಮೌಲ್ಯದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಹೊಸ ಕಾರು ಇಲ್ಲಿದೆ ನೋಡಿ....


ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ಉಪಾಧ್ಯಕ್ಷ' ಚಿತ್ರದಲ್ಲಿ ಕಿರುತೆರೆ ನಟಿ ಮಲೈಕಾ ನಾಯಕಿಯಾಗಿ ಮಿಂಚಿದ್ದರು. ಚಿಕ್ಕಣ್ಣ ತಮ್ಮ ಕಾಮಿಡಿ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿ ರಂಜಿಸಿದ್ದರು. ಆರ್ಮುಗ ರವಿಶಂಕರ್, ಸಾಧು ಕೋಕಿಲ, ವೀಣಾ ಸುಂದರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ವರ್ಷ ಮೊದಲ ಹಿಟ್ 'ಉಪಾಧ್ಯಕ್ಷ' ಎನಿಸಿಕೊಂಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.