Actor Darshan Health updates : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಹಕ್ಕಿಯಾಗಿದ್ದ ದರ್ಶನ್ ಗೆ ಹೈಕೋರ್ಟ್ ರಿಲೀಫ್ ನೀಡಿತ್ತು. ಬೆನ್ನು ಹುರಿಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಅಂತಾ ಹೈಕೋರ್ಟ್ ನಿಂದ ಬೇಲ್ ಪಡೆದಿದ್ದ ಡೆವಿಲ್, ರಿಲೀಸ್ ಆಗಿ ಎರಡು ದಿನದ ಬಳಿಕ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.‌ 


COMMERCIAL BREAK
SCROLL TO CONTINUE READING

ಹೌದು.. ಇಂದು ಮಧ್ಯಾಹ್ನ 2.30 ರ ಸುಮಾರಿಗೆ ಹೊಸಕೆರೆಹಳ್ಲಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಮನೆಯಿಂದ ಪತ್ನಿ ಹಾಗೂ ಗೆಳೆಯ ಧನ್ವೀರ್ ಜೊತೆ ಆಸ್ಪತ್ರೆಗೆ ಹೊರಟ ದಾಸ 3  ಗಂಟೆ ಸುಮಾರಿಗೆ ಕೆಂಗೇರಿ ಬಳಿಯಿರುವ ಬಿಜಿಎಸ್ ಆಸ್ಪತ್ರೆ ತಲುಪಿದ್ರು. ತುಂಬಾ ಸೊರಗಿದಂತೆ ಕಂಡ ದರ್ಶನ್ ಕುಂಟುತ್ತಲೇ ಆಸ್ಪತ್ರೆ ಒಳಗೆ ಹೋದ್ರು. 


ಇದನ್ನೂ ಓದಿ:ನಿಮ್ಗೆ ಗೊತ್ತೆ..? Jr NTR ಮತ್ತು ಕಲ್ಯಾಣ್‌ ರಾಮ್‌ ಹೆತ್ತ ತಾಯಂದಿರು ಬೇರೆ ಬೇರೆ..! ಆದ್ರೂ ರಾಮ-ಲಕ್ಷ್ಮಣರಂತಿದ್ದಾರೆ..


ಇನ್ನೂ‌ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ಯಾವಾಗ ದಾಖಲಾಗುತ್ತಾರೆ ಎಂಬುದು ಗೊತ್ತಾಯಿತೋ ಆಸ್ಪತ್ರೆ ಬಳಿ ಅಭಿಮಾನಿಗಳು ಜಮಾಯಿಸಿದ್ರು. ಯಾವುದೇ ಗಲಾಟೆ ಆಗಬಾರದು ಎಂಬ ಕಾರಣಕ್ಕೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ದರ್ಶನ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನರರೋಗ ತಜ್ಞ ನವೀನ್ ಪ್ರಾಥಮಿಕ ಹಂತದ ತಪಾಸಣೆ ನಡೆಸಿ ಮಾಧ್ಯಮಗಳಿಗೆ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ಕೊಟ್ರು.


ದರ್ಶನ್ ಬೆನ್ನು ನೋವು ಅಂತ ಅಡ್ಮಿಟ್ ಆಗಿದ್ದಾರೆ. ಅವರಿಗೆ ಕಾಲಿನ ನೋವು ಹೆಚ್ಚಾಗಿದ್ದು, ಎಲ್ಲ ರೀತಿ ಟೆಸ್ಟ್ ಮಾಡಬೇಕಿದೆ. ಸದ್ಯ ಎಡಗಾಲು ತುಂಬಾ ನೋವಿದ್ದು ಸ್ವಲ್ಪ ಸ್ಪರ್ಶವನ್ನ ಕಳೆದುಕೊಂಡಿದೆ. 48 ಗಂಟೆಗಳಲ್ಲಿ ಎಲ್ಲಾ ವರದಿಗಳು ಬರಲಿದ್ದು, ರಕ್ತಪರೀಕ್ಷೆ MRI ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆ ನಡೆಸಲಾಗುತ್ತದೆ. ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲಿ ಇರುತ್ತಾರೆ ಎಂದರು.


ಇದನ್ನೂ ಓದಿ:ದರ್ಶನ್‌ ಮತ್ತೆ ಜೈಲಿಗೆ..!? ʼಡೆವಿಲ್‌ʼನನ್ನು ಕಂಬಿಹಿಂದೆ ತಳ್ಳೋಕೆ ಪೊಲೀಸ್‌ ಮೆಘಾ ಪ್ಲಾನ್‌ 


ಒಟ್ಟಿನಲ್ಲಿ ಒಂದು ಕಡೆ ಆರೋಗ್ಯ ಸಮಸ್ಯೆ, ಮತ್ತೊಂದು ಕಡೆ ಕೊಲೆ  ಕೇಸ್ ನಿಂದ ಹೇಗಪ್ಪ ಎಂಬ ಚಿಂತನೆಯಲ್ಲಿ ದರ್ಶನ್ ಇದ್ದಾರೆ. ಮತ್ತೊಂದು ಕಡೆ ದಾಸನಿಗೆ ಮತ್ತೆ ಶಾಕ್ ಕೊಡಲು ಪೊಲೀಸರು ಮುಂದಾಗಿದ್ದು, ಕಾನೂನು ತಜ್ಞರ ಸಲಹೆ ಪಡೆದು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ.ಅದೆನೇ ಇರ್ಲಿ ಸ್ಟಾರ್ ನಟನಾಗಿ ಮೆರೆದ ನಟ ಕೋಪದ ಕೈಗೆ ಬುದ್ದಿ ಕೊಟ್ಟು ಈ ರೀತಿ ಪಡಿಪಾಟಲು ಅನುಭವಿಸುತ್ತಿರುವುದು ಮಾತ್ರ ದುರಂತವೇ ಸರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ